ಬ್ರೇಕಿಂಗ್ ನ್ಯೂಸ್
03-06-22 03:16 pm Mangalore Correspondent ಕರಾವಳಿ
ಮಂಗಳೂರು, ಜೂನ್ 3: ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಹಿಜಾಬ್ ನಿಷೇಧ ಮಾಡಿರುವುದು ಹೈಕೋರ್ಟ್ ಆದೇಶದ ಪ್ರಕಾರ ಅಲ್ಲ. ಕೇವಲ ಎಬಿವಿಪಿ ಒತ್ತಡಕ್ಕೆ ಮಣಿದು ಹಿಜಾಬ್ ನಿಷೇಧ ಮಾಡಲಾಗಿದೆ. ಹೈಕೋರ್ಟ್ ಆದೇಶ ಬಂದ ನಂತರವೂ ನಾವು ಹಿಜಾಬ್ ಧರಿಸಿಯೇ ಕಾಲೇಜು ಬರುತ್ತಿದ್ದೆವು. ಈಗ ದಿಢೀರ್ ಆಗಿ ನೀವು ಬರಬೇಡಿ ಎನ್ನುತ್ತಿದ್ದಾರೆ. ನಾವು ಇದನ್ನು ಒಪ್ಪುವುದಿಲ್ಲ ಎಂದು ಹಂಪನಕಟ್ಟೆ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಪಟ್ಟುಹಿಡಿದ ಆರು ಮಂದಿ ವಿದ್ಯಾರ್ಥಿನಿಯರು ಹೇಳಿದ್ದಾರೆ.
ಹಿಜಾಬ್ ಪರ ವಿದ್ಯಾರ್ಥಿನಿಯರ ಪರವಾಗಿ ಸಮನ್ವಯ ಸಮಿತಿ ಹೆಸರಲ್ಲಿ ಸುದ್ದಿಗೋಷ್ಠಿ ನಡೆಸಲಾಗಿದ್ದು ಗೌಸಿಯಾ ಎಂಬ ವಿದ್ಯಾರ್ಥಿನಿ ತಮಗಾದ ತೊಂದರೆಯನ್ನು ವಿವರಿಸಿದ್ದಾರೆ. ಈ ಹಿಂದೆ ಕಾಲೇಜಿನಲ್ಲಿ ಯಾವುದೇ ಹಿಜಾಬ್ ಸಮಸ್ಯೆ ಇರಲಿಲ್ಲ. ಹೈಕೋರ್ಟ್ ಆದೇಶದ ಬಳಿಕವೂ ಮೇ 7ರ ವರೆಗೆ ನಾವು ಹಿಜಾಬ್ ಹಾಕ್ಕೊಂಡೇ ತರಗತಿಗೆ ಹೋಗಿದ್ದೆವು. ಆದರೆ ಕೆಲವು ದಿನಗಳ ಬಳಿಕ ರಾತ್ರೋರಾತ್ರಿ ಒಂದು ಮೆಸೇಜ್ ಬಂದಿತ್ತು. ಕಾಲೇಜಿನಲ್ಲಿ ಹಿಜಾಬ್ ಬ್ಯಾನ್ ಮಾಡಿರುವ ಬಗ್ಗೆ ಅದರಲ್ಲಿ ಹೇಳಿತ್ತು. ಅನಧಿಕೃತ ಮಾಹಿತಿ ಆಗಿದ್ದರಿಂದ ಪ್ರಾಂಶುಪಾಲರ ಬಳಿ ಮರುದಿನ ಕೇಳಿದ್ದೆವು. ಆಗ ಅವರು ಅದು ನಾವೇ ಕಳಿಸಿಕೊಟ್ಟ ಮೆಸೇಜ್ ಎಂದು ಹೇಳಿದ್ದರು.
ಹೈಕೋರ್ಟ್ ಆದೇಶದಲ್ಲಿ ಪದವಿ ಕಾಲೇಜು ಬಗ್ಗೆ ಯಾವುದೇ ಉಲ್ಲೇಖ ಇಲ್ಲ ಎಂದು ನಾವು ಹೇಳಿದಾಗ, ಅದರ ಕಾಪಿ ತಂದುಕೊಡಿ ಎಂದು ಕೇಳಿದ್ದರು. ಅದರಂತೆ, ನಾವು ಹೈಕೋರ್ಟ್ ಆದೇಶದ ಪ್ರತಿಯನ್ನು ತಂದು ತೋರಿಸಿದ್ದೆವು. ಇದೇ ವಿಚಾರದಲ್ಲಿ ವಿವಿಯ ಕುಲಪತಿಯವರನ್ನೂ ಭೇಟಿಯಾಗಿ ಮನವಿ ಮಾಡಿದ್ದೆವು. ಡೀಸಿ ಬಳಿಯಿಂದ ಲೆಟರ್ ತಂದರೆ, ನಾವು ಬಿಡಬಹುದು ಎಂದು ಕುಲಪತಿ ತಿಳಿಸಿದ್ದರು. ಡೀಸಿಯನ್ನು ಭೇಟಿಯಾಗಲು ಆಗ ಅವಕಾಶ ಸಿಗಲಿಲ್ಲ. ಆದರೆ ಅದೇ ಸಂದರ್ಭದಲ್ಲಿ ಸಿಂಡಿಕೇಟ್ ಸಭೆ ನಡೆದು ಹಿಜಾಬ್ ಅವಕಾಶ ನೀಡದಂತೆ ವಿವಿಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.
ಆನಂತರ ನಾವು ಕಾಲೇಜಿಗೆ ಹೋಗಿದ್ದಾಗ, ಒಳಗೆ ಬರದಂತೆ ತಡೆದಿದ್ದಾರೆ. ಲೈಬ್ರರಿಯಲ್ಲಿ ಕುಳಿತುಕೊಳ್ಳುತ್ತೇವೆ ಎಂದರೂ, ಅವಕಾಶ ಕೊಡಲಿಲ್ಲ. ಆಬಳಿಕ ಕಾಲೇಜು ಕ್ಯಾಂಪಸ್ ಪ್ರವೇಶ ಮಾಡುವುದಕ್ಕೂ ಬಿಡಲಿಲ್ಲ. ಎಬಿವಿಪಿ ಪ್ರತಿಭಟನೆ ಬಳಿಕ ನಮ್ಮನ್ನು ಕ್ಯಾಂಪಸ್ ನಿಂದಲೂ ಹೊರಗೆ ಹಾಕಿದ್ದಾರೆ. ನಾವು ಜಿಲ್ಲಾಧಿಕಾರಿಯನ್ನು ಭೇಟಿಯಾದರೂ, ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ. ಇಷ್ಟೆಲ್ಲ ಆದರೂ, ಕಾಲೇಜಿನಿಂದ ನಮ್ಮ ಪೋಷಕರಿಗೆ ವಿಷಯ ತಿಳಿಸಿಲ್ಲ. ಮೊನ್ನೆ ಪೋಷಕರನ್ನು ನಾವೇ ಕರೆದುಕೊಂಡು ಬಂದು ಪ್ರಾಂಶುಪಾಲರ ಬಳಿ ಮಾತನಾಡಿದ್ದೇವೆ. ಈ ಸಾಲಿನ ಒಂದು ವರ್ಷ ಪೂರ್ತಿಯಾಗಿಸಲು ಅವಕಾಶ ಕೊಡಿ, ಸಮವಸ್ತ್ರದ ಶಾಲನ್ನೇ ಹಿಜಾಬ್ ಆಗಿ ಧರಿಸುತ್ತೇವೆ ಎಂದು ಕೇಳಿಕೊಂಡರೂ, ಪ್ರಾಂಶುಪಾಲರು ಅವಕಾಶ ಕೊಟ್ಟಿಲ್ಲ. ಸಿಂಡಿಕೇಟ್ ನಿರ್ಣಯವನ್ನು ನಾವು ಪಾಲನೆ ಮಾಡಲೇಬೇಕಾಗುತ್ತದೆ ಎಂದು ಹೇಳಿದ್ದರು.
ನಮ್ಮ ಮನವಿ ಇಷ್ಟೇ, ಕಾಲೇಜಿನ ಹಳೆಯ ಸಮವಸ್ತ್ರದ ನಿಯಮವನ್ನೇ ಮುಂದುವರಿಸಿ. ನಾವು ಹಿಂದಿನಿಂದಲೂ ಸಮವಸ್ತ್ರದ ಶಾಲನ್ನು ಹಿಜಾಬ್ ಆಗಿ ಧರಿಸಿ ಬರುತ್ತಿದ್ದೆವು. ಕಾಲೇಜಿನ ಈ ಆದೇಶದ ಹಿಂದೆ ಹೈಕೋರ್ಟ್ ಇಲ್ಲ. ಕೇವಲ ಎಬಿವಿಪಿಯ ಒತ್ತಡವಷ್ಟೇ ಕೆಲಸ ಮಾಡಿದೆ. ಒಂದು ಹಂತದಲ್ಲಿ ನಾವು ಹಿಜಾಬ್ ಹಾಕಿದ್ದಕ್ಕೆ ಕೆಲವರು ಕೇಸರಿ ಹಾಕುವ ಬೆದರಿಕೆಯನ್ನೂ ಹಾಕಿದ್ದರು. ಇದರಿಂದ ಗೊಂದಲ ನಿರ್ಮಾಣ ಆಗಿತ್ತು ಎಂದರು ಗೌಸಿಯಾ.
ಇದೇ ವೇಳೆ, ಸಮನ್ವಯ ಸಮಿತಿ ಸಂಚಾಲಕ ರಿಯಾಜ್ ಪುತ್ತೂರು ಮಾತನಾಡಿ, ಕಾಲೇಜಿನಲ್ಲಿ ಹಳೆ ವಸ್ತ್ರ ಸಂಹಿತೆಯನ್ನೇ ಮುಂದುವರಿಸಬೇಕು. ವಿದ್ಯಾರ್ಥಿನಿಯರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಸಮಸ್ಯೆ ಸರಿಪಡಿಸಲು ಜಿಲ್ಲಾಡಳಿತಕ್ಕೆ ಎರಡು ದಿನಗಳ ಗಡುವು ಕೊಡುತ್ತೇವೆ. ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಕಾನೂನು ಹೋರಾಟಕ್ಕಿಳಿದಲ್ಲಿ ಸುದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ನಾವು ಕಾಲೇಜು ವ್ಯಾಪ್ತಿಯಲ್ಲೇ ಮುಗಿಸಲು ನೋಡುತ್ತೇವೆ ಎಂದು ಹೇಳಿದರು.
Hijab row in Mangalore Univercity college, Muslim students allege ABVP reason for creating issue. Gowsiya and her friends who held press meet at the press club alleged that AVBP is the reason behind all these issues. The principal has clearly stated that they are under the pressure of ABVP. She also stated that district wide protest will be held if they aren't allowed to the college like before.
30-09-25 07:31 pm
Bangalore Correspondent
Hassan Blast: ಹಾಸನದಲ್ಲಿ ಅನುಮಾನಾಸ್ಪದ ಸ್ಫೋಟ ; ನ...
30-09-25 04:00 pm
Mahesh Shetty: ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆ...
30-09-25 03:58 pm
ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಪ್ರಬ...
30-09-25 01:08 pm
ಹೈದ್ರಾಬಾದ್ ನಲ್ಲಿ ಕಾಂತಾರ ಪ್ರಚಾರ ; ರಿಷಬ್ ಕನ್ನಡದ...
29-09-25 07:59 pm
30-09-25 04:08 pm
HK News Desk
ಪಾಕಿಸ್ತಾನದ ಕ್ವೆಟ್ಟಾದಲ್ಲಿ ಭಾರೀ ಸ್ಫೋಟ ; ಕಾರಿನಲ್...
30-09-25 04:03 pm
ಪರಿಶಿಷ್ಟರ ಮತಾಂತರ ಜಾಲ ; 'ಪವಾಡ ಚಿಕಿತ್ಸೆ' ಆಮಿಷ ಒ...
29-09-25 10:52 pm
ಏಷ್ಯಾ ಕಪ್ ಫೈನಲ್ ಗೆದ್ದರೂ ಕಪ್ ಸ್ವೀಕರಿಸದೆ ಪಾಕಿಗೆ...
29-09-25 03:54 pm
ಕಾಲ್ತುಳಿತ ಘಟನೆ ಆಕಸ್ಮಿಕ ಅಲ್ಲ, ಪಿತೂರಿ ! ಕಲ್ಲು ತ...
28-09-25 10:02 pm
01-10-25 03:35 pm
Mangalore Correspondent
ಮಂಗಳೂರು ಪೂರ್ತಿ ಝಗಮಗ ; ಕೋಟಿ ಕೋಟಿ ಮಿನಿಚರ್ ಅಳವಡಿ...
30-09-25 10:57 pm
Ullal Municipal Commissioner: ಉಳ್ಳಾಲ ನಗರಸಭೆಯಲ...
30-09-25 06:48 pm
ಧರ್ಮಸ್ಥಳ ಪ್ರಕರಣ, ಕೋರ್ಟಿಗೆ ಚಿನ್ನಯ್ಯ ಹೊಸ ಹೇಳಿಕೆ...
29-09-25 11:02 pm
Mithun Rai, Pilinalikes 10th Anniversary, Man...
29-09-25 07:15 pm
01-10-25 02:39 pm
Mangalore Correspondent
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm