ಬ್ರೇಕಿಂಗ್ ನ್ಯೂಸ್
31-05-22 10:27 pm Mangalore Correspondent ಕರಾವಳಿ
ಉಳ್ಳಾಲ, ಮೇ 31 : ಉಳ್ಳಾಲದ ಹೆಬ್ಬಾಗಿಲು ತೊಕ್ಕೊಟ್ಟು ಓವರ್ ಬ್ರಿಡ್ಜ್ ಜಂಕ್ಷನ್ನಲ್ಲಿ 110 ಅಡಿ ಎತ್ತರದ ಧ್ವಜಸ್ತಂಭ ನಿರ್ಮಾಣವಾಗಲಿದ್ದು, ಉಳ್ಳಾಲವನ್ನ ಪಾಕಿಸ್ತಾನ ಎಂದು ಮೂದಲಿಸಿದವರಿಗೆ ಉಳ್ಳಾಲದವರು ದೇಶಭಕ್ತರೆಂಬ ಸ್ಪಷ್ಟ ಸಂದೇಶ ರವಾನಿಸಲಾಗುವುದು ಎಂದು ವಿದಾನಸಭಾ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಟಾಂಗ್ ನೀಡಿದ್ದಾರೆ.
ರಾಜ್ಯ ಸರಕಾರದ ವಿಶೇಷ ಅನುದಾನದಲ್ಲಿ ತೊಕ್ಕೊಟ್ಟು ಓವರ್ ಬ್ರಿಡ್ಜ್ ಜಂಕ್ಷನ್ನಲ್ಲಿ ನಿರ್ಮಾಣಗೊಳ್ಳಲಿರುವ 110 ಅಡಿ ಎತ್ತರದ ಧ್ವಜ ಸ್ತಂಭಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ತಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಳಗಾವಿ ಸಹಿತ ಇತರ ಜಿಲ್ಲೆಗಳಿಗೆ ಸಂಚರಿಸುವಾಗ ಅಲ್ಲಿನ ಎತ್ತರದ ಧ್ವಜ ಸ್ತಂಭಗಳನ್ನ ಕಂಡು ಮಂಗಳೂರು ಕ್ಷೇತ್ರದಲ್ಲೂ ಎತ್ತರದ ಧ್ವಜಸ್ತಂಭ ನಿರ್ಮಾಣಕ್ಕೆ ಯೋಜನೆ ಹಾಕಿದ್ದೆ. ಇದೀಗ ಸರಕಾರದಿಂದ ಧ್ವಜ ಸ್ತಂಭ ನಿರ್ಮಿಸಲು ಅನುದಾನ ಬಿಡುಗಡೆಯಾಗಿದ್ದು ಓವರ್ ಬ್ರಿಡ್ಜ್ ಜಂಕ್ಷನಲ್ಲಿ ಶೀಘ್ರವೇ 110 ಅಡಿ ಎತ್ತರದ ಸ್ತಂಭವು ತಲೆ ಎತ್ತಲಿದೆ ಎಂದರು.


ಇದಲ್ಲದೆ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಕೊಣಾಜೆ ತೆರಳುವ ರಸ್ತೆಯ ಅಂಚಿನ ಶಾಸಕರ ಕಚೇರಿ ಬಳಿಯೂ ರಸ್ತೆ ಅಗಲೀಕರಣ ಕಾಮಗಾರಿಯ ನಂತರ 110 ಅಡಿ ಎತ್ತರದ ಧ್ವಜ ಸ್ತಂಭ ನಿರ್ಮಾಣವಾಗಲಿದೆ ಎಂದರು.

ಓವರ್ ಬ್ರಿಡ್ಜ್ ಜಂಕ್ಷನಲ್ಲಿ ಧ್ವಜ ಸ್ತಂಭ ನಿರ್ಮಿಸಲು ಮೊದಲಿಗೆ ರಸ್ತೆ ಇಕ್ಕಟ್ಟಿನ ಸಮಸ್ಯೆ ಎದುರಾಗಿತ್ತು. ಇದೀಗ ಪಿಡಬ್ಲ್ಯೂಡಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಒಪ್ಪಿಗೆ ಪಡೆದು ಕಾಮಗಾರಿಯನ್ನ ಕೈಗೆತ್ತಿರುವುದಾಗಿ ಹೇಳಿದರು.

ಜಿಲ್ಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣ ಬಿಟ್ಟರೆ ಉಳ್ಳಾಲದಲ್ಲಿ ಅತೀ ಎತ್ತರದ ಧ್ವಜ ಸ್ತಂಭ ನಿರ್ಮಾಣಗೊಂಡು ಪ್ರವಾಸಿಗರ ಆಕರ್ಷಣೆ ಕೇಂದ್ರವಾಗುವುದು. ಇದಲ್ಲದೆ ಉಳ್ಳಾಲವನ್ನ ಹಾಗೆ, ಹೀಗೆ ಎಂದವರಿಗೂ ಉಳ್ಳಾಲದವರು ಅಪ್ರತಿಮ ದೇಶ ಭಕ್ತರೆಂಬ ಸ್ಪಷ್ಟ ಸಂದೇಶ ರವಾನೆಯಾಗುತ್ತದೆ ಎಂದು ಖಾದರ್ ಹೇಳಿದರು.
Mangalore 110 feet flag pole to get ready at Ullal, Khader slams those who called ullal Mini Pakisthan during the event.
17-11-25 07:25 pm
Bangalore Correspondent
ಖರ್ಗೆ ಕೋಟೆಯಲ್ಲಿ ಆರೆಸ್ಸೆಸ್ ಸಂಚಲನ ; ಒಂದೂವರೆ ಕಿಮ...
16-11-25 09:15 pm
ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊ...
13-11-25 08:33 pm
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
17-11-25 10:58 pm
HK News Desk
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
ಉಮ್ರಾ ಯಾತ್ರೆ ತೆರಳಿದ್ದ ಹೈದ್ರಾಬಾದ್ ಮೂಲದ 45 ಯಾತ್...
17-11-25 06:13 pm
ರಾಜ್ಯದಲ್ಲಿ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ; ಸಿ...
15-11-25 11:12 pm
ದೆಹಲಿ ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮ...
15-11-25 07:09 pm
18-11-25 10:18 pm
Mangaluru Staff
UT Khader, Ullal, Mangalore Dc, Ashwini: ತನ್ನ...
18-11-25 07:03 pm
Mangalore case, Police, Inspector Balakrishna...
18-11-25 11:27 am
ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ...
17-11-25 06:16 pm
ದೇರಳಕಟ್ಟೆ ಕಾಲೇಜಿನ ಕೇರಳ ವಿದ್ಯಾರ್ಥಿ ನಾಪತ್ತೆ ; ಗ...
16-11-25 10:48 pm
18-11-25 09:09 pm
Mangaluru Staff
ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ; ಸ...
18-11-25 11:18 am
ದುಬಾರಿ ಪಾರ್ಸೆಲ್ ಇದೆ, ಕಸ್ಟಮ್ಸ್ ಸುಂಕ ಕಟ್ಟಲು ಹೇಳ...
17-11-25 12:54 pm
ಬೆಳಗಾವಿಯಲ್ಲಿ ಕುಳಿತು ಅಮೆರಿಕನ್ನರಿಗೆ ಗಾಳ ; ಆನ್ಲೈ...
14-11-25 05:32 pm
Ullal News, Animal Attack, Crime, Kumpala: ಕಣ...
14-11-25 11:16 am