ಬ್ರೇಕಿಂಗ್ ನ್ಯೂಸ್
12-02-26 02:34 pm HK News Desk ಕ್ರೈಂ
ನವದೆಹಲಿ, ಫೆ.12 : ರಾಜಧಾನಿ ದೆಹಲಿ ಪೀರಾಗಢಿಯಲ್ಲಿ ಪಾರ್ಕ್ ಮಾಡಿದ್ದ ಕಾರಿನೊಳಗೆ ಕೆಲವು ದಿನಗಳ ಹಿಂದೆ ಮೂವರ ಶವಗಳು ಪತ್ತೆಯಾಗಿದ್ದವು. ಘಟನೆ ಬಗ್ಗೆ ತನಿಖೆ ನಡೆಸಿದ ಪೊಲೀಸರು ಉತ್ತರ ಪ್ರದೇಶ ಫಕೀರ್ ಬಾಬಾ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಫಿರೋಝಾಬಾದ್ ನಿವಾಸಿ ಕಮರುದ್ದೀನ್ ಅಲಿಯಾಸ್ ‘ಫಕೀರ್ ಬಾಬಾ’, ಪೂಜೆ ಮತ್ತು ಆಧ್ಯಾತ್ಮಿಕ ಚಿಕಿತ್ಸೆ ಹೆಸರಿನಲ್ಲಿ ಜನರಿಗೆ ವಿಷ ಬೆರೆಸಿದ ಲಡ್ಡುಗಳನ್ನು ತಿನ್ನಿಸುತ್ತಿದ್ದ ಎಂದು ತನಿಖೆ ವೇಳೆ ಬಯಲಾಗಿದೆ. ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಇದೇ ರೀತಿ ಕನಿಷ್ಠ ಐದು ಜನರನ್ನು ಕೊಲೆ ಮಾಡಿದ್ದಾನೆ ಎಂದು ತನಿಖಾ ಅಧಿಕಾರಿಗಳು ಶಂಕಿಸಿದ್ದಾರೆ.
ದೆಹಲಿ ಪೀರಾಗಢಿಯಲ್ಲಿ ಇತ್ತೀಚೆಗೆ ಪಾರ್ಕ್ ಮಾಡಿದ್ದ ಕಾರಿನಲ್ಲಿ 76 ವರ್ಷದ ರಣಧೀರ್, 47 ವರ್ಷದ ನರೇಶ್ ಸಿಂಗ್ ಮತ್ತು 40 ವರ್ಷದ ಲಕ್ಷ್ಮಿ ದೇವಿ ಎಂಬವರ ಶವಗಳು ಪತ್ತೆಯಾಗಿದ್ದವು. ಫಕೀರ್ ಬಾಬಾ ಈ ಮೂವರಿಗೆ ವಿಷದ ಲಡ್ಡುಗಳನ್ನು ನೀಡಿದ್ದು ಅದು ಸೇವಿಸಿದ ಬಳಿಕ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಸಂತ್ರಸ್ತರು ಲಡ್ಡುಗಳನ್ನು ತಿಂದು ಸತ್ತಿರಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಬಾಬಾ ವಿರುದ್ಧ ಉತ್ತರ ಕನ್ನಡ ಪ್ರದೇಶದ ಫಿರೋಜಾಬಾದ್ ಮತ್ತು ಧೋಲ್‌ಪುರ್‌ನಲ್ಲಿ ಸಹ ಇದೇ ರೀತಿ ಪ್ರಕರಣಗಳು ದಾಖಲಾಗಿವೆ. ಫಿರೋಜಬಾದ್‌ನಲ್ಲಿ ಫಕೀರ್ ಬಾಬಾ ನೀಡಿದ ವಿಷದ ಲಡ್ಡುಗಳನ್ನು ಸೇವಿಸಿದ ಬಳಿಕ ಇಬ್ಬರು ಸಾವನ್ನಪ್ಪಿದ್ದರು. ಧೋಲ್‌ಪುರ್‌ನಲ್ಲಿ ಕೂಡ ಇದೇ ರೀತಿಯ ಒಂದು ಪ್ರಕರಣ ದಾಖಲಾಗಿದೆ. 2025ರ ಮೇ ತಿಂಗಳಲ್ಲಿ ಈ ಬಗ್ಗೆ ರಾಮ್ ಲಖನ್ ಎಂಬವರು ದೂರು ನೀಡಿದ್ದರು. ಅವರ ಸಂಬಂಧಿಕರ ಮಗ ಫಕೀರ್ ಬಾಬಾನ ಪೂಜೆಯಲ್ಲಿ ಪಾಲ್ಗೊಂಡು ಅವರು ನೀಡಿದ್ದ ವಿಷದ ಲಡ್ಡು ತಿಂದು ಮೃತಪಟ್ಟಿದ್ದಾನೆ ಎಂದು ಆರೋಪಿಸಿದ್ದರು. ಘಟನಾ ಸ್ಥಳದಲ್ಲಿ ಲಡ್ಡುಗಳು, ಪೂಜಾ ಸಾಮಗ್ರಿಗಳು ಹಾಗೂ ಕನ್ನಡಕಗಳು ಸಿಕ್ಕಿದ್ದವು.
ಸದ್ಯ ಈ ಎಲ್ಲಾ ಆರು ಪ್ರಕರಣಗಳ ತನಿಖೆ ನಡೆಯುತ್ತಿದ್ದು, ದೆಹಲಿ ಪೊಲೀಸರು ಉತ್ತರ ಪ್ರದೇಶ ಮತ್ತು ರಾಜಸ್ಥಾನ ಪೊಲೀಸರ ಸಹಯೋಗದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಫಕೀರ್ ಬಾಬಾ ಸಂತ್ರಸ್ತರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸುತ್ತಿದ್ದ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Delhi Police have arrested a self-styled godman, Fakir Baba, for allegedly killing six people by giving them poison-laced laddus in the name of spiritual rituals. Three recent deaths in a parked car in Delhi’s Peeragarhi led to his arrest. Police suspect similar cases in Uttar Pradesh and Rajasthan, and investigations are ongoing.
04-04-26 07:33 pm
HK News Staffer
ಪಶ್ಚಿಮ ಏಷ್ಯಾ ಸಂಘರ್ಷ; ಭಾರತದ ರಾಜತಾಂತ್ರಿಕ ನಡೆಯನ್...
03-04-26 04:14 pm
ಬಾಗಲಕೋಟ, ದಾವಣಗೆರೆ ಉಪ ಚುನಾವಣೆ; ಗೆಲುವು ಕಷ್ಟ- ಗು...
03-04-26 03:48 pm
ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಕುಮಾರಸ್ವಾಮಿ- ಎಡಿಜ...
02-04-26 09:31 pm
ನಾನು ಮುಖ್ಯಮಂತ್ರಿಯಾಗಿ ಮುಸ್ಲಿಂ ಅಲ್ಪಸಂಖ್ಯಾತ ಮೀಸಲ...
02-04-26 08:07 pm
03-04-26 07:52 pm
HK News Staffer
50 ವರ್ಷಗಳ ಬಳಿಕ ಮಾನವ ಸಹಿತ ಚಂದ್ರಯಾನ; ಅಮೆರಿಕ, ಕೆ...
03-04-26 07:35 am
ಚಿಂತಿಸಬೇಡಿ, ನಿಮ್ಮ ಹಡಗು ಸುರಕ್ಷಿತ; ಹಾರ್ಮುಜ್ ಜಲಸ...
02-04-26 10:24 pm
ಇರಾನ್ ಕದನವಿರಾಮ ಕೇಳುತ್ತಿದೆ, ಒಪ್ಪದಿದ್ದರೆ ಶಿಲಾಯು...
01-04-26 11:03 pm
ಇರಾನ್ ಮೇಲೆ ಅಣ್ವಸ್ತ್ರ ದಾಳಿಗೆ ಅಮೆರಿಕ ಸಿದ್ಧತೆ; ವ...
01-04-26 12:46 pm
03-04-26 11:43 am
HK News Staffer
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದು...
01-04-26 09:04 pm
ಮುಸ್ಲಿಂ ಮದುವೆಯಲ್ಲಿ ಕೊರಗಜ್ಜ ದೈವದ ಅನುಕರಣೆ ; ಮದು...
31-03-26 10:06 pm
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
04-04-26 05:42 pm
HK News Staffer
ಅತ್ತೆ, ಮಾವನ ಕಿರುಕುಳಕ್ಕೆ ಬೇಸತ್ತು ಗರ್ಭಿಣಿ ಮಹಿಳೆ...
04-04-26 05:39 pm
ಇನ್ಫೋಸಿಸ್ ಸಿಎಸ್ಆರ್ ಫಂಡ್ ತೆಗೆಸಿಕೊಡುವುದಾಗಿ ವಂಚನ...
04-04-26 04:36 pm
ಮಂಗಳೂರಿನಲ್ಲಿ ಎಪ್ರಿಲ್ 19ರಂದು ಸೀ ಬ್ರೀಜ್ ಮ್ಯಾರಥಾ...
04-04-26 11:32 am
ಮೂರನೇ ಮಗುವೂ ಹೆಣ್ಣಾಗುತ್ತದೆಂದು ಗರ್ಭಿಣಿ ಪತ್ನಿ, ಇ...
03-04-26 11:00 pm