ಬ್ರೇಕಿಂಗ್ ನ್ಯೂಸ್
26-05-22 03:07 pm Mangalore Correspondent ಕರಾವಳಿ
ಮಂಗಳೂರು, ಮೇ 26 : ಹತ್ತನೇ ತರಗತಿಯಲ್ಲಿ ಸಮಾಜ ವಿಜ್ಞಾನ ಪಠ್ಯದಲ್ಲಿದ್ದ ನಾರಾಯಣ ಗುರು, ಪೆರಿಯಾರ್, ಭಗತ್ ಸಿಂಗ್ ಕುರಿತ ಪಠ್ಯಗಳನ್ನು ಕನ್ನಡದಲ್ಲಿ ಕೊಡಲಾಗುತ್ತಿದೆ ಎಂದು ಶಿಕ್ಷಣ ಸಚಿವರು ಸಮಜಾಯಿಷಿ ನೀಡಿದ್ದಾರೆ. ಸಮಾಜ ವಿಜ್ಞಾನದಲ್ಲಿ ಪಠ್ಯ ಬದಲಾಗಿಲ್ಲ ಎಂದು ಹೇಳುತ್ತಿದ್ದವರು ಈಗ ಕನ್ನಡಕ್ಕೆ ನಾರಾಯಣ ಗುರು ಪಠ್ಯ ಹೇಗೆ ಹೋದವು ಎನ್ನುವುದಕ್ಕೆ ಸ್ಪಷ್ಟನೆ ನೀಡಬೇಕು. ಬಿಜೆಪಿ ನಾಯಕರು ಬರೀ ಸುಳ್ಳು ಹೇಳುತ್ತಿದ್ದಾರೆ. ಆರಂಭದಲ್ಲಿ ಸರಕಾರದ್ದೇ ವೆಬ್ ಸೈಟ್ ನಲ್ಲಿ ಪಠ್ಯದ ಕುರಿತ ಪಿಡಿಎಫ್ ಫೈಲ್ ಗಳಿದ್ದವು. ಆನಂತರ ಅವನ್ನು ತೆಗೆದು ಹಾಕಲಾಗಿದೆ. ಇವರೇನು ಮಕ್ಕಳ ಪಠ್ಯದ ವಿಚಾರದಲ್ಲಿ ಆಟವಾಡುತ್ತಿದ್ದಾರೆಯೇ ಎಂದು ವಿಧಾನ ಪರಿಷತ್ ಸದಸ್ಯ, ದ.ಕ. ಜಿಲ್ಲಾ ಕಾಂಗ್ರೆಸ್ ನಾಯಕ ಹರೀಶ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಹರೀಶ್ ಕುಮಾರ್, ಶಿಕ್ಷಣದಲ್ಲಿ ಒಂದು ಪಕ್ಷದ ಅಜೆಂಡಾಗಳನ್ನು ತರುತ್ತಿದ್ದಾರೆ. ಇದೇ ಕಾರಣಕ್ಕೆ ದೇವನೂರು ಮಹಾದೇವ, ಬರಗೂರು, ಶ್ರೀಪಾದ ಭಟ್, ಮರುಳಸಿದ್ದಯ್ಯ ಹೀಗೆ ಹಲವರು ತಮ್ಮ ಪಠ್ಯವನ್ನು ಪುಸ್ತಕದಲ್ಲಿ ತೆಗೆದುಕೊಳ್ಳುವುದು ಬೇಡ ಎಂದು ಹೇಳಿದ್ದಾರೆ.
ನಾರಾಯಣ ಗುರು, ಪೆರಿಯಾರ್ ಬಗ್ಗೆ ಪಾಠವನ್ನು ಕನ್ನಡದಲ್ಲಿ ಕೊಡುತ್ತೇವೆ ಎನ್ನುತ್ತಿದ್ದಾರೆ. ಆದರೆ ಕನ್ನಡ ಭಾಷೆ ಅನ್ನುವುದು ಐಚ್ಛಿಕ ವಿಷಯ. ಎಲ್ಲರು ಇದನ್ನು ಓದುವುದಿಲ್ಲ. ಸಾರ್ವಕಾಲಿಕ ದಾರ್ಶನಿಕರ ಕುರಿತ ಪಾಠಗಳನ್ನು ಸಮಾಜ ವಿಜ್ಞಾನದಲ್ಲಿಯೇ ಕೊಡಬೇಕು. ಇವರು ಕನ್ನಡದಲ್ಲಿ ಕೊಟ್ಟರೆ ಹೆಚ್ಚಿನ ಮಕ್ಕಳಿಗೆ ಅವರ ವಿಚಾರಗಳು ತಲುಪಲ್ಲ.
ಶಾಲಾ ಮಕ್ಕಳದು ಮೃದು ಮನಸ್ಸು. ಅವರ ಮನಸ್ಸಿಗೆ ಗೊಂದಲಕಾರಿ, ಒಂದು ಪಕ್ಷದ ವಿಚಾರಗಳನ್ನು ಹೇರುವುದು ತಪ್ಪು. ಒಂದು ಸಮೂಹಕ್ಕೆ ಸೀಮಿತವಾದ ನಾಯಕರ ಪಾಠಗಳನ್ನು ಮಕ್ಕಳಿಗೆ ಹೇರುವುದು ಯಾಕೆ ? ಇದರಿಂದ ಮಕ್ಕಳ ಸುಪ್ತ ಮನಸ್ಸಿನ ಮೇಲೆ ಪರಿಣಾಮಗಳಾಗುತ್ತವೆ. ಪಠ್ಯ ರಚನಾ ಸಮಿತಿಯ ರೋಹಿತ್ ಚಕ್ರತೀರ್ಥ ಒಂದು ಕಡೆಯಷ್ಟೆ ಒಲವುಳ್ಳವರು. ಅವರ ಬಗ್ಗೆ ಬಹಳಷ್ಟು ಆಕ್ಷೇಪಗಳು ಕೇಳಿಬರುತ್ತಿವೆ. ಅವರನ್ನು ಬದಲಿಸಿ ನುರಿತ ಶಿಕ್ಷಣ ತಜ್ಞರನ್ನು ಆ ಸಮಿತಿಗೆ ನೇಮಿಸಿ. ಸರಕಾರಕ್ಕೆ ತಾಕತ್ತಿದ್ದರೆ ಚಕ್ರತೀರ್ಥ ಕಮಿಟಿಯನ್ನು ತೆಗೆದು ಹಾಕಬೇಕು. ಸೂಕ್ತ ಶಿಕ್ಷಣ ತಜ್ಞರನ್ನು ಕಮಿಟಿಗೆ ಸೇರಿಸಬೇಕು. ಇವರು ಏನು ಹೇಳಿದ್ರೂ ಮಕ್ಕಳು ಕಲಿಯಬೇಕು ಎಂದರೇನು? ಮೌಲ್ಯಾಧರಿತ ಶಿಕ್ಷಣ ಬೇಕು ಎನ್ನುವುದು ನಮ್ಕ ವಾದ. ಸೂಕ್ಷ್ಮ ವಿಚಾರದಲ್ಲಿ ಸರಕಾರ ಸೂಕ್ತವಾಗಿ ಸ್ಪಂದಿಸಬೇಕು. ಇಲ್ಲದಿದ್ದರೆ ಎಡವಟ್ಟು ಆಗುತ್ತದೆ ಎಂದು ಹೇಳಿದರು.
ಹೊಸ ಶಿಕ್ಷಣ ಸಚಿವರು ಬಂದ ಬಳಿಕ ಬರೀ ಎಡವಟ್ಟು ಮಾತ್ರ ಆಗಿರುವುದು. ಈಗ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಅಕ್ರಮ ಆಗಿರುವ ಬಗ್ಗೆ ಪತ್ರಿಕೆಯಲ್ಲಿ ಬಂದಿದೆ. ಇವರಿಗೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲವೇ ಎಂದು ಪ್ರಶ್ನಿಸಿದರು.
Karnataka govt denies removing chapters on Narayana Guru, Congress Harish Kumar slams party.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 02:28 pm
HK News Desk
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
15-07-25 01:13 pm
HK News Desk
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm