ಕುಂದಾಪುರ ಕಡಲ ತೀರದಲ್ಲಿ ಪೆಟ್ರೋಲಿಯಂ ತ್ಯಾಜ್ಯ ; ಎಂಆರ್ ಪಿಎಲ್ ತ್ಯಾಜ್ಯವೇ ? ಐಎಸ್ ಪಿಆರ್ ಎಲ್ ಸೋರಿಕೆಯೇ ? ಸ್ಥಳೀಯರ ಕಳವಳ, ಅಧಿಕಾರಿಗಳ ನಿರ್ಲಕ್ಷ್ಯ ! 

24-05-22 08:42 pm       HK News Desk   ಕರಾವಳಿ

ಕುಂದಾಪುರ ಮತ್ತು ಬೀಜಾಡಿಯ ಸಮುದ್ರ ತೀರದಲ್ಲಿ ಪೆಟ್ರೋಲಿಯಂ ತ್ಯಾಜ್ಯ ಕಂಡುಬಂದಿದ್ದು ಸಮುದ್ರ ನೀರಿನಲ್ಲಿ ಕಪ್ಪುದ್ರವ ತೀರದುದ್ದಕ್ಕೂ ಹರಡಿಕೊಂಡಿದೆ.

ಕುಂದಾಪುರ, ಮೇ 24 : ಕುಂದಾಪುರ ಮತ್ತು ಬೀಜಾಡಿಯ ಸಮುದ್ರ ತೀರದಲ್ಲಿ ಪೆಟ್ರೋಲಿಯಂ ತ್ಯಾಜ್ಯ ಕಂಡುಬಂದಿದ್ದು ಸಮುದ್ರ ನೀರಿನಲ್ಲಿ ಕಪ್ಪುದ್ರವ ತೀರದುದ್ದಕ್ಕೂ ಹರಡಿಕೊಂಡಿದೆ. ನೀರಿನಲ್ಲಿ ಹೆಪ್ಪುಗಟ್ಟಿದ ರೀತಿ ದೊಡ್ಡ ಮಟ್ಟದಲ್ಲಿ ಟಾರ್‌ಬಾಲ್‌ಗಳು ಗೋಚರಿಸಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. 

ಸಮುದ್ರಕ್ಕೆ ಬಿಡಲಾಗುವ ಪೆಟ್ರೋಲಿಯಂ ತ್ಯಾಜ್ಯ ಉಂಡೆ ಕಟ್ಟಿರುವ (ಟಾರ್ ಬಾಲ್) ಮಾದರಿಯಲ್ಲಿ ಈ ಭಾಗದ ಸಮುದ್ರ ದಡದಲ್ಲಿ ಕಂಡುಬಂದಿದೆ. ಇದರಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳಿರುವುದು ಗೋಚರಿಸಿದ್ದು ಸಮುದ್ರ ತೀರದ ಸ್ವಚ್ಛತೆಗೆ ತೆರಳಿದ್ದ ಕೆಲವರಿಗೆ ಎಣ್ಣೆ ಅಂಶದ ಟಾರ್ ಚಪ್ಪಲಿಗೆಲ್ಲಾ ಮೆತ್ತಿಕೊಂಡಿದೆ. 

Udupi: About 50 kg of oil spill filth collected at Malpe beach- The New  Indian Express

ಮೈಕ್ರೋಪ್ಲಾಸ್ಟಿಕ್, ಟಾರ್ ಬಾಲ್ ಜಲಚರಗಳು ಮತ್ತು ಮಾನವನಿಗೆ ಹಾನಿಕರವಾಗಿದ್ದು ಅಧಿಕಾರಿಗಳು ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದು ಸುರತ್ಕಲ್ ಬಳಿಯ ಎಂಆರ್ ಪಿಎಲ್ ನಿಂದ ಸಮುದ್ರಕ್ಕೆ ಬಿಡಲಾಗುವ ತ್ಯಾಜ್ಯವೇ ? ಐಎಸ್ ಪಿಆರ್ ಎಲ್ ಭೂತಗ ಕೊಳವೆಯಿಂದಾದ ಸೋರಿಕೆಯೇ ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ. ಎಂಆರ್ ಪಿಎಲ್ ಕೈಗಾರಿಕೆಯ ತ್ಯಾಜ್ಯವನ್ನು ಸಮುದ್ರಕ್ಕೆ ಪೈಪ್ ಹಾಕಿ ಬಿಡಲಾಗುತ್ತಿದೆ.‌

Kundapur beach weekly clean-up drive throws up 10-15% biomedical waste |  Mangaluru News - Times of India

ಸಮುದ್ರ ಜೈವಿಕ ವ್ಯವಸ್ಥೆಗೆ ಮಾರಕವಾದ ಪೆಟ್ರೋಲಿಯಂ ತ್ಯಾಜ್ಯ ಸಮುದ್ರ ತೀರದಲ್ಲಿ ಕಿಲೋಮೀಟರ್ ಉದ್ದಕ್ಕೂ ಹರಡಿರುವುದು ಹೇಗೆ? ಸಮುದ್ರದ ಮೀನುಗಳನ್ನು ತಿನ್ನುವ ಮಾನವನ ಆರೋಗ್ಯಕ್ಕೂ ಇದು ಮಾರಕವಲ್ಲವೇ? ಇದರ ಬಗ್ಗೆ ಕೂಡಲೇ ಸಂಬಂಧಪಟ್ಟವರು ಪರಿಶೀಲನೆ ನಡೆಸಬೇಕು ಎಂದು ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ತಂಡದ ಸದಸ್ಯರು ಒತ್ತಾಯಿಸಿದ್ದಾರೆ. ಬೀಜಾಡಿ ಸಮುದ್ರ ತೀರದಲ್ಲಿ ಸ್ವಚ್ಛತಾ ಕಾರ್ಯಕ್ಕೆ ತೊಡಗಿದ್ದಾಗ ನೀರಿನಲ್ಲಿ ತೇಲುವ ಟಾರನ್ನು ಪತ್ತೆ ಮಾಡಿದ್ದಾರೆ.

Conservationists working towards turtle conservation were distraught, after they noticed tar balls and oil spills on the beaches of Kundapur.