ಬಿಪಿ ಸಮಸ್ಯೆ ಇರುವವರು, ಇಂತಹ ಆಹಾರಗಳನ್ನು ಮಿಸ್ ಮಾಡದೇ ಸೇವಿಸಬೇಕು

13-05-22 08:16 pm       Source: Vijayakarnataka   ಡಾಕ್ಟರ್ಸ್ ನೋಟ್

ನಮಗೆಲ್ಲಾ ಗೊತ್ತೇ ಇರುವ ಹಾಗೆ ಅಧಿಕ ರಕ್ತದೊತ್ತಡ ಅಥವಾ ಹೈ ಬಿಪಿ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ಮಾಡದರೆ, ಕೊನೆಗೆ ಆರೋಗ್ಯಕ್ಕೆ ಅಪಾಯ ಬಂದೊದಗುತ್ತದೆ! ಹೀಗಾಗಿ ಈ ಸಮಸ್ಯೆಯನ್ನು...

ವೈದ್ಯರೇ ಹೇಳುವ ಪ್ರಕಾರ ಮನುಷ್ಯನಿಗೆ ರಕ್ತದ ಒತ್ತಡ ಅಂದರೆ ಬಿಪಿ ಲೆವೆಲ್ ಯಾವಾಗಲೂ ನಾರ್ಮಲ್ ಆಗಿರಬೇಕು. ಒಂದು ವೇಳೆ, ಈ ನಮ್ಮ ರಕ್ತದೊತ್ತಡದಲ್ಲಿ ವ್ಯತ್ಯಾಸವಾದರೆ ಅದರ ನೇರ ಪರಿಣಾಮ ಹೃದಯದ ಮೇಲೆ ಉಂಟಾಗುತ್ತದೆ! ಹಾಗಾಗಿ ಈ ಕಾಯಿಲೆಯ ಬಗ್ಗೆ, ನಾವು ಜಾಗರೂಕತೆ ವಹಿಸಿದಷ್ಟು, ಆರೋಗ್ಯಕ್ಕೆ ಒಳ್ಳೆಯದು.. ಇನ್ನು ಈ ಕಾಯಿಲೆಗೆ ಕಾರಣಗಳನ್ನು ನೋಡುವುದಾದರೆ, ಒತ್ತಡ ಜೀವನಶೈಲಿ, ವಿಪರೀತ ಟೆನ್ಷನ್ ಮಾಡಿಕೊಳ್ಳುವುದು, ಸರಿಯಾದ ಆಹಾರ ಪದ್ಧತಿಗಳನ್ನು ಅನುಸರಿಸದೇ ಇರುವುದು, ದೈನಂದಿನ ದೈಹಿಕ ಚಟುವಟಿಕೆ ಇಲ್ಲದೆ ಇರುವುದು, ಇವೆಲ್ಲವೂ ಈ ಕಾಯಿಲೆ ನಮ್ಮನ್ನು ಆವರಿ ಸಲು ಕಾರಣವಾಗಿ ಬಿಡುತ್ತದೆ!

ಹೀಗಾಗಿ ಸರಿಯಾದ ಜೀವನಶೈಲಿ ಹಾಗೂ ವೈದ್ಯರು ಸೂಚಿಸಿರುವ ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳುವುದರ ಜೊತೆಗೆ, ಕೆಲವೊಂದು ಆಹಾರಗಳನ್ನು ಕೂಡ ನಿಯಮಿತವಾಗಿ ಸೇವನೆ ಮಾಡುವುದರಿಂದ ಕೂಡ ಈ ಕಾಯಿಲೆಯನ್ನು ಕಟ್ಟಿಹಾಕಬಹುದು, ಅಲ್ಲದೇ ನೆಮ್ಮದಿಯ ಜೀವನವನ್ನು ಕೂಡ ಸಾಗಿಸಬಹುದು...

ಸೀಬೆ ಹಣ್ಣಿನ ಜ್ಯೂಸ್

ಸೀಬೆ ಎಲೆಗಳಿಂದ ಸಿಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು?

  • ಸೀಬೆ ಹಣ್ಣು ಅಥವಾ ಈ ಹಣ್ಣಿನಿಂದ ಮಾಡಿದ ಜ್ಯೂಸ್ ಕುಡಿದರೆ ಅದುಅಧಿಕ ರಕ್ತದೊತ್ತಡ ಸಮಸ್ಯೆಯನ್ನು ನೈಸರ್ಗಿಕವಾಗಿ ನಿಯಂತ್ರಿಸಬಹುದು, ಇದರ ಜೊತೆಗೆ ಹೃದಯದ ಆರೋಗ್ಯ ವನ್ನು ಕೂಡ ಕಾಪಾಡಿ ಕೊಳ್ಳ ಬಹುದು!
  • ಈ ಹಣ್ಣಿನಲ್ಲಿ ಪೊಟಾಶಿಯಂ ಮತ್ತು ವಿಟಮಿನ್ ಸಿ ಸಮೃದ್ಧವಾಗಿರುವುದರಿಂದ, ರಕ್ತ ಸಂಚಾರದಲ್ಲಿ ಏರುಪೇರಾ ಗುವುದನ್ನು ನಿಯಂತ್ರಿಸುವುದು ಮಾತ್ರವಲ್ಲದೆ, ರಕ್ತದೊತ್ತಡ ಹೆಚ್ಚಾಗದಂತೆ, ನೋಡಿಕೊಳ್ಳುತ್ತದೆ, ಇದರಿಂದ ಹೃದಯಕ್ಕೂ ಕೂಡ ಯಾವುದೇ ರೀತಿಯ ಒತ್ತಡ ಬೀಳದೇ, ತನ್ನ ಕಾರ್ಯವೈಖರ್ಯಗಳನ್ನು ಸುಲಲಿತವಾಗಿ ನಡೆಸಿಕೊಂಡು ಹೋಗಲು ನೆರವಾಗುತ್ತದೆ.

ಹಾಲಿನಲ್ಲಿ ನೆನೆಸಿಟ್ಟ ಖರ್ಜೂರ

Dates soaked in milk: ಖರ್ಜೂರ ಮಿಶ್ರಿತ ಹಾಲು, ತಾಯಿಯ ಎದೆ ಹಾಲಿನಷ್ಟೇ  ಆರೋಗ್ಯಕಾರಿ... - Vijaya Karnataka

ಈಗಾಗಲೇ ಅಧಿಕ ರಕ್ತದೊತ್ತಡದ ಸಮಸ್ಯೆ ಕಾಯಿಲೆಯಿಂದ ಬಳಲುತ್ತಿರುವವರು, ಸರಿಸುಮಾರು ನಾಲ್ಕೈದು ಖರ್ಜೂರಗಳನ್ನು ದಿನಾ ರಾತ್ರಿ ಮಲಗುವ ಮುನ್ನ, ಒಂದು ಬೌಲ್‌ ಹಾಲಿನಲ್ಲಿ ಹಾಕಿ ನೆನೆಸಿಡಬೇಕು.. ಮರುದಿನ ಬೆಳಗಿನ ಸಮಯದಲ್ಲಿ ಅಂದರೆ, ಬ್ರೇಕ್ ಫಾಸ್ಟ್ ಮಾಡುವ ಅರ್ಧ ಗಂಟೆ ಮುಂಚೆ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ಕ್ರಮೇಣವಾಗಿ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

ದಾಳಿಂಬೆ ಹಣ್ಣಿನ ಜ್ಯೂಸ್

ದಾಳಿಂಬೆ ರಸದ 11 ಚಮತ್ಕಾರಿ ಗುಣದ ಬಗ್ಗೆ ನೀವೂ ತಿಳಿಯಿರಿ..! - Karnataka TV

  • ದಾಳಿಂಬೆ ಹಣ್ಣು ದುಬಾರಿ ಎನ್ನುವ ಒಂದೇ ಕಾರಣ ಬಿಟ್ಟರೆ, ಇದರಲ್ಲಿರುವ ಆರೋಗ್ಯ ಪ್ರಯೋ ಜನಗಳು ಮಾತ್ರ ಅಪಾರ.. ಅದರಲ್ಲೂ ಹೈಬಿಪಿ ಸಮಸ್ಯೆ ಇರುವವರಿಗೆ, ಈ ಹಣ್ಣಿನ ಜ್ಯೂಸ್ ಬಹಳ ಒಳ್ಳೆಯದು..ಹೀಗಾಗಿ ಈ ಸಮಸ್ಯೆ ಇರುವವರು, ದಿನಾ ಒಂದು ಲೋಟ ದಾಳಿಂಬೆ ಜ್ಯೂಸ್‌ ನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು.
  • ಇದಕ್ಕೆ ಮುಖ್ಯ ಕಾರಣ ಈ ಹಣ್ಣಿನ ಬೀಜಗಳಲ್ಲಿ, ರಕ್ತ ಸಂಚಾರವನ್ನು ಸರಾಗವಾಗಿ ನಡೆಸುವಂತಹ ವಿಟಮಿನ್‌ ಗಳು, ಖನಿಜಾಂಗಳು, ನಾರಿನಾಂಶ ಹಾಗೂ ವಿಶೇಷವಾಗಿ ಪೊಟ್ಯಾಷಿಯಂ ಅಂಶಗಳು ಯಥೇಚ್ಛವಾಗಿ ಸಿಗುವು ದರಿಂದ, ಹೈಬಿಪಿ ಸಮಸ್ಯೆಯನ್ನುಹದ್ದುಬಸ್ತಿನಲ್ಲಿಡಲು ನೆರವಾಗುತ್ತದೆ.

ಮೆಗ್ನಿಶಿಯಂ ಹಾಗೂ ಕ್ಯಾಲ್ಸಿಯಂ ಅಂಶ ಹೆಚ್ಚಿರುವ ಆಹಾರಗಳನ್ನು ಸೇವಿಸಿ..

calcium in the body: ಈ 5 ಕ್ಯಾಲ್ಸಿಯಂ ಭರಿತ ಆಹಾರವನ್ನು ಅಗತ್ಯಕ್ಕಿಂತ ಹೆಚ್ಚು  ಸೇವಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ - Vijaya Karnataka

  • ಪಾಲಕ್ ಸೊಪ್ಪು, ನೆನೆಸಿಟ್ಟ ಬಾದಾಮಿ ಬೀಜಗಳು, ಹಸಿರೆಲೆ ಸೊಪ್ಪುಗಳು, ಬ್ರಾಕೋಲಿ, ಇಂತಹ ತರಕಾರಿಗಳಲ್ಲಿ ಉತ್ತಮ ಪ್ರಮಾಣದ ಮೆಗ್ನಿಶಿಯಂ ಅಂಶ ಇರುವುದರಿಂದ, ಇವುಗಳನ್ನು ನಿತ್ಯವೂ ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸುತ್ತಾ ಬಂದರೆ, ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡಬಹುದು.
  • ಇನ್ನು ಕ್ಯಾಲ್ಸಿಯಂ ಅಂಶ ಹೆಚ್ಚಿರುವ ಆಹಾರಗಳಾದ, ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಸಾರ್ಡಿನ್ ಮೀನು, ಪನ್ನೀರ್ ಇಂತಹ ಕ್ಯಾಲ್ಸಿಯಂ ಹಾಗೂ ಪ್ರೋಟೀನ್ ಅಂಶ ಒಳಗೊಂಡಿರುವ ಆಹಾರ ಪದಾರ್ಥಗಳನ್ನು ನಿಯಮಿತವಾಗಿ ಸೇವನೆ ಮಾಡುವ ಅಭ್ಯಾಸ ಮಾಡುತ್ತಾ ಬಂದರೆ, ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ದಿನಕ್ಕೊಂದು ಬಾಳೆಹಣ್ಣು ತಿನ್ನಿ...

ರಾತ್ರಿ ಊಟದ ನಂತರ ಬಾಳೆಹಣ್ಣು ಸೇವಿಸುವುದು ಒಳ್ಳೆಯದೇ ಅಥವಾ ಕೆಟ್ಟದೇ? ಇಲ್ಲಿದೆ ನೋಡಿ  ಉತ್ತರ | Banana at night is good or bad? Here's the answer - Kannada BoldSky

  • ಅಧ್ಯಯಾನದ ವರದಿಯ ಪ್ರಕಾರ, ಪ್ರತಿ ದಿನ ಒಂದೊಂದು ಮೀಡಿಯಂ ಗಾತ್ರದ ಬಾಳೆಹಣ್ಣನ್ನು ಸೇವನೆ ಮಾಡು ವುದರಿಂದ, ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು, ಸಹಕಾರಿಯಾಗುತ್ತದೆಯಂತೆ.
  • ಇದಕ್ಕೆ ಮುಖ್ಯ ಕಾರಣ, ಈ ಹಣ್ಣಿನಲ್ಲಿ ಕಂಡುಬರುವ ನೈಸರ್ಗಿಕ ಸಂಯುಕ್ತಗಳು ಹಾಗೂ ಪೊಟ್ಯಾಶಿಯಂ ಅಂಶ ಗಳು ನಾವು ರಕ್ತದ ಒತ್ತಡವನ್ನು ನಿಯಂತ್ರಿಸಲು ವೈದ್ಯರು ನೀಡಿರುವ ಔಷಧಿಗಳ ಹಾಗೆ ಕೆಲಸ ಮಾಡುತ್ತವೆ ಯಂತೆ! ಹಾಗಾದ್ರೆ ಇನ್ನೇಕೆ ತಡ? ದಿನಾ ಒಂದೊಂದು ಬಾಳೆ ಹಣ್ಣು ತಿನ್ನುವ ಅಭ್ಯಾಸ ಮಾಡಿಕೊಳ್ಳಿ..

ಮಿತವಾಗಿ ಮೊಸರು ಸೇವನೆ..

curd health benefits: ಚಳಿಗಾಲದಲ್ಲಿ ಮಿತವಾಗಿ ಮೊಸರು ತಿಂದ್ರೆ, ಆರೋಗ್ಯಕ್ಕೆ ಬಹಳ  ಒಳ್ಳೆಯದು - Vijaya Karnataka

ಹಾಲಿನ ಉಪ ಉತ್ಪನ್ನವಾದ ಮೊಸರಿನಲ್ಲಿ ಅಧಿಕ ಪ್ರಮಾಣದಲ್ಲಿ ಕ್ಯಾಲ್ಸಿಯಂ, ಮೆಗ್ನಿಶಿಯಂ ಮತ್ತು ಪೊಟಾಶಿ ಯಂ ಅಂಶ ಹೆಚ್ಚಾಗಿ ಇರುವುದರಿಂದ ಅಧಿಕ ರಕ್ತದೊತ್ತದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬಹಳ ಒಳ್ಳೆಯದು ಎಂದು ಸಾಬೀತಾಗಿದೆ. ಹೀಗಾಗಿ ಈಗಾಗಲೇ ಈ ಸಮಸ್ಯೆಯಿಂದ ಬಳಲುತ್ತಿರುವವರು ಆದಷ್ಟು ತಮ್ಮ ಆಹಾರ ಪದ್ಧತಿ ಯಲ್ಲಿ ಮಿತವಾಗಿ ಮೊಸರು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಒಳ್ಳೆಯದು.

ಟೊಮೆಟೊ ಜ್ಯೂಸ್

Benefits of Tomato: ದಿನಾ ಒಂದು ಗ್ಲಾಸ್ ಟೊಮೆಟೊ ಜ್ಯೂಸ್ ಕುಡಿಯೋದ್ರ ಉಪಯೋಗವೇನು? -  health benefits of drinking one glass of tomato juice every day | Vijaya  Karnataka

ಈಗ ಟೊಮೆಟೊ ಹಣ್ಣಿನ ಬೆಲೆ ಕೇಳಿದರೆಯೇ, ಬಿಪಿ ಹೈ ಆಗಬಹುದು!! ಅದು ಏನೇ ಇರಲಿ ಆದರೆ ಟೊಮೆಟೊ ಹಣ್ಣಿನ ಜ್ಯೂಸ್ ಮಾತ್ರ ಅಧಿಕ ರಕ್ತದ ಒತ್ತಡದ ಸಮಸ್ಯೆ ಇರುವವರಿಗೆ ಬಹಳ ಒಳ್ಳೆಯದು...ಇದಕ್ಕೆ ಮುಖ್ಯ ಕಾರಣ ಇದರಲ್ಲಿ ಕಂಡು ಬರುವ ಕ್ಯಾರೋಟಿನ್ ಅಂಶ, ವಿಟಮಿನ್ ಎ ಮತ್ತು ಕ್ಯಾಲ್ಸಿಯಂ ಅಂಶ ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುವುದು ಮಾತ್ರವಲ್ಲದೆ, ರಕ್ತ ಸಂಚಾರದಲ್ಲಿ ಕಂಡುಬರುವ ಕೊಲೆಸ್ಟ್ರಾಲ್ ಅಂಶ ಅಚ್ಚು ಕಟ್ಟಾಗಿ ನಿರ್ವಹಣೆಯಾಗುತ್ತದೆ, ಇದರಿಂದಾಗಿ ಹೃದಯದ ಆರೋಗ್ಯವನ್ನು ಕೂಡ ಕಾಪಾಡಿದಂತಾಗುತ್ತದೆ.

Foods That Can Lower Your Blood Pressure Naturally.