ಬ್ರೇಕಿಂಗ್ ನ್ಯೂಸ್
24-05-22 09:06 pm Mangalore Correspondent ಕರಾವಳಿ
ಮಂಗಳೂರು, ಮೇ 24: ಗುರುಪುರ ಬಳಿಯ ಮಳಲಿ ಪೇಟೆಯ ಜುಮ್ಮಾ ಮಸೀದಿಯಲ್ಲಿ ದೇವಸ್ಥಾನದ ಮಾದರಿ ರಚನೆ ಕಂಡುಬಂದ ಹಿನ್ನೆಲೆಯಲ್ಲಿ ಹಿಂದು ಸಂಘಟನೆಗಳು ಮಸೀದಿ ಬಗ್ಗೆ ತಾಂಬೂಲ ಪ್ರಶ್ನೆ ಇಟ್ಟಿರುವುದರಿಂದ ಪರಿಸರದಲ್ಲಿ ಶಾಂತಿ ಕದಡಬಾರದು ಎನ್ನುವ ದೃಷ್ಟಿಯಿಂದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಮಳಲಿ ದರ್ಗಾದ ಸುತ್ತಲಿನ 500 ಮೀಟರ್ ಪ್ರದೇಶದಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದಾರೆ.
ತೆಂಕುಳಿಪಾಡಿ ಗ್ರಾಮದ ಜೋಡುತಡಮೆ ಎಂಬಲ್ಲಿನ ರಾಮಾಂಜನೇಯ ಭಜನಾ ಮಂದಿರದಲ್ಲಿ ಹಿಂದು ಸಂಘಟನೆಗಳ ವತಿಯಿಂದ ತಾಂಬೂಲ ಪ್ರಶ್ನೆ ಆಯೋಜಿಸಲಾಗಿದೆ. ಈ ಧಾರ್ಮಿಕ ಕಾರ್ಯಕ್ರಮ ಮೇ 25ರ ಬೆಳಗ್ಗೆ 8ರಿಂದ ಸಂಜೆಯ ವರೆಗೆ ನಡೆಯುವುದರಿಂದ ಈ ಸಂದರ್ಭದಲ್ಲಿ ಮಸೀದಿ ಕುರಿತು ಚರ್ಚೆಗಳು ಏರ್ಪಡುವುದರಿಂದ ಶಾಂತಿ ಸೌಹಾರ್ದ ಕೆಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಬಜ್ಪೆ ಠಾಣೆ ವ್ಯಾಪ್ತಿಯ ತೆಂಕುಳಿಪಾಡಿ ಗ್ರಾಮದ ಮಳಲಿ ಪೇಟೆಯ ಜುಮ್ಮಾ ಮಸೀದಿಯ ಸುತ್ತ ಮುತ್ತಲಿನ 500 ಮೀಟರ್ ಪ್ರದೇಶದಲ್ಲಿ (ಕಾಚಿಲಕೋಡಿಯಿಂದ ಮಳಲಿ ಕಡೆಗೆ ಬರುವ ರಸ್ತೆ, ಗಂಜಿಮಠದಿಂದ ಮಳಲಿ ಮಸೀದಿ ಕಡೆಗೆ ಬರುವ ರಸ್ತೆ, ಹಾಗೂ ಕೈಕಂಬ ಕಡೆಯಿಂದ ಜೋಡುತಡಮೆ ವರೆಗಿನ ರಸ್ತೆ) ಮೇ 24ರ ಸಂಜೆ 8 ಗಂಟೆಯಿಂದ ಮೇ 26ರ ಬೆಳಗ್ಗೆ 8 ಗಂಟೆ ವರೆಗೆ 144 ಸೆಕ್ಷನ್ ಅಡಿ ನಿಷೇಧಾಜ್ಞೆಯನ್ನು ಹೊರಡಿಸಲಾಗಿದೆ.




ಸೆಕ್ಷನ್ ಇರುವುದರಿಂದ ಈ ಭಾಗದಲ್ಲಿ ಯಾವುದೇ ರೀತಿಯಲ್ಲೂ ಘೋಷಣೆ ಕೂಗುವುದು, ಗುಂಪು ಸೇರುವುದು, ಪಟಾಕಿ ಸಿಡಿಸುವುದು, ಶಸ್ತ್ರ, ದೊಣ್ಣೆಗಳನ್ನು ಒಯ್ಯುವುದು, ಸ್ಫೋಟಕಗಳನ್ನು ಒಯ್ಯುವುದು, ಪ್ರತಿಭಟನೆ, ಧರಣಿ, ಭಿತ್ತಿಪತ್ರ ಪ್ರದರ್ಶಿಸುವುದು ಕಾನೂನು ರೀತ್ಯ ಅಪರಾಧವಾಗಿರುತ್ತದೆ ಎಂದು ಪೊಲೀಸ್ ಕಮಿಷನರ್ ಈ ಕುರಿತ ಆದೇಶದಲ್ಲಿ ತಿಳಿಸಿದ್ದಾರೆ. ಮಸೀದಿ ನವೀಕರಣ ಸಂದರ್ಭ ಒಳಭಾಗದಲ್ಲಿ ದೇವಸ್ಥಾನದ ಚಿತ್ರಣ ಕಂಡುಬಂದಿದ್ದರಿಂದ ಸುದ್ದಿ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆಯಾಗಿದ್ದು, ಮಂಗಳೂರಿನಲ್ಲಿಯೂ ಮಸೀದಿಯೊಳಗೆ ದೇವಸ್ಥಾನ, ಮತ್ತೊಂದು ಗ್ಯಾನವಾಪಿ ಎನ್ನುವ ರೀತಿ ಬಿಂಬಿತವಾಗಿದೆ. ಹೀಗಾಗಿ ಮಂಗಳೂರು ಕೋಮು ಸೂಕ್ಷ್ಮ ಪ್ರದೇಶ ಆಗಿರುವುದರಿಂದ ಪೊಲೀಸರು ಸೆಕ್ಷನ್ ಜಾರಿಗೊಳಿಸಿ ಶಾಂತಿ ಕಾಪಾಡಲು ಮುಂದಾಗಿದ್ದಾರೆ.
Malali Mosque Temple row, 144 section ordered in Mangalore Bajpe Police Station limits on may 25th as VHP holds "Thamboola Prashe".
11-06-26 08:31 pm
HK News Staffer
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
ನಿಮ್ಮಪ್ಪನಿಂದಲೇ ಆರ್ಎಸ್ಎಸ್ಗೆ ಏನು ಮಾಡೋಕೆ ಆಗಿಲ...
09-06-26 07:04 pm
10-06-26 06:42 pm
HK News Staffer
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
11-06-26 06:37 pm
HK News Staffer
26 ವರ್ಷಗಳ ಬಳಿಕ ತಾಯಿ ಮಡಿಲು ಸೇರಿದ ಮಗ ! ಧರ್ಮಸ್ಥಳ...
11-06-26 04:21 pm
ಕರಾವಳಿಯಲ್ಲಿ ಮುಂಗಾರು ಅಬ್ಬರ; ಮಂಗಳೂರಿನ ಬೀಚ್ಗಳಲ...
11-06-26 02:47 pm
ಮಂಗಳೂರು ನಗರದಲ್ಲಿ ಅಕ್ರಮ ಫ್ಲೆಕ್ಸ್ , ಬ್ಯಾನರ್ ತ...
10-06-26 10:03 pm
ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ ; ರೈತರ ಕಷ್ಟಕ್ಕ...
10-06-26 05:07 pm
11-06-26 08:44 pm
HK News Staffer
ಮಾಣಿ ; ಡಿವೈಡರ್ಗೆ ಡಿಕ್ಕಿ ಹೊಡೆದ ಕಾರು, ಗಾಡಿ ಪಲ್...
11-06-26 11:43 am
ಬ್ರಹ್ಮಾವರ; ತಾಯಿಯ ಮಡಿಲಲ್ಲೇ ವಿಧಿಯ ಅಟ್ಟಹಾಸ..! 40...
11-06-26 11:40 am
ಬೀಗ ಹಾಕಿದ ಮನೆಗಳೇ ಟಾರ್ಗೆಟ್; ತಮಿಳುನಾಡು, ಆಂಧ್ರಪ್...
10-06-26 01:48 pm
Udupi Fight, Temple Parking: ಗಾಡಿಗೆ ಸೈಡ್ ಕೊಡು...
10-06-26 12:09 pm