ಬ್ರೇಕಿಂಗ್ ನ್ಯೂಸ್
29-04-21 06:04 pm Boldsky Kannada ಡಾಕ್ಟರ್ಸ್ ನೋಟ್
ಪ್ರಸ್ತುತ ಇರುವ ಕೊರೋನಾ ಸನ್ನಿವೇಶದಲ್ಲಿ ಪ್ರತಿಯೊಬ್ಬರೂ ರೋಗ ನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಆದರೆ ಈ ರೋಗ ನಿರೋಧಕ ಶಕ್ತಿಯನ್ನು ಹೇಗೆ ಪಡೆಯುವುದು ಎಂಬುದೇ ಎಲ್ಲರಲ್ಲೂ ಇರುವ ದೊಡ್ಡ ಪ್ರಶ್ನೆಯಾಗಿದೆ. ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಅದರ ಜೊತೆಗೆ ನಿಮ್ಮ ಮನೆಯ ಅಡುಗೆ ಕೋಣೆಯಲ್ಲಿರುವ ಕೆಲವೊಂದು ಸಾಮಾಗ್ರಿಗಳಿಂದಲೂ ಅದು ಸಾಧ್ಯ. ಹಾಗಾದರೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಅಡುಗೆ ಕೋಣೆಯಲ್ಲಿರುವ ವಸ್ತುಗಳಾವವು ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ.
ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಅಡುಗೆ ಕೋಣೆಯಲ್ಲಿರುವ ವಸ್ತುಗಳಾವವು ಎಂಬುದನ್ನು ಈ ಕೆಳಗೆ ನೀಡಿದ್ದೇವೆ:
ಸರಿಯಾದ ಪಾತ್ರೆಗಳು:
ಉತ್ತಮ ಶಕ್ತಿ ಮತ್ತು ಎಚ್‌ಬಿ ಮಟ್ಟಕ್ಕಾಗಿ ಅಡುಗೆಮನೆಯಲ್ಲಿ ಕಬ್ಬಿಣದ ಕಡಾಯಿ, ತವಾ ಮತ್ತು ಸೌಟನ್ನು ಮಾತ್ರ ಬಳಸಬೇಕು. ಕಬ್ಬಿಣದ ಪಾತ್ರೆಗಳಲ್ಲಿ ಬೇಯಿಸಿದ ಆಹಾರವು ಪೌಷ್ಟಿಕಾಂಶಯುಕ್ತವಾಗಿರುತ್ತದೆ ಮತ್ತು ರೋಗಗಳನ್ನು ಪರಿಣಾಮಕಾರಿಯಾಗಿ ಹೋರಾಡಲು ಸಹಾಯ ಮಾಡುತ್ತದೆ.
ಒಣದ್ರಾಕ್ಷಿ ಜೊತೆ ಮೊಸರು:
ಮೊಸರನ್ನು ಊಟದ ಮಧ್ಯೆ ತಿನ್ನಲು ಸಲಹೆ ನೀಡಲಾಗುತ್ತದೆ. ಮೊಸರಿನ ಜೊತೆಗೆ ಒಣದ್ರಾಕ್ಷಿಗಳನ್ನು ಬಳಸುವುದರಿಂದ ಅವುಗಳು ಪ್ರೋಬಯಾಟಿಕ್ಗಳ ಪರಿಪೂರ್ಣ ಪ್ಯಾಕೇಜ್ ಆಗಿರುತ್ತದೆ. ಆದ್ದರಿಂದ ಒಣದ್ರಾಕ್ಷಿಯೊಂದಿಗೆ ಮೊಸರನ್ನು ಸೇರಿಸಿ, ಸೇವಿಸಿ.
ಕಬ್ಬಿನ ಹಾಲು:
ಬೇಸಿಗೆಯಲ್ಲಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮಧ್ಯಾಹ್ನದ ವೇಳೆ ಕಬ್ಬಿನ ರಸವನ್ನು ಕುಡಿಯಿರಿ. ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತದೆ.
ತುಪ್ಪದ ಬಳಕೆ:
ಪ್ರತಿ ಊಟದಲ್ಲಿ ತುಪ್ಪವನ್ನು ತಿನ್ನುವುದು ಒಳ್ಳೆಯ ಅಭ್ಯಾಸವಾದರೂ, ಮಲಗುವ ಮುನ್ನ ರಾತ್ರಿ ನಿಮ್ಮ ಕಾಲಿನ ಪಾದದ ಅಡಿಯಲ್ಲಿ ತುಪ್ಪವನ್ನು ಹಚ್ಚುವುದು ಆರೋಗ್ಯಕರ ಅಭ್ಯಾಸವಾಗಿದೆ. ಏಕೆಂದರೆ ಇದು ವಿಶ್ರಾಂತಿಯ ನಿದ್ರೆಗೆ ಸಹಾಯ ಮಾಡುತ್ತದೆ ಮತ್ತು ಮರುದಿನ ಬೆಳಿಗ್ಗೆ ನೀವು ಫ್ರೆಶ್ ಆಗಿ ಏಳುವಂತೆ ಮಾಡುತ್ತದೆ.
ರಾಗಿಯ ಬಳಕೆ:
ಮಂದತೆಯನ್ನು ದೂರ ಮಾಡಲು ಪ್ರತಿದಿನ ಯಾವುದೇ ರೂಪದಲ್ಲಿ ರಾಗಿಯನ್ನು ಸೇವಿಸಬೇಕು. ರಾಗಿ ಜ್ಯೂಸ್, ರಾಗಿ ದೋಸೆ ಅಥವಾ ರಾಗಿ ಮುದ್ದೆ. ಮನೆಯಿಂದ ಕೆಲಸ ಮಾಡುವ ಜನರು ದಿನವಿಡೀ ಶಕ್ತಿಯುತವಾಗಿರಲು ಇದನ್ನು ಪ್ರತಿದಿನ ತಿನ್ನಬೇಕು. ಇದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದಲ್ಲದೇ ಚೈತನ್ಯದಿಂದ ಕೂಡಿರುತ್ತೀರಿ.
ಉಪ್ಪಿನ ಬಳಕೆ:
ನಾವೆಲ್ಲರೂ ನಮ್ಮ ದೈನಂದಿನ ಜೀವನದಲ್ಲಿ ಒಂದು ಬಗೆಯ ಉಪ್ಪನ್ನು ಬಳಸುತ್ತಿರುತ್ತೇವೆ. ಆದರೆ ಪ್ರತಿನಿತ್ಯ ವಿವಿಧ ಬಗೆಯ ಉಪ್ಪನ್ನು ಬಳಸಬೇಕು ಎಂದು ತಜ್ಞರು ಸೂಚಿಸುತ್ತಾರೆ. ಒಬ್ಬರು ನಿಯಮಿತವಾಗಿ ಕನಿಷ್ಠ 4 ಬಗೆಯ ಉಪ್ಪನ್ನು ಬಳಸಬೇಕು, ಇದರಿಂದ ದೇಹವು ಅದರ ಒಂದು ರೂಪಕ್ಕೆ ಒಗ್ಗಿಕೊಳ್ಳುವುದಿಲ್ಲ.
ದ್ವಿದಳ ಧಾನ್ಯಗಳ ಬಳಕೆ:
ದ್ವಿದಳ ಧಾನ್ಯಗಳಿಗೆ ಸಂಬಂಧಿಸಿದಂತೆ, ಅವು ದೈನಂದಿನ ಆಹಾರದ ಅವಿಭಾಜ್ಯ ಅಂಗವಾಗಿರಬೇಕು. ಅಡುಗೆ ಮಾಡುವ ಮೊದಲು ಅವುಗಳನ್ನು ನೆನೆಸಿ ಮೊಳಕೆ ಬರುವಂತೆ ಮಾಡಬೇಕು. ಅವುಗಳನ್ನು ರಾಗಿಗಳೊಂದಿಗೆ ಸರಿಯಾದ ಪ್ರಮಾಣದಲ್ಲಿ ಬೆರೆಸಬೇಕು. ಪ್ರತಿ ವಾರ 5 ವಿಧಗಳಲ್ಲಿ ಕನಿಷ್ಠ 5 ಬಗೆಯ ದ್ವಿದಳ ಧಾನ್ಯಗಳನ್ನು ಸೇವಿಸಬೇಕು.
ಗುಲ್ಕಂಡ್ ಬಳಕೆ:
ಬೇಸಿಗೆಯಲ್ಲಿ, ಶಾಖದಿಂದ ದೂರವಿರಲು, ಗುಲ್ಕಂಡ್ ಅನ್ನು ಸೇವಿಸಬೇಕು ಮತ್ತು ಅದನ್ನು ಹಾಲು, ನೀರು ಅಥವಾ ವೀಳ್ಯದೆಲೆಯೊಂದಿಗೆ ಸೇವಿಸಬೇಕು.
A Kannada Copy Of BOLDSKY
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm