ಬ್ರೇಕಿಂಗ್ ನ್ಯೂಸ್
26-05-22 10:01 pm Mangalore Correspondent ಕರಾವಳಿ
ಮಂಗಳೂರು, ಮೇ 26: ಕ್ರಿಕೆಟ್ ಆಟವು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಾಗಿದ್ದು, ಆಟಗಾರರು ನಿರಂತರ ಪರಿಶ್ರಮದ ಮೂಲಕ ಇದರಲ್ಲಿ ಉನ್ನತ ಮಟ್ಟಕ್ಕೆ ಏರಲು ಸಾಧ್ಯ. ಈ ನಿಟ್ಟಿನಲ್ಲಿ ಬೆಸೆಂಟ್ ಪ್ರೀಮಿಯರ್ ಲೀಗ್ (ಬಿ.ಪಿ.ಎಲ್) ಕ್ರಿಕೆಟ್ ಆಟಗಾರರನ್ನು ಸೃಷ್ಟಿಸುವ ಉನ್ನತ ಕಾರ್ಯ ಮಾಡುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಮಣೇಲ್ ಅಣ್ಣಪ್ಪ ನಾಯಕ್ ಹೇಳಿದರು.
ಬೆಸೆಂಟ್ ಸಂಧ್ಯಾ ಕಾಲೇಜು ಹಳೆ ವಿದ್ಯಾರ್ಥಿ ಸಂಘವು ಆಯೋಜಿಸಿದ ಏಳನೇ ವರ್ಷದ ಬಿ.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿ.ಪಿ.ಎಲ್ ಪಂದ್ಯಾವಳಿಯು ನಗರದ ಪದುವಾ ಕಾಲೇಜು ಮೈದಾನದಲ್ಲಿ ಇತ್ತೀಚೆಗೆ ಜರಗಿತು. ಪಂದ್ಯಾವಳಿಯನ್ನು ಕಾಲೇಜಿನ ಹಳೆ ವಿದ್ಯಾರ್ಥಿಯೂ ಮಹಾನಗ ಪಾಲಿಕೆಯ ಕಾರ್ಪೋರೇಟರ್ ಆಗಿರುವ ಲೀಲಾವತಿ ಪ್ರಕಾಶ್ ಹಾಗೂ ಮನೋಜ್ ಕುಮಾರ್ ಕೋಡಿಕಲ್ ಉದ್ಘಾಟಿಸಿ ಶುಭ ಹಾರೈಸಿದರು.



ಬೆಸೆಂಟ್ ಸಂಧ್ಯಾ ಕಾಲೇಜು ಪ್ರಾಂಶುಪಾಲ ಡಾ.ಲಕ್ಷೀನಾರಾಯಣ ಭಟ್, ಸಂಘದ ಮಾಜಿ ಸಲಹೆಗಾರರಾದ ಗಣಪತಿ ಭಟ್ ಎಂ, ಡಾ. ವಾಸಪ್ಪಗೌಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆದಿತ್ಯ ಶೆಟ್ಟಿ, ಕಾರ್ಯದರ್ಶಿ ರಾಜೇಶ್ ಆರ್, ಕ್ರೀಡಾ ಕಾರ್ಯದರ್ಶಿ ಪ್ರಣವ್ ಗಣೇಶ, ಆಡಳಿತ ಮಂಡಳಿ ಸದಸ್ಯ ಸತೀಶ್ ಕುಮಾರ್ ಭಟ್ ಭಾಗವಹಿಸಿದ್ದರು.


ಪಂದ್ಯಾವಳಿಯಲ್ಲಿ ಐದು ತಂಡಗಳಾದ ಟೀಮ್ ವಿಕ್ಟರಿ, ಟೀಮ್ ಬ್ಲೂ ಸ್ಟಿಕ್, ಟೀಮ್ ಡೋಮಿನೇಟರ್ಸ್, ಟೀಮ್ ಮಾಂಕ್ ಮತ್ತು ಟೀಮ್ ಮಾನ್ಸಟರ್ ಕ್ರೀಡಾಕೂಟಾದಲ್ಲಿ ಭಾಗವಹಿಸಿದ್ದವು. ವಿಜೇತ ತಂಡಗಳಿಗೆ ಹಾಗೂ ಸರಣಿ ಶ್ರೇಷ್ಠ ಕ್ರೀಡಾ ಪಟುಗಳಿಗೆ ಆಕರ್ಷಕ ಬಹುಮಾನಗಳನ್ನು ಘೋಷಿಸಲಾಗಿತ್ತು. ದಿನವಿಡೀ ನಡೆದ ಲೀಗ್ ಸ್ಪರ್ಧೆಯಲ್ಲಿ ಶಮೀತ್ ತಲಪಾಡಿ ಮಾಲಕತ್ವದ ಡೋಮಿನೇಟರ್ಸ್ ತಂಡವು ಜಯಶಾಲಿಯಾಗಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಕೌಶಿಕ್ ಕದ್ರಿ ಮತ್ತು ಪ್ರತೀಕ್ ಶೆಟ್ಟಿ ಮಾಲಕತ್ವದ ಮಾನ್ಸಟರ್ ತಂಡವು ರನ್ನರಪ್ ಪ್ರಶಸ್ತಿ ಪಡೆಯಿತು.


ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಉದ್ಯಮಿ ಹಾಗೂ ಹಳೆ ವಿದ್ಯಾರ್ಥಿ ಸತೀಶ ಮರವೂರು ಹಾಗೂ ಸಾತ್ವಿಕ್ ವಿಜೇತರಿಗೆ ಬಹುಮಾನ ವಿತರಿಸಿದರು. ಮದುರಾಜ್ ಅವರು ಸರಣಿ ಶ್ರೇಷ್ಠ, ಆಕ್ಷಿತ್ ಶೆಟ್ಟಿ ಶ್ರೇಷ್ಠ ದಾಂಡಿಗನಾಗಿ ಹಾಗೂ ಅಂಬಾತನಯ ಶ್ರೇಷ್ಠ ಎಸೆತಗಾರನಾಗಿ ಪ್ರಶಸ್ತಿ ಪಡೆದರು.
Mangalore Besant evening college alumni association organises BBP cricket Match, Dominate team bags victory.
17-11-25 07:25 pm
Bangalore Correspondent
ಖರ್ಗೆ ಕೋಟೆಯಲ್ಲಿ ಆರೆಸ್ಸೆಸ್ ಸಂಚಲನ ; ಒಂದೂವರೆ ಕಿಮ...
16-11-25 09:15 pm
ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊ...
13-11-25 08:33 pm
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
17-11-25 10:58 pm
HK News Desk
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
ಉಮ್ರಾ ಯಾತ್ರೆ ತೆರಳಿದ್ದ ಹೈದ್ರಾಬಾದ್ ಮೂಲದ 45 ಯಾತ್...
17-11-25 06:13 pm
ರಾಜ್ಯದಲ್ಲಿ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ; ಸಿ...
15-11-25 11:12 pm
ದೆಹಲಿ ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮ...
15-11-25 07:09 pm
18-11-25 10:18 pm
Mangaluru Staff
UT Khader, Ullal, Mangalore Dc, Ashwini: ತನ್ನ...
18-11-25 07:03 pm
Mangalore case, Police, Inspector Balakrishna...
18-11-25 11:27 am
ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ...
17-11-25 06:16 pm
ದೇರಳಕಟ್ಟೆ ಕಾಲೇಜಿನ ಕೇರಳ ವಿದ್ಯಾರ್ಥಿ ನಾಪತ್ತೆ ; ಗ...
16-11-25 10:48 pm
18-11-25 09:09 pm
Mangaluru Staff
ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ; ಸ...
18-11-25 11:18 am
ದುಬಾರಿ ಪಾರ್ಸೆಲ್ ಇದೆ, ಕಸ್ಟಮ್ಸ್ ಸುಂಕ ಕಟ್ಟಲು ಹೇಳ...
17-11-25 12:54 pm
ಬೆಳಗಾವಿಯಲ್ಲಿ ಕುಳಿತು ಅಮೆರಿಕನ್ನರಿಗೆ ಗಾಳ ; ಆನ್ಲೈ...
14-11-25 05:32 pm
Ullal News, Animal Attack, Crime, Kumpala: ಕಣ...
14-11-25 11:16 am