'ಗಾರ್ಗಿ'ಗಾಗಿ ಸ್ಪಷ್ಟವಾಗಿ ಕನ್ನಡ ಕಲಿಯಲು ನಟಿ ಸಾಯಿ ಪಲ್ಲವಿ ಹಾಕಿದ ಶ್ರಮಕ್ಕೆ ಫಿದಾ ಆದ ಕನ್ನಡಿಗರು: ವಿಡಿಯೋ ವೈರಲ್

10-05-22 02:07 pm       Source: Vijayakarnataka   ಸಿನಿಮಾ

ನಟಿ ಸಾಯಿ ಪಲ್ಲವಿ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜನ್ಮದಿನದ ಶುಭಾಶಯ ತಿಳಿಸಿದ ಎಲ್ಲರಿಗೂ ಸಾಯಿ ಪಲ್ಲವಿ ಒಂದು ವಿಶೇಷ ಉಡುಗೊರೆ ನೀಡಿದ್ದಾರೆ. ಅಂದರೆ ಅವರು...

ಸ್ಯಾಂಡಲ್‌ವುಡ್‌ನ ಕೆಲ ಕಲಾವಿದರು ಕನ್ನಡ ಮಾತನಾಡಲ್ಲ, ಇಂಗ್ಲಿಷ್ ಬಳಸುತ್ತಾರೆ ಎಂಬ ಆರೋಪ ಇದೆ. ಕನ್ನಡ ಬಿಟ್ಟು ಇಂಗ್ಲಿಷ್ ಮಾತನಾಡುವ ಕೆಲ ಕಲಾವಿದರ ಬಗ್ಗೆ ಕನ್ನಡಿಗರು ಅನೇಕ ಬಾರಿ ಮುನಿಸಿಕೊಂಡಿದ್ದೂ ಇದೆ. ಆದರೆ ತಮಿಳುನಾಡು ಮೂಲದ ನಟಿ ಸಾಯಿ ಪಲ್ಲವಿ ಕನ್ನಡ ಮಾತನಾಡಿ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ.

ಅಭಿಮಾನಿಗಳ ಮುಂದೆ ಹೊಸ ಸಿನಿಮಾ ಘೋಷಣೆ
ಇಂದು ಹುಟ್ಟುಹಬ್ಬದ ಪ್ರಯುಕ್ತ ಸಾಯಿ ಪಲ್ಲವಿ ಅವರಿಗೆ ಸಾಕಷ್ಟು ಜನರು ಶುಭಾಶಯ ತಿಳಿಸಿದ್ದಾರೆ. ಜನ್ಮದಿನದಂದು ಸಾಯಿ ಪಲ್ಲವಿ ನೀಡಿದ ಉಡುಗೊರೆ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಅದರಲ್ಲಿಯೂ ಸಾಯಿ ಪಲ್ಲವಿ ಶ್ರಮವನ್ನು ಕನ್ನಡಿಗರೇ ಮೆಚ್ಚಿದ್ದಾರೆ.

ಸದ್ದಿಲ್ಲದೆ ಸಿನಿಮಾ ಶೂಟಿಂಗ್, ಡಬ್ಬಿಂಗ್ ಮುಗಿಸಿದ ಸಾಯಿ ಪಲ್ಲವಿ
ಸಾಯಿ ಪಲ್ಲವಿ ( sai pallavi ) ಅವರ ಮುಂಬರುವ 'ಗಾರ್ಗಿ' ( Gargi Movie ) ಸಿನಿಮಾದ ಮೆಕಿಂಗ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಷ್ಟುದಿನ ಈ ಚಿತ್ರದ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿರಲಿಲ್ಲ. ಸದ್ದಿಲ್ಲದೆ ಈ ಸಿನಿಮಾದ ಶೂಟಿಂಗ್, ಡಬ್ಬಿಂಗ್ ಕೂಡ ಮುಗಿಸಿದ್ದಾರೆ. ಗಾರ್ಗಿ ಎಂದರೆ ಪುರಾಣ ಕಾಲದ ದಿಟ್ಟ ಮಹಿಳೆ ವಿದ್ವಾಂಸೆ.

Sai Pallavi's 'Gargi' first look poster is out - ybrantnews.com

ಮೂರು ಬಾಷೆಯಲ್ಲಿ 'ಗಾರ್ಗಿ' ರಿಲೀಸ್
"ಈ ಸಿನಿಮಾ ಬಗ್ಗೆ ಹೇಳಬೇಕು ಎಂದು ನಾನು ಕೆಲ ತಿಂಗಳುಗಳ ಕಾಲ ಕಾದೆ. ಕೊನೆಗೂ ನನ್ನ ಹುಟ್ಟುಹಬ್ಬದ ದಿನ ಈ ವಿಷಯ ಹೇಳಲು ಚಿತ್ರತಂಡ ಅನುಮತಿ ನೀಡಿದೆ. ಗಾರ್ಗಿ ನಿಮ್ಮ ಮುಂದೆ ಇದೆ" ಎಂದು ಸಾಯಿ ಪಲ್ಲವಿ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.

Sai Pallavi's next titled Gargi; team reveals intriguing making video of  the trilingual film

ತೆಲುಗು, ತಮಿಳು, ಕನ್ನಡ ಭಾಷೆಯಲ್ಲಿ 'ಗಾರ್ಗಿ' ರಿಲೀಸ್ ಆಗುತ್ತಿದೆ. ಶೀಘ್ರದಲ್ಲಿಯೇ ಈ ಚಿತ್ರದ ಟೀಸರ್ ಕೂಡ ರಿಲೀಸ್ ಆಗಲಿದೆಯಂತೆ. ಈ ಸಿನಿಮಾ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಗೌತಮ್ ಚಂದ್ರನ್.

ಕಷ್ಟವಾದರೂ ಎಡೆಬಿಡದೆ ಕನ್ನಡ ಪದ ಉಚ್ಛರಿಸಿದ ಸಾಯಿ ಪಲ್ಲವಿ
ಸಾಯಿ ಪಲ್ಲವಿ ಅವರೇ ಕನ್ನಡ ಕಲಿತಿದ್ದಾರೆ, ಕನ್ನಡ ಪದ ಉಚ್ಛಾರ ಮಾಡುವುದು ಸಾಯಿ ಪಲ್ಲವಿಗೆ ಸುಲಭ ಇರಲಿಲ್ಲ. ಎಡೆಬಿಡದೆ ಪ್ರಯತ್ನ ಹಾಕಿ ಸಾಯಿ ಪಲ್ಲವಿ ಅವರು ಪದೇ ಪದೇ ಉಚ್ಛಾರ ಮಾಡಿ ಕನ್ನಡ ಮಾತನಾಡಿದ್ದಾರೆ. ಸಾಯಿ ಪಲ್ಲವಿ ಅವರು ಹೇಗೆ ಕನ್ನಡ ಕಲಿತರು ಎಂಬ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಿನಿಮಾಕ್ಕಾಗಿ ಕನ್ನಡ ಕಲಿತು ಮಾತನಾಡುವ ಶ್ರಮ ಹಾಕಿದ ಸಾಯಿ ಪಲ್ಲವಿ ಕಂಡು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಸಾಯಿ ಪಲ್ಲವಿ ಅವರು ಬಡಗ ಮೂಲಕ್ಕೆ ಸೇರಿದವರು. ಬಡಗರು ತಮಿಳುನಾಡಿನ ನೀಲಿಗಿರಿ ಜಿಲ್ಲೆಯಲ್ಲಿ ವಾಸ ಮಾಡುತ್ತಾರೆ. ಕನ್ನಡ ಮಿಶ್ರಿತ ಬಡಗ ಭಾಷೆಯನ್ನು ಅವರ ಮನೆಯಲ್ಲಿ ಮಾತನಾಡಲಾಗುವುದು.

Sai Pallavi dubs her own lines in Kannada for Gargi for the first time.  Watch - Hindustan Times

ಸಾಯಿ ಪಲ್ಲವಿಯನ್ನು ಹೊಗಳಿದ ನಟಿ ಸಂಗೀತಾ ಶೃಂಗೇರಿ
"ಸಾಯಿ ಪಲ್ಲವಿ ಕನ್ನಡದಲ್ಲಿ ಮಾತನಾಡಿದ್ದನ್ನು ನೋಡಲು ಖುಷಿಯಾಗುತ್ತಿದೆ. ಸಾಯಿ ಪಲ್ಲವಿ ಸರಿಯಾಗಿ ಕನ್ನಡ ಮಾತನಾಡಲು ಟೀಂ ಪ್ರಯತ್ನವನ್ನು ಹೊಗಳಲೇಬೇಕು. ಸಾಯಿ ಪಲ್ಲವಿ ಅವರನ್ನು ನಂಬಿ, ಅವರಿಗೆ ಬೆಂಬಲವಾಗಿ ನಿಂತಿದ್ದಕ್ಕೆ ನಿರ್ದೇಶಕರನ್ನು ಮೆಚ್ಚಬೇಕು" ಎಂದು ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಸಿನಿಮಾ ನಾಯಕಿ ಸಂಗೀತಾ ಶೃಂಗೇರಿ ಸೋಶಿಯಲ್ ಮೀಡಿಯಾದಲ್ಲಿ ಹೊರಹಾಕಿದ್ದಾರೆ.

Actress Sai Pallavi Effort To Speak Kannada For Gargi Movie.