ಕರಾವಳಿಯಲ್ಲಿ ಬಂದ್ ಇರಲ್ಲ, ರಸ್ತೆ ತಡೆ, ಪ್ರತಿಭಟನೆ ಮಾತ್ರ ! 

27-09-20 02:49 pm       Mangaluru Correspondent   ಕರಾವಳಿ

ಎಪಿಎಂಸಿ ತಿದ್ದುಪಡಿ ಮಸೂದೆಗಳು ರೈತ ವಿರೋಧಿ ಎಂದು ಆರೋಪಿಸಿ ಸೋಮವಾರದ ದೇಶವ್ಯಾಪಿ ಬಂದ್‌ಗೆ ದಕ್ಷಿಣ ಕನ್ನಡದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಂಗಳೂರು, ಸೆಪ್ಟಂಬರ್ 27: ಎಪಿಎಂಸಿ ತಿದ್ದುಪಡಿ ಮಸೂದೆಗಳು ರೈತ ವಿರೋಧಿ ಎಂದು ಆರೋಪಿಸಿ ಸೋಮವಾರದ ದೇಶವ್ಯಾಪಿ ಬಂದ್‌ಗೆ ದಕ್ಷಿಣ ಕನ್ನಡದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈತ ಪರ ಸಂಘಟನೆಗಳು ಮತ್ತು ಕೆಲವು ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿದ್ದು, ರಸ್ತೆ ತಡೆ, ಪ್ರತಿಭಟನೆಗಷ್ಟೇ ಕರಾವಳಿಯಲ್ಲಿ ಬಂದ್ ಸೀಮಿತವಾಗಲಿದೆ. 

ರೈತ, ಕಾರ್ಮಿಕರ ಸಂಘಟನೆಗಳ ಆಶ್ರಯದಲ್ಲಿ ಬಂಟ್ವಾಳ ಮತ್ತು ಸುಳ್ಯದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹಸುರು ಸೇನೆಯ ರಾಜ್ಯ ಕಾರ್ಯದರ್ಶಿ ರವಿಕಿರಣ್‌ ಪುಣಚ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಮಿನಿ ವಿಧಾನಸೌಧದ ಎದುರು ಕಾಂಗ್ರೆಸ್, ಕಮ್ಯುನಿಸ್ಟ್ ರಾಜಕೀಯ ಪಕ್ಷಗಳ ಸಹಯೋಗದಲ್ಲಿ ಪ್ರತಿಭಟನೆ ನಡೆಯಲಿದೆ. ಮೂಡುಬಿದಿರೆ ಬಸ್‌ ನಿಲ್ದಾಣದ ಬಳಿ ಬೆಳಗ್ಗೆ 10 ಗಂಟೆಗೆ ರೈತ ಸಂಘಟನೆಗಳಿಂದ ಪ್ರತಿಭಟನೆ ನಡೆಯಲಿದೆ. 

ಬಸ್ ಸಂಚಾರ ಎಂದಿನಂತೆ..

ಇನ್ನು ಸೆ.28ರಂದು ದಕ್ಷಿಣ ಕನ್ನಡದಲ್ಲಿ ಬಸ್‌ ಸಂಚಾರ ಎಂದಿನಂತೆ ಇರಲಿದೆ. ಬಸ್ ನಿಲ್ಲಿಸುವ ಬಗ್ಗೆ ಕೇಂದ್ರ ಕಚೇರಿಯಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಕೆಎಸ್‌ಆರ್‌ಟಿಸಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಖಾಸಗಿ ಬಸ್‌ ಗಳ ಸಂಚಾರವೂ ಎಂದಿನಂತೆ ಇರಲಿದೆ ಎಂದು ಉಡುಪಿ ಮತ್ತು ದ.ಕ. ಬಸ್‌ ಮಾಲಕರ ಸಂಘ ತಿಳಿಸಿದೆ.

Join our WhatsApp group for latest news updates (2)