ಕೆಜಿಎಫ್ ಚಾಪ್ಟರ್ 2 vs ಬಾಹುಬಲಿ 2 vs RRR : ಮೊದಲ 3 ದಿನಗಳ ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್

28-04-22 05:43 pm       Source: Film Beat   ಸಿನಿಮಾ

ಪ್ಯಾನ್ ಇಂಡಿಯಾ ಚಿತ್ರಗಳಾದ ಕೆಜಿಎಫ್ ಚಾಪ್ಟರ್ 2, RRR ಮತ್ತು ಬಾಹುಬಲಿ 2 ಚಿತ್ರಗಳ ಮೊದಲ ಮೂರು ದಿನದ ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ.

1. ಕೆಜಿಎಫ್ ಚಾಪ್ಟರ್ 2 ಮೊದಲ ಮೂರು ದಿನಗಳ ಕಲೆಕ್ಷನ್

ಕೆಜಿಎಫ್ ಚಾಪ್ಟರ್ 2 ಚಿತ್ರ ಮೊದಲ ಮೂರು ದಿನಗಳಲ್ಲಿ ಸುಮಾರು 430 ಕೋಟಿ ಗಳಿಸಿದೆ. ಮೊದಲ ದಿನ ಸುಮಾರು 165 ಕೋಟಿ, ಎರಡನೇ ದಿನ 139 ಕೋಟಿ ಮತ್ತು ಮೂರನೇ ದಿನ 115 ಕೋಟಿ ಗಳಿಸಿದೆ.

2. ಬಾಹುಬಲಿ 2 ಮೊದಲ ಮೂರು ದಿನದ ಕಲೆಕ್ಷನ್

ಭಾರತ ಚಿತ್ರರಂಗದಲ್ಲಿ ಮೊದಲು ಸಾವಿರ ಕ್ಲಬ್ ಪರಿಚಯಿಸಿದ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಚಿತ್ರ ಮೊದಲ ದಿನ 121 ಕೋಟಿ ಗಳಿಸಿ ದಾಖಲೆ ಬರೆದಿತ್ತು. ನಂತರ ಎರಡನೇ ದಿನ 90 ಮತ್ತು ಮೂರನೇ ದಿನ 93 ಕೋಟಿ ಗಳಿಸಿತ್ತು. ಜಗತ್ತಿನಾದ್ಯಂತ 509 ಕೋಟಿ ಗಳಿಕೆ ಮಾಡಿತ್ತು.

3. ಕೆಜಿಎಫ್ ಚಾಪ್ಟರ್ 2 ದಾಖಲೆ

ಪ್ರಸ್ತುತ ಕೆಜಿಎಫ್ ಚಾಪ್ಟರ್ 2, ಬಾಹುಬಲಿ 2 ಚಿತ್ರದ ದಾಖಲೆಗಳನ್ನು ಮುರಿಯುತ್ತಾ ಹೋಗುತ್ತಿದೆ, ಇನ್ನೂ RRR ದಾಖಲೆ ಬಾಕಿಯಿದೆ. ಆದರೆ ಹಿಂದಿ ಭಾಷೆಗಳಲ್ಲಿ ಎರಡು ಚಿತ್ರಗಳ ದಾಖಲೆ ಮುರಿದಿದೆ.

4. ಕೆಜಿಎಫ್ ಚಾಪ್ಟರ್ 2 ಕನ್ನಡದ ಮೊದಲ 500 ಕೋಟಿ ಚಿತ್ರ

ಕೆಜಿಎಫ್ ಚಾಪ್ಟರ್ 2 ಕನ್ನಡದ ಮೊದಲ 200, 300, 400 ಮತ್ತು 500 ಕೋಟಿ ಸೇರಿದ ಚಿತ್ರವಾಗಿದೆ. ಹಾಗೇ ಈ ಚಿತ್ರ 1000 ಕೋಟಿ ಗಳಿಸುವ ಎಲ್ಲಾ ಸಾಧ್ಯತೆಯಿದೆ.

kgf chapter 2 vs rrr vs bahubali 2 first 3 days worldwide box office collection.