ಪೈಲ್ಸ್ ಸಮಸ್ಯೆ ಇದ್ದವರು, ದಿನಾ ಎರಡು ಹಣ್ಣು-ಹಣ್ಣಾದ ಬಾಳೆಹಣ್ಣು ತಿನ್ನಬೇಕು!

17-06-22 10:22 pm       Source: Vijayakarnataka   ಡಾಕ್ಟರ್ಸ್ ನೋಟ್

ಪೈಲ್ಸ್ ಸಮಸ್ಯೆ ಇದ್ದವರು, ನಾಚಿಕೆ ಅಥವಾ ಸಂಕೋಚ ಪಟ್ಟುಕೊಂಡರೆ ಸಮಸ್ಯೆ, ಕೈಮೀರಿ ಹೋಗುವ ಸಂಭವ ಹೆಚ್ಚಿರುತ್ತದೆ.. ಹೀಗಾಗಿ ಈ ಸಮಸ್ಯೆ ಇರುವವರು, ವೈದ್ಯರ ಸಲಹೆಗಳನ್ನು...

 

ಮೂಲವ್ಯಾಧಿ ಅಥವಾ ಪೈಲ್ಸ್ ಇರುವ ವ್ಯಕ್ತಿಗಳು ತಮ್ಮ ತೊಂದರೆಯ ಬಗ್ಗೆ ಯಾರ ಬಳಿ ಹೋಗಿ ಕೂಡ ಹೇಳಿಕೊಳ್ಳಲು ಹಿಂದೇಟು ಹಾಕುತ್ತಾರೆ. ಸಾಮಾನ್ಯವಾಗಿ ಈ ಸಮಸ್ಯೆ ಇರುವವರು, ನಾಚಿಕೆ ಅಥವಾ ಸಂಕೋಚ ಪಟ್ಟುಕೊಂಡು, ತಮ್ಮಲ್ಲಿಯೇ ಸಮಸ್ಯೆಯನ್ನು ಬಚ್ಚಿಟ್ಟುಕೊಳ್ಳಲು ಪ್ರಯತ್ನಿಸುವವರು ಎಷ್ಟೋ ಜನರು, ನಮ್ಮ ನಡುವೆ ಇದ್ದಾರೆ. ಇನ್ನು ವೈದ್ಯರ ಬಳಿ ಹೋದರೂ ಕೂಡ, ಅಕ್ಕಪಕ್ಕದಲ್ಲಿ ಯಾರೂ ಇಲ್ಲದಿರುವುದನ್ನೇ ಬಯಸುತ್ತಾರೆ ಹಾಗೂ ಪಿಸುಮಾತಿನಲ್ಲಿಯೇ ಸಮಸ್ಯೆಯನ್ನು ವಿವರಿಸುತ್ತಾರೆ.

ಇನ್ನು ಈ ಪೈಲ್ಸ್ ಅಥವಾ ಹೆಮೊರ್‍ಹಾಯ್ಡ್ (hemorrhoids)ಎನ್ನುವ ಈ ಕಾಯಿಲೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಕಂಡುಬರುವ ಸಾಮಾನ್ಯ ಕಾಯಿಲೆ ಎಂದು ಗುರುತಿಸಲಾಗಿದೆ. ಈ ಸಮಸ್ಯೆಗೆ ಕಾರಣಗಳು ಏನು ಎಂಬುದನ್ನು ನೋಡುವುದಾದರೆ ಅಜೀರ್ಣ ಸಮಸ್ಯೆಯ ಕಾರಣದಿಂದಾಗಿ ಉಂಟಾಗಿರುವ ಮಲಬದ್ಧತೆಯ ಸಮಸ್ಯೆ, ಅನಾರೋಗ್ಯಕಾರಿ ಆಹಾರಪದ್ಧತಿ, ಸರಿಯಾದ ಜೀವನಶೈಲಿಯನ್ನು ಅನುಸರಿಸದೇ ಇರುವುದು, ಇಂತಹ ಸಮಸ್ಯೆಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತದೆ.

ಮೂಲವ್ಯಾಧಿ ಅಥವಾ ಪೈಲ್ಸ್ ಸಮಸ್ಯೆ ಎಷ್ಟು ಹಿಂಸ ನೀಡುತ್ತದೆ ಎಂದರೆ, ಸರಿಯಾಗಿ ಮಲವಿಸರ್ಜನೆ ಮಾಡಲು ಸಾಧ್ಯವಾಗದೆ, ನೋವನ್ನು ಉಂಟು ಮಾಡುತ್ತದೆ. ಅಷ್ಟೇ ಅಲ್ಲದೆ ಇದರಿಂದಾಗಿ ದೀರ್ಘಕಾಲದ ವರೆಗೆ ಕುಳಿತುಕೊಳ್ಳಲು, ಇಲ್ಲಾಂದ್ರೆ ಮಲಗಲು ಕೂಡ ಕಷ್ಟಪಡಬೇಕಾದ ಸಂದರ್ಭ ಎದುರಾಗುತ್ತದೆ. ಮುಂದೆ ಓದಿ...

ಮೂಲವ್ಯಾಧಿ ಅಥವಾ ಪೈಲ್ಸ್ ಸಮಸ್ಯೆ ಎಂದರೇನು?

treatment for piles: ಮೂಲವ್ಯಾಧಿ ಸಮಸ್ಯೆಗೆ ಇಲ್ಲಿದೆ ಪವರ್‌ಫುಲ್ ಮನೆಮದ್ದುಗಳು -  home remedies for piles that actually works | Vijaya Karnataka

  • ಮೂಲವ್ಯಾಧಿ ಅಥವಾ ಪೈಲ್ಸ್ ಸಮಸ್ಯೆ ಎನ್ನುವುದು ವ್ಯಕ್ತಿಯಲ್ಲಿ ಮಲವಿಸರ್ಜನೆಗೆ ತೊಡಕು ಉಂಟು ಮಾಡಿ, ವಿಪರೀತ ನೋವಿನ ಸಮಸ್ಯೆಗೆ ಕಾರಣವಾಗುತ್ತದೆ. ಈ ಸಮಸ್ಯೆ ಒಮ್ಮೆ ಕಾಣಿಸಿ ಕೊಂಡರೆ, ದೀರ್ಘ ಕಾಲದವರೆಗೆ ಕುಳಿತು ಕೊಳ್ಳಲು ಕೂಡ ಸಾಧ್ಯವಾಗುವುದಿಲ್ಲ.
  • ಇನ್ನೂ ಕೆಲವರು ಈ ಸಮಸ್ಯೆಯಿಂದಾಗಿ ಮಲಗಲು ಕೂಡ ಕಷ್ಟ ಪಡುವವರಿದ್ದಾರೆ. ಕೆಲವರಿಗೆ ಗುದದ್ವಾರದಲ್ಲಿ ರಕ್ತ ಕಂಡುಬರುವ ಸಮಸ್ಯೆ ಕೂಡ ಇರುತ್ತದೆ. ಇದರಿಂದಾಗಿ ವ್ಯಕ್ತಿ, ಯಾರಲ್ಲಿಯೂ ಹೇಳಿಕೊಳ್ಳಲಾಗದ ಸಮಸ್ಯೆಗೆ ಸಿಲುಕಿಕೊಳ್ಳುವುದರ ಜೊತೆಗೆ ತುಂಬಾನೇ ಮಾನಸಿಕವಾಗಿ ಜರ್ಜರಿತವಾಗಿ ಬಿಡುತ್ತಾನೆ.

ಈ ಸಮಸ್ಯೆ ಇರುವವರು, ದಿನಾ ಮಾಗಿದ ಬಾಳೆಹಣ್ಣು ತಿನ್ನಬೇಕಂತೆ!

What is the side effect eating bananas daily? – Anata India

  • ಪೈಲ್ಸ್ ಸಮಸ್ಯೆ ಇರುವವರು, ತಮ್ಮ ವೈದ್ಯರ ಸಲಹೆಗಳನ್ನು ಸರಿಯಾಗಿ ಅನುಸರಿಸುವುದರ ಜೊತೆಗೆ, ಆಹಾರ ಪದ್ಧತಿಯಲ್ಲಿ ಕೂಡ ಕೆಲವೊಂದು ಬದಲಾವಣೆಗಳನ್ನು ತಂದುಕೊಂಡರೆ, ಖಂಡಿತವಾಗಿ ಯೂ ಈ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
  • ಅದರಲ್ಲಿ ಒಂದು ಅತ್ಯುತ್ತಮವಾದ ಪರಿಹಾರ ಎಂದರೆ ನಿಯಮಿತವಾಗಿ,ದಿನಕ್ಕೆ ಒಂದೆರಡು ಮಧ್ಯಮ ಗಾತ್ರದ ಮಾಗಿದ ಬಾಳೆಹಣ್ಣನ್ನು ತಿನ್ನುವುದರಿಂದ, ಜೀರ್ಣಕ್ರಿಯೆ ಪ್ರಕ್ರಿಯೆ ಸರಿಯಾಗಿ ನಡೆದು, ಮಲಬದ್ಧತೆ ಸಮಸ್ಯೆ ನಿವಾರಣೆ ಆಗುವುದರ ಜೊತೆಗೆ, ಪೈಲ್ಸ್ ಸಮಸ್ಯೆ ಕೂಡ ನಿಯಂತ್ರಣಕ್ಕೆ ಬರುತ್ತದೆ.

ರಾತ್ರಿ ಮಲಗುವ ವೇಳೆ ಮಾಗಿದ ಬಾಳೆಹಣ್ಣು ಸೇವಿಸಿ...

Are Bananas Bad for You? 3 Myths Debunked - Food & Nutrition Magazine

  • ಪ್ರತಿದಿನಾ ರಾತ್ರಿ ಊಟ ಮಾಡಿ, ಮಲಗುವ ಸಮಯದಲ್ಲಿ, ಮಧ್ಯಮ ಗಾತ್ರದ ಒಂದೆರಡು ಮಾಗಿದ ಬಾಳೆ ಹಣ್ಣುಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ಪೈಲ್ಸ್ ಸಮಸ್ಯೆಯನ್ನು ನಿಯಂ ತ್ರಿಸಬಹುದು
  • ಇದರ ಜೊತೆಗೆ ನಾರಿನಾಂಶ ಹೆಚ್ಚಿರುವ ಆಹಾರಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿ ಕೊಂಡರೆ ಬಹಳ ಒಳ್ಳೆಯದು. ಇದರಿಂದ ಜೀರ್ಣಕ್ರಿಯೆ ಸರಿಯಾಗಿ ನಡೆಯುವುದರ ಜೊತೆಗೆ, ತ್ಯಾಜ್ಯವಾಗಿ ಹೊರಬರುವ ಮಲ ತುಂಬಾ ಮೃದುವಾಗಿ ಕೂಡಿರುತ್ತದೆ.
  • ಒಂದು ವೇಳೆ ಮಲ ಗಟ್ಟಿಯಾದರೆ, ಗುದದ್ವಾರದಲ್ಲಿ ಕಂಡುಬರುವ ರಕ್ತನಾಳಗಳ ಮೇಲೆ ವಿಪರೀತ ಒತ್ತಡ ಉಂಟು ಮಾಡುತ್ತದೆ. ಇದರಿಂದಾಗಿ ಈಗಾಗಲೇ ಪೈಲ್ಸ್ ಸಮಸ್ಯೆ ಇದ್ದರೆ, ಬಹಳಷ್ಟು ತೊಂದರೆಯನ್ನು ಅನುಭವಿಸಬೇಕಾಗುತ್ತದೆ.

ಮಾಗಿದ ಬಾಳೆಹಣ್ಣು ಈ ಸಮಸ್ಯೆಗೆ ಬೆಸ್ಟ್ ಮದ್ದು!

This Is the #1 Worst Way to Eat a Banana — Eat This Not That

  • ಸಾಧ್ಯವಾದಷ್ಟು ಸರಿಯಾಗಿ ಮಾಗಿದ ಬಾಳೆಹಣ್ಣು ತಿನ್ನುವ ಅಭ್ಯಾಸ ಇಟ್ಟುಕೊಂಡರೆ ಬಹಳ ಒಳ್ಳೆ ಯದು. ಯಾವುದೇ ಕಾರಣಕ್ಕೂ ಕೂಡ ಅರ್ಧಂಬರ್ಧ ಹಣ್ಣಾದ ಬಾಳೆಹಣ್ಣನ್ನು ತಿನ್ನಲು ಹೋಗ ಬೇಡಿ.
  • ಮಾಗಿದ ಅಥವಾ ಸರಿಯಾಗಿ ಹಣ್ಣಾದ ಬಾಳೆಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಂಶ ಕಂಡು ಬರುವುದರ ಜೊತೆಗೆ, ಕರಗುವ ನಾರಿನಾಂಶ ಕೂಡ ಯಥೇಚ್ಛವಾಗಿ ಕಂಡು ಬರುತ್ತದೆ. ವಿಶೇಷವಾಗಿ ಬಾಳೆಹಣ್ಣು ಮಾಗಿದಷ್ಟು ಇದರಲ್ಲಿ ಕಂಡು ಬರುವ ಟ್ಯಾನಿನ್ ಅಂಶ ಕಡಿಮೆಯಾಗುತ್ತ ಬರುವುದರಿಂದ, ಮಲ ಬದ್ಧತೆಯ ಸಮಸ್ಯೆ ಸಮಸ್ಯೆ ನಿವಾರಣೆಯಾಗಿ, ತ್ಯಾಜ್ಯವಾಗಿ ಹೊರಬರುವ ಮಲ ತುಂಬಾ ಮೃದು ವಾಗಿ ಕೂಡಿರುತ್ತದೆ.
  • ಪೈಲ್ಸ್ ಸಮಸ್ಯೆ ಇರುವವರು, ಪ್ರತಿದಿನ ಬೆಳಗ್ಗೆ ಹಾಗೂ ರಾತ್ರಿ ಮಲಗುವ ಮುನ್ನ ಮಾಗಿದ ಬಾಳೆ ಹಣ್ಣನ್ನುತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು.

ಸರಿಯಾಗಿ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ

ಅದು ಬೇಸಿಗೆಕಾಲವಿರಲಿ ಅಥವಾ ಚಳಿಗಾಲವಿರಲಿ, ಆದರೆ ನಮ್ಮ ದೇಹದ ಯಾವುದೇ ಕಾರಣಕ್ಕೂ ಕೂಡ ನಿರ್ಜಲೀಕರಣ ಸಮಸ್ಯೆಗೆ, ಒಳಗಾಗದಂತೆ ನೋಡಿ ಬೇಕು. ಇದಕ್ಕಾಗಿ ಸರಿಯಾಗಿ ನೀರು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಇದರಿಂದ, ಮಲಬದ್ಧತೆ ನಿವಾರಣೆಯಾಗುವುದರ ಜೊತೆಗೆ, ಪೈಲ್ಸ್ ಸಮಸ್ಯೆ ಕೂಡ ನಿಯಂತ್ರಣಕ್ಕೆ ಬರುತ್ತದೆ.

Everyday Eat One Ripe Banana After Dinner, To Get Rid From Piles.