ಆಯಾಸ ಆದಾಗ ಇವುಗಳನ್ನು ತಿಂದು ಬಿಡಿ, ತಕ್ಷಣ ಶಕ್ತಿ ಬರುತ್ತೆ!

03-02-23 08:07 pm       Source: Vijayakarnataka   ಡಾಕ್ಟರ್ಸ್ ನೋಟ್

ನಿಮಗೂ ಸಹ ಸುಸ್ತು, ಆಯಾಸ ಪದೇ ಪದೇ ಆಗುತ್ತಾ? ಸ್ವಲ್ಪ ಕೆಲಸ ಮಾಡಿದರೂ ಸುಧಾರಿಸಿ ಕೊಳ್ಳಬೇಕು ಎನಿಸುತ್ತಾ? ಹಾಗಾದರೆ ತಕ್ಷಣ ಇವುಗಳನ್ನು ತಿಂದುಬಿಡಿ.

ನಾವು ಬಹಳ ಬೇಗನೆ ದಪ್ಪ ಆಗಬೇಕು, ಬೇಗನೆ ಒಳ್ಳೆಯ ಕಲರ್ ಬರಬೇಕು, ತಕ್ಷಣ ಶಕ್ತಿ ಬರಬೇಕು ಇದಕ್ಕೆ ಏನು ಮಾಡ ಬೇಕು ಎಂಬ ಗೊಂದಲ, ಪ್ರಶ್ನೆ ನಮ್ಮಲ್ಲಿ ಬಹುತೇಕ ಕಾಡುತ್ತಲೇ ಇರುತ್ತದೆ. ತಕ್ಷಣಕ್ಕೆ ದಪ್ಪ ಆಗಲು, ಕಲರ್ ಬರಲು ಸಾಧ್ಯವಾಗದೇ ಹೋದರೂ ಶಕ್ತಿ ಮಾತ್ರ ಬರುತ್ತದೆ ಎಂದು ಹೇಳಬಹುದು.

ಅದು ಹೇಗೆಂದರೆ ನಾವು ಕೆಲವೊಂದು ಆಹಾರ ಪದಾರ್ಥಗಳನ್ನು ಆಯ್ಕೆ ಮಾಡಿ ತಿನ್ನಬೇಕು. ಅವುಗಳನ್ನು ತಿನ್ನುವುದರಿಂದ ಎಷ್ಟೇ ಪ್ರಮಾಣದಲ್ಲಿ ನಾವು ನಿತ್ರಾಣವಾಗಿದ್ದರೂ ಸಹ ಅಷ್ಟೇ ಬೇಗ ನಮ್ಮ ದೇಹಕ್ಕೆ ಶಕ್ತಿ ಮತ್ತು ಚೈತನ್ಯ ಬಂದುಬಿಡುತ್ತದೆ. ಹಾಗಾದರೆ ಅಂತಹ ಆಹಾರಗಳು ನಿಜವಾಗಲೂ ಇದೆಯಾ? ಅವು ಯಾವುವು? ನೋಡೋಣ ಬನ್ನಿ.

ಬೀಟ್ರೂಟ್ ಮತ್ತು ಹಸಿರು ಎಲೆ ತರಕಾರಿಗಳು

9 Impressive Health Benefits of Beets

  • ​ಕಬ್ಬಿಣದ ಅಂಶ ಹೆಚ್ಚಾಗಿರುವ ಬೀಟ್ರೂಟ್ ಒಂದು ಶಕ್ತಿ ವರ್ಧಕ ತರಕಾರಿ ಎಂದು ನೇರವಾಗಿ ಹೇಳಬಹುದು. ಇದು ಉಸಿರಾಟದ ತೊಂದರೆ, ಆಯಾಸ ಇತ್ಯಾದಿಗಳನ್ನು ಸುಲ ಭವಾಗಿ ಹೋಗಲಾ ಡಿಸುತ್ತದೆ. ವ್ಯಾಯಾಮ ಮಾಡಿದ ನಂತರದಲ್ಲಿ ಎದುರಾಗುವ ಸುಸ್ತು ಇತ್ಯಾದಿ ಗಳನ್ನು ಇದು ಕ್ಷಣಮಾತ್ರದಲ್ಲಿ ಇಲ್ಲವಾಗಿಸುತ್ತದೆ.
  • ಇನ್ನು ಹಸಿರು ಎಲೆ ತರಕಾರಿಗಳ ಬಗ್ಗೆ ಮಾತನಾಡ ಬೇಕಾದರೆ ಕಬ್ಬಿಣ ಮತ್ತು ನಾರಿನ ಪ್ರಮಾಣ ಇವುಗಳಲ್ಲಿ ಹೇರಳವಾಗಿದ್ದು, ಇಡೀ ದೇಹದ ತುಂಬಾ ರಕ್ತ ಸಂಚಾರ ವನ್ನು ಉತ್ತೇಜಿಸುತ್ತದೆ ಮತ್ತು ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕ ಸಮರ್ಪಕವಾಗಿ ತಲುಪುವಂತೆ ನೋಡಿ ಕೊಳ್ಳುತ್ತದೆ.

ಬಾಳೆಹಣ್ಣುಗಳು

National Banana Day (April 19th, 2023) | Days Of The Year

  • ಬಾಳೆಹಣ್ಣಿನಲ್ಲಿ ಅಪಾರ ಪ್ರಮಾಣದ ಕ್ಯಾಲೋರಿಗಳು ಒಮ್ಮೆಲೆ ಸಿಗುತ್ತವೆ. ಹಾಗಾಗಿ ಯಾರಿಗೆ ಸುಸ್ತು ಮತ್ತು ಆಯಾಸ ಎದುರಾಗಿ ದೇಹದ ಶುಗರ್ ಲೆವೆಲ್ ಕಮ್ಮಿ ಆಗಿರುತ್ತದೆ
  • ಅಂತಹವರಿಗೆ ತಕ್ಷಣವೇ ದೇಹಕ್ಕೆ ಗ್ಲುಕೋಸ್ ಮತ್ತು ಖನಿಜಾಂಶ ಗಳ ಸಹಿತ ಹೆಚ್ಚಿನ ಪ್ರಮಾಣದ ಮೆಗ್ನೀಷಿ ಯಂ ಮತ್ತು ಪೊಟ್ಯಾಶಿಯಂ ಒದಗಿಸುವ ಹಣ್ಣು ಇದಾಗಿದೆ. ಪುರುಷರ ಲೈಂಗಿಕ ಸಾಮರ್ಥ್ಯ ವನ್ನುಸಹ ಹೆಚ್ಚಿಸುತ್ತದೆ ಬಾಳೆಹಣ್ಣು.

ಮೀನು

ಮೀನು

  • ಮೀನು ತನ್ನಲ್ಲಿ ಒಮೆಗಾ 3 ಫ್ಯಾಟಿ ಆಮ್ಲದ ಪ್ರಮಾಣ ವನ್ನು ಹೊಂದಿದ್ದು, ಅನೇಕ ಬಗೆಯ ಪೌಷ್ಟಿಕ ಸತ್ವಗಳನ್ನು ಒಳಗೊಂಡಿದೆ. ನಿಮ್ಮ ದೇಹದ ಮೆಟಬಾಲಿ ಸಂ ಪ್ರಕ್ರಿಯೆಯನ್ನು ಉತ್ತೇಜಿಸಿ, ಕೊಬ್ಬಿನ ಅಂಶವನ್ನು ಕರಗಿಸುತ್ತದೆ.
  • ದೇಹದಲ್ಲಿ ಹೆಚ್ಚಿನ ಮಟ್ಟದಲ್ಲಿ ಶಕ್ತಿಯ ಪ್ರಮಾಣವನ್ನು ನಿರ್ವಹಿಸುತ್ತದೆ. ಪ್ರೋಟೀನ್, ವಿಟಮಿನ್, ಖನಿಜಾಂಶ ಗಳು ಮತ್ತು ಅಯೋಡಿನ್ ಇದರಲ್ಲಿ ಹೆಚ್ಚಾಗಿದ್ದು, ದೇಹದ ಬಹುತೇಕ ಕಾರ್ಯ ಚಟುವಟಿಕೆಗಳು ಅಚ್ಚು ಕಟ್ಟಾಗಿ ನಡೆಯಲು ನೆರವಾಗುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಿ ಯಾವಾಗಲೂ ಫಿಟ್ ಅಂಡ್ ಫೈನ್ ಆಗಿರುವಂತೆ ನೋಡಿಕೊಳ್ಳುತ್ತದೆ.

ಕಂದು ಬಣ್ಣದ ಅಕ್ಕಿ

ಕಂದು ಬಣ್ಣದ ಅಕ್ಕಿ

  • ​ಕೆಂಪು ಅನ್ನ ಎಂದು ಇದನ್ನು ಹೇಳಬಹುದು. ಇದರಲ್ಲಿ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ಸ್ ಪ್ರಮಾಣ ಹೆಚ್ಚಾಗಿದ್ದು, ನಿಮ್ಮ ಆಹಾರ ಪದ್ಧತಿಯಲ್ಲಿ ಇದನ್ನು ಸೇರಿಸಿ ಕೊಳ್ಳುವು ದರಿಂದ ನಿಮಗೆ ಹೆಚ್ಚಿನ ಪ್ರಮಾಣದಲ್ಲಿ ನಾರಿನ ಅಂಶ ಮತ್ತು ಸ್ಟಾರ್ಚ್ ಸಿಗುತ್ತದೆ ಜೊತೆಗೆ ಇಡೀ ದಿನ ನಿಮಗೆ ಹೊಟ್ಟೆ ಹಸಿವು ಆಗದಂತೆ ಇದು ನೋಡಿಕೊಳ್ಳುತ್ತದೆ.
  • ನೀವು ಸೇವಿಸಿದ ಆಹಾರ ನಿಧಾನವಾಗಿ ಜೀರ್ಣವಾಗುವ ಮೂಲಕ ನಿಮಗೆ ಕ್ರಮೇಣವಾಗಿ ಶಕ್ತಿ ಮತ್ತು ಚೈತನ್ಯ ವನ್ನು ಕೊಡುತ್ತಾ ಹೋಗುತ್ತದೆ.

ಚಿಕನ್

Health Tips What are the problems caused by eating chicken | Health Tips:  ಚಿಕನ್ ತಿನ್ನುವುದರಿಂದ ಆಗುವ ಸಮಸ್ಯೆಗಳೇನು? ಇಂತಹವರು ಹುಷಾರಾಗಿರಿ..| TV9 Kannada

  • ದೇಹದ ಮಾಂಸ ಖಂಡಗಳ ಬೆಳವಣಿಗೆಯಲ್ಲಿ ಉಪ ಯೋಗಕ್ಕೆ ಬರುವ ಪ್ರೋಟಿನ್ ಅಂಶ ಹೆಚ್ಚಾಗಿ ಸಿಗುವುದು ಚಿಕನ್, ಕೋಳಿ ಮೊಟ್ಟೆ, ಕಾಳುಗಳು ಇತ್ಯಾದಿಗಳಲ್ಲಿ. ಮೂಳೆಗಳು ಸಹ ಬಲ ಗೊಳ್ಳುತ್ತವೆ ಮತ್ತು ದೇಹದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ.
  • ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ದೇಹದಲ್ಲಿ ಟೆಸ್ಟೋಸ್ಟಿ ರೋನ್ ಹಾರ್ಮೋನ್ ಪ್ರಮಾಣ ಹೆಚ್ಚಾಗು ವಂತೆ ಮಾಡಿ ಲೈಂಗಿಕ ಸಮರ್ಥತೆಯನ್ನು ಸಹ ಕಾಪಾ ಡುತ್ತದೆ. ಇದರ ಜೊತೆಗೆ ಶಕ್ತಿಯನ್ನು ಹೆಚ್ಚಿಸಿ ವ್ಯಾಯಾಮ ಮಾಡಿದಾಗ ಅಥವಾ ಬೇರೆ ಬೇರೆ ಕೆಲಸಗಳನ್ನು ಮಾಡಿದಾಗ ಸುಸ್ತಾಗದಂತೆ ನೋಡಿ ಕೊಳ್ಳುತ್ತದೆ.

Eat These Foods To Get Energy Instantly.