ಬ್ರೇಕಿಂಗ್ ನ್ಯೂಸ್
30-05-22 10:52 pm Mangalore Correspondent ಕರಾವಳಿ
ಬಂಟ್ವಾಳ, ಮೇ 30 : ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು (ಆರ್ಎಸ್ಎಸ್) ನಪುಂಸಕರು ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಕ್ಕೆ ಆರ್ಎಸ್ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ದೇಶವನ್ನು ಪೂಜೆ ಮಾಡುವವರು ನಪುಂಸಕರಾ ಎಂದು ಪ್ರಶ್ನಿಸಿದ್ದಾರೆ.
ಕಲ್ಕಡ್ಕದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಯ- ದ್ರಾವಿಡ ಎನ್ನುವುದು ಇಂಗ್ಲಿಷರು ಮಾಡಿದ ಸಂಸ್ಕೃತಿ. ಹೇಳಿ ಕೇಳಿ ಇವರು ಇಟಲಿಯಲ್ಲಿದ್ದ ಮಹಿಳೆಯ ಪಾದಪೂಜೆ ಮಾಡುತ್ತಾರಲ್ವಾ, ಅವರನ್ನು ಪೂಜೆ ಮಾಡುವವರು ನಪುಂಸಕರಾ? ದೇಶವನ್ನು ಪೂಜೆ ಮಾಡುವವರು ನಪುಂಸಕರಾ? ಎಂದು ಪ್ರಶ್ನಿಸಿದರು.
ಹಿಂದೊಮ್ಮೆ ಮುಸ್ಲಿಮರೇ ಇದ್ದ ವಿಮಾನ ದುರಂತ ಸಂಭವಿಸಿದ ಸಂದರ್ಭ ರಕ್ಷಣಾ ಕಾರ್ಯಕ್ಕೆ ತಕ್ಷಣ ಧಾವಿಸಿದ ಆರ್ಎಸ್ಎಸ್ ಕಾರ್ಯಕರ್ತರನ್ನು ಆಗಿನ ವಿಮಾನಯಾನ ಸಚಿವ ಸಿ.ಎಂ ಇಬ್ರಾಹಿಂ ಅವರೇ ಪ್ರಶಂಸಿಸಿದ್ದರು. ದಿನನಿತ್ಯ ಭಾರತ ಮಾತಾ ಕಿ ಜೈ ಎನ್ನುವವರು ಆರ್ಎಸ್ಎಸ್ನವರು. ಇಟಲಿಯಿಂದ ಬಂದವರಿಗೆ ಜೈಕಾರ ಹಾಕುವವರು ಅವರು. ದೇಶದ ವಿಭಜನೆ ಮಾಡಿದ್ದು ಯಾರು ಹೇಳಿ? ಆರ್ಎಸ್ಎಸ್ಸಾ?. ವಿಶ್ವ ಹಿಂದೂ ಪರಿಷತ್ತಾ? ಇದೇ ನೆಹರೂ, ಗಾಂಧಿ, ಮುಸ್ಲಿಂ ಲೀಗ್ ಮಾಡಿದ್ದಲ್ವಾ? ಎಂದು ಪ್ರಶ್ನಿಸಿದ ಡಾ. ಭಟ್, ಹೊರಗಿನಿಂದಷ್ಟೇ ಅಲ್ಲ, ಒಳಗಿನಿಂದಲೂ ಪಾಕಿಸ್ತಾನ ಜಿಂದಾಬಾದ್ ಎನ್ನುವುದಕ್ಕೆ ಕಾರಣ ಕಾಂಗ್ರೆಸ್ ಅಲ್ವಾ ಎಂದು ಪ್ರಶ್ನಿಸಿದರು.

ಪಠ್ಯಪುಸ್ತಕ ಬರಲಿ, ಆವಾಗ ಅದರಲ್ಲೇನಿದೆ ಅನ್ನೋದು ಗೊತ್ತಾಗುತ್ತದೆ. ಅದಕ್ಕೂ ಮೊದಲೇ ಪೂರ್ವಗ್ರಹ ಪೀಡಿತವಾಗಿ ಪಠ್ಯಪುಸ್ತಕ ಕುರಿತು ವಿವಾದ ಮಾಡುವುದು ಸರಿಯಲ್ಲ ಎಂದರು.
ತಲೆತಲಾಂತರದಿಂದ ಹಿಂದೂಗಳು ನಾವು. ಹಿಂದೂ ಧರ್ಮ ಎಲ್ಲರನ್ನೂ ಒಟ್ಟು ಸೇರಿಸಿ, ಎಲ್ಲರೊಂದಿಗೆ ಜೊತೆಯಲ್ಲಿ ಸಾಗುವ ಧರ್ಮ. ಈ ಧರ್ಮದ ಬಗ್ಗೆ ಹೇಳಿದರೂ ತಪ್ಪು ಎನ್ನಲಾಗುತ್ತಿದೆ. ಕ್ರಿಶ್ಚಿಯನ್ನರ ಬಗ್ಗೆ, ಔರಂಗಜೇಬರ ಬಗ್ಗೆ ಹೇಳಿದರೆ ತಪ್ಪಲ್ಲ. ಹೆಡಗೇವಾರ್ ಬರೆದದ್ದನ್ನು ಹೇಳಿದರೆ ತಪ್ಪು ಹೇಗಾಗುತ್ತದೆ ಎಂದು ಕೇಳಿದ ಡಾ. ಭಟ್ ಅವರು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.
Mangalore Dr Kalladka Prabhakar Bhat lashes out at Siddaramaiah for his tweets.
17-11-25 07:25 pm
Bangalore Correspondent
ಖರ್ಗೆ ಕೋಟೆಯಲ್ಲಿ ಆರೆಸ್ಸೆಸ್ ಸಂಚಲನ ; ಒಂದೂವರೆ ಕಿಮ...
16-11-25 09:15 pm
ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊ...
13-11-25 08:33 pm
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
17-11-25 10:58 pm
HK News Desk
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
ಉಮ್ರಾ ಯಾತ್ರೆ ತೆರಳಿದ್ದ ಹೈದ್ರಾಬಾದ್ ಮೂಲದ 45 ಯಾತ್...
17-11-25 06:13 pm
ರಾಜ್ಯದಲ್ಲಿ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ; ಸಿ...
15-11-25 11:12 pm
ದೆಹಲಿ ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮ...
15-11-25 07:09 pm
18-11-25 10:18 pm
Mangaluru Staff
UT Khader, Ullal, Mangalore Dc, Ashwini: ತನ್ನ...
18-11-25 07:03 pm
Mangalore case, Police, Inspector Balakrishna...
18-11-25 11:27 am
ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ...
17-11-25 06:16 pm
ದೇರಳಕಟ್ಟೆ ಕಾಲೇಜಿನ ಕೇರಳ ವಿದ್ಯಾರ್ಥಿ ನಾಪತ್ತೆ ; ಗ...
16-11-25 10:48 pm
18-11-25 09:09 pm
Mangaluru Staff
ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ; ಸ...
18-11-25 11:18 am
ದುಬಾರಿ ಪಾರ್ಸೆಲ್ ಇದೆ, ಕಸ್ಟಮ್ಸ್ ಸುಂಕ ಕಟ್ಟಲು ಹೇಳ...
17-11-25 12:54 pm
ಬೆಳಗಾವಿಯಲ್ಲಿ ಕುಳಿತು ಅಮೆರಿಕನ್ನರಿಗೆ ಗಾಳ ; ಆನ್ಲೈ...
14-11-25 05:32 pm
Ullal News, Animal Attack, Crime, Kumpala: ಕಣ...
14-11-25 11:16 am