ತೊಕ್ಕೊಟ್ಟು ; ಮಾನಸಿಕ ಖಿನ್ನತೆ, ಮನೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ 

28-05-22 12:50 pm       Mangalore Correspondent   ಕರಾವಳಿ

ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ವ್ಯಕ್ತಿಯೋರ್ವರು ಮನೆಯ ಕೋಣೆಯೊಳಗೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ತೊಕ್ಕೊಟ್ಟು ಸಮೀಪದ ಕಾಪಿಕಾಡು ಎಂಬಲ್ಲಿ ನಡೆದಿದೆ. 

ಉಳ್ಳಾಲ, ಮೇ 28 : ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ವ್ಯಕ್ತಿಯೋರ್ವರು ಮನೆಯ ಕೋಣೆಯೊಳಗೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ತೊಕ್ಕೊಟ್ಟು ಸಮೀಪದ ಕಾಪಿಕಾಡು ಎಂಬಲ್ಲಿ ನಡೆದಿದೆ. 

ತೊಕ್ಕೊಟ್ಟು ಕಾಪಿಕಾಡು ಎರಡನೇ ಅಡ್ಡ ರಸ್ತೆ ನಿವಾಸಿ ರೋಶನ್ ಬೇಕಲ್(46) ಆತ್ಮಹತ್ಯೆಗೈದ ದುರ್ದೈವಿ. ರೋಶನ್ ಪತ್ನಿಯನ್ನು ಬಿಟ್ಟು ಆಕೆಯಿಂದ ವಿಚ್ಚೇದನ ಪಡೆದಿದ್ದು ಕೆಲವು ವರುಷಗಳಿಂದ ಖಿನ್ನರಾಗಿದ್ದು ಜಿಗುಪ್ಸೆ ಹೊಂದಿದ್ದರೆನ್ನಲಾಗಿದೆ. ಇಂದು ಬೆಳಗ್ಗೆ ರೋಶನ್ ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದಿರುವುದು ಬೆಳಕಿಗೆ ಬಂದಿದೆ. 

ಮೃತ ರೋಶನ್ ಅವರು ಉತ್ತಮ ಕ್ರಿಕೆಟ್ ಆಟಗಾರನಾಗಿದ್ದು ಜನಾನುರಾಗಿಯಾಗಿದ್ದರು. ಉಳ್ಳಾಲ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿದ್ದಾರೆ.

Thokottu Depression 46 year old man commits suicide in Mangalore. The deceased has been identified as Roshan Bekal.