ಬ್ರೇಕಿಂಗ್ ನ್ಯೂಸ್
29-05-22 09:28 pm Mangalore Correspondent ಕರಾವಳಿ
ಮಂಗಳೂರು, ಮೇ 29: ಮಳಲಿ ಮಸೀದಿ ಬಗ್ಗೆ ಎಸ್ಡಿಪಿಐ ಕಡೆಯಿಂದ ಪ್ರಚೋದನಕಾರಿ ಹೇಳಿಕೆಯ ಬೆನ್ನಲ್ಲೇ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಮಸೀದಿ ಕಮಿಟಿ ಮತ್ತು ಹಿಂದು ಸಂಘಟನೆಗಳ ಪ್ರಮುಖರ ಜೊತೆ ಸೌಹಾರ್ದ ಮಾತುಕತೆ ನಡೆಸಿದ್ದಾರೆ. ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಮೊದಲ ಪ್ರಯತ್ನವಾಗಿ ಮಂಗಳೂರಿನ ಸರ್ಕಿಟ್ ಹೌಸ್ ನಲ್ಲಿ ಸಭೆ ನಡೆಸಲಾಗಿದೆ.
ಶಾಸಕ ಭರತ್ ಶೆಟ್ಟಿ ಮೊದಲಿಗೆ ಸ್ಥಳೀಯ ಮುಸ್ಲಿಮರು ಮತ್ತು ಮಸೀದಿ ಕಮಿಟಿ ಪ್ರಮುಖರನ್ನು ಕರೆದು ಅಹವಾಲು ಕೇಳಿದ್ದಾರೆ. ಆನಂತರ, ವಿಶ್ವ ಹಿಂದು ಪರಿಷತ್ ನಾಯಕರನ್ನು ಕರೆದು ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಕೊನೆಗೆ ಎರಡೂ ಕಡೆಯವರನ್ನು ಜೊತೆಗೆ ಕುಳ್ಳಿರಿಸಿ, ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಸೌಹಾರ್ದ ಸಭೆಯಲ್ಲಿ ಮಳಲಿ ಭಾಗದ ಜನಪ್ರತಿನಿಧಿಗಳು, ಊರಿನ ಪ್ರಮುಖರು, ಹಿಂದು ಸಂಘಟನೆಯ ಮುಖಂಡರು ಮತ್ತು ಮಸೀದಿ ಕಮಿಟಿ ಪ್ರಮುಖರು ಇದ್ದರು. ಸಭೆಯಲ್ಲಿ ಎಲ್ಲರೂ ತಮ್ಮ ಅಭಿಪ್ರಾಯ ಮಂಡಿಸಿದ್ದು, ಸೌಹಾರ್ದ ನೆಲೆಯಲ್ಲಿ ವಿವಾದ ಇತ್ಯರ್ಥ ಪಡಿಸುವ ಒಲವು ವ್ಯಕ್ತಪಡಿಸಿದ್ದಾರೆ.
ಸಭೆಯ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಭರತ್ ಶೆಟ್ಟಿ, ಮಳಲಿಯಲ್ಲಿ ಶಾಂತಿ ಕದಡುವ, ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ. ಸಂಘರ್ಷಕ್ಕೆ ಪ್ರಚೋದನೆ ನೀಡಿ, ಆಮೂಲಕ ರಾಜಕೀಯವಾಗಿ ಲಾಭ ಮಾಡಿಕೊಳ್ಳಲು ಕೆಲವರು ಯತ್ನಿಸುತ್ತಿದ್ದಾರೆ. ಆದರೆ ಮಳಲಿಯಲ್ಲಿ ಹಿಂದು- ಮುಸ್ಲಿಮರು ಸೌಹಾರ್ದದಿಂದ ಬದುಕುತ್ತಿದ್ದು ಎರಡೂ ಸಮುದಾಯದ ಮುಖಂಡರನ್ನು ಕರೆದು ಮಾತುಕತೆ ನಡೆಸಿದ್ದೇನೆ. ಮಸೀದಿ ಕಮಿಟಿಯವರಿಗೂ ಈ ವಿವಾದ ಸೌಹಾರ್ದ ನೆಲೆಯಲ್ಲಿ ಇತ್ಯರ್ಥ ಆಗಬೇಕೆಂಬ ಮನಸ್ಸಿದೆ. 1960ರಲ್ಲಿ ಮಸೀದಿಗೆ ಆರ್ ಟಿಸಿ ಸಿಕ್ಕಿತ್ತು. 1920ರಿಂದ ಮಸೀದಿಗೆ ಸರ್ಕಾರದಿಂದ ತಸ್ತೀಕು ನೀಡಲಾಗುತ್ತಿದೆ. ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದ್ದು ಎರಡೂ ಕಡೆಯಿಂದ ಸಕಾರಾತ್ಮಕ ಪ್ರಯತ್ನಗಳು ನಡೆಯುತ್ತಿವೆ. ನಿರ್ಬಂಧಿತ ಪ್ರದೇಶ ಆಗಿರುವ ಕಾರಣ ಮಸೀದಿ ಜಾಗದಲ್ಲಿ ಅಷ್ಟಮಂಗಲ ನಡೆಸಲು ಅವಕಾಶ ಇರುವುದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ, ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಮಾತನಾಡಿ ಎಸ್ಡಿಪಿಐ, ಪಿಎಫ್ಐ ಯಾವ ರೀತಿಯ ಸಂಘಟನೆ ಅನ್ನುವುದು ಇಡೀ ದೇಶಕ್ಕೆ ಗೊತ್ತು. ಅವರ ಮಾತುಗಳಿಗೆ ನಾವು ಕಿವಿ ಕೊಡುವುದಿಲ್ಲ. ಕೇಂದ್ರ ಸರಕಾರ ಆ ಸಂಘಟನೆಗಳ ನಿಷೇಧಕ್ಕೆ ಕ್ರಮ ಕೈಗೊಳ್ಳುವ ವಿಶ್ವಾಸ ಇದೆ. ನಾವು ಈ ವಿವಾದವನ್ನು ಅತ್ಯಂತ ಸೌಹಾರ್ದ ನೆಲೆಯಲ್ಲಿ ಇತ್ಯರ್ಥ ಪಡಿಸಲು ಪ್ರಯತ್ನಿಸುತ್ತೇವೆ. ಅದಕ್ಕಾಗಿ ಶಾಸಕ ಭರತ್ ಶೆಟ್ಟಿ ನೇತೃತ್ವದಲ್ಲಿ ಪ್ರಯತ್ನಗಳು ನಡೆದಿವೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಮಳಲಿ ಮಸೀದಿ ಬಗ್ಗೆ ಹಿಂದು ಸಂಘಟನೆಗಳು ತಾಂಬೂಲ ಪ್ರಶ್ನೆ ಏರ್ಪಡಿಸಿದ್ದು ಕೆಲವರಿಂದ ಭಾರೀ ಟೀಕೆಗೆ ಗುರಿಯಾಗಿತ್ತು. ಜ್ಯೋತಿಷ್ಯ ಪ್ರಶ್ನೆಯಲ್ಲಿ ಮಸೀದಿ ಇರುವ ಜಾಗವು ಈ ಹಿಂದೆ ಗುರು ಮಠಕ್ಕೆ ಸಂಬಂಧಿಸಿದ್ದು ಮತ್ತು ಶಿವನ ಆರಾಧನೆ ನಡೆಯುತ್ತಿದ್ದ ಜಾಗ ಎನ್ನುವ ವಿಚಾರ ತಿಳಿದುಬಂದಿತ್ತು. ಹೀಗಾಗಿ ಆ ಜಾಗದ ಐತಿಹಾಸಿಕ ದಾಖಲೆಗಳು, ಯಾವ ಕಾಲದಲ್ಲಿ ದೇವಸ್ಥಾನ ಇದ್ದುದು ಮಸೀದಿ ಆಗಿತ್ತು ಎನ್ನುವ ಬಗ್ಗೆ ದಾಖಲೆ ಕ್ರೋಢೀಕರಿಸುತ್ತೇವೆ ಎಂದು ಹಿಂದು ಸಂಘಟನೆ ನಾಯಕರು ಹೇಳಿದ್ದರು. ಇದರ ನಡುವೆ, ಮಳಲಿ ಮಸೀದಿಯ ವಿಚಾರ ಮಂಗಳೂರಿನ ಜೆಎಂಎಫ್ ಕೋರ್ಟಿನಲ್ಲಿದ್ದು, ಅಲ್ಲಿ ಯಾವುದೇ ರೀತಿಯ ನವೀಕರಣ ಅಥವಾ ಜನರ ಪ್ರವೇಶಕ್ಕೆ ನಿರ್ಬಂಧ ಹಾಕಿದೆ. ಹೀಗಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
Malali Temple Mosque row, MLA Bharath Shetty, VHP members and Malali Mosque committee hold peace meeting. Meeting held to share their opinions. Also the meeting was held to solve this issue peacefully.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
10-09-25 02:10 pm
Mangalore Correspondent
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
"ಅಮೃತ ಸೋಮೇಶ್ವರ ರಸ್ತೆ" ನಾಮಕರಣಕ್ಕೆ ಸೋಮೇಶ್ವರ ಪುರ...
09-09-25 10:47 pm
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm