ಬ್ರೇಕಿಂಗ್ ನ್ಯೂಸ್
14-06-26 07:17 pm HK News Staffer ದೇಶ - ವಿದೇಶ
ಮುಂಬೈ, ಜೂನ್ 14 : ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಡಳಿತಾತ್ಮಕ ಪಾರದರ್ಶಕತೆ ತರಲು ಮತ್ತು ಅಧಿಕಾರದ ದುರ್ಬಳಕೆಗೆ ಬ್ರೇಕ್ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ವದ ಹೆಜ್ಜೆ ಇಟ್ಟಿದೆ. ಸಹಕಾರಿ ಬ್ಯಾಂಕುಗಳ ನಿರ್ದೇಶಕರ ಗರಿಷ್ಠ ಅಧಿಕಾರಾವಧಿಯನ್ನು 10 ವರ್ಷಗಳಿಗೆ ಸೀಮಿತಗೊಳಿಸಿ, ಆ ಬಳಿಕ ಕಡ್ಡಾಯವಾಗಿ 3 ವರ್ಷಗಳ ಬಿಡುವು (Cooling-off period) ಪಡೆಯಲೇಬೇಕು ಎಂದು ಆರ್‌ಬಿಐ ಖಡಕ್ ಆದೇಶ ಹೊರಡಿಸಿದೆ.
ನಿಯಮ ತರಲು ಕಾರಣವೇನು?
ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಕಾಯ್ದೆಯಡಿ ಸಹಕಾರಿ ಬ್ಯಾಂಕ್ ನಿರ್ದೇಶಕರ ನಿರಂತರ ಅಧಿಕಾರಾವಧಿಯನ್ನು ಗರಿಷ್ಠ 10 ವರ್ಷಗಳಿಗೆ ಸೀಮಿತಗೊಳಿಸಲಾಗಿತ್ತು. ಆದರೆ, ಕೆಲವು ಪ್ರಭಾವಿ ನಿರ್ದೇಶಕರು ತಮ್ಮ 10 ವರ್ಷಗಳ ಅವಧಿ ಮುಗಿಯುವ ಕೆಲವೇ ದಿನಗಳ ಮುನ್ನ ರಾಜೀನಾಮೆ ನೀಡಿ, ಕೇವಲ ಒಂದೆರಡು ವಾರಗಳಲ್ಲಿ ಮತ್ತೆ ಮರು ಆಯ್ಕೆಯಾಗುವ ಅಥವಾ ಸಹ-ಸದಸ್ಯರಾಗಿ (Co-opted) ಮಂಡಳಿ ಸೇರುವ ಮೂಲಕ ನಿಯಮವನ್ನು ಗಾಳಿಗೆ ತೂರುತ್ತಿದ್ದರು. ಈ ಹಿನ್ನೆಲೆಯಲ್ಲಿ ಆರ್‌ಬಿಐ ಈ ಲೂಪ್‌ಹೋಲ್ ಮುಚ್ಚಲು 'ನಗರ/ಗ್ರಾಮೀಣ ಸಹಕಾರಿ ಬ್ಯಾಂಕುಗಳ ಆಡಳಿತ ತಿದ್ದುಪಡಿ ನಿಯಮಾವಳಿ'ಯನ್ನು ಜಾರಿಗೆ ತಂದಿದೆ. ಹೊಸ ನಿಯಮವನ್ನು 2026 ಮೇ 25ರಂದು ಆರ್ ಬಿಐ ಆದೇಶ ಮಾಡಿದೆ.
ಗರಿಷ್ಠ ಅಧಿಕಾರಾವಧಿ 10 ವರ್ಷ ಮಾತ್ರ !
ಇದರಂತೆ, ಒಬ್ಬ ವ್ಯಕ್ತಿ ಯಾವುದೇ ಸಹಕಾರಿ ಬ್ಯಾಂಕಿನಲ್ಲಿ ಸತತವಾಗಿ ಗರಿಷ್ಠ 10 ವರ್ಷಗಳ ಕಾಲ ಮಾತ್ರ ನಿರ್ದೇಶಕನಾಗಿರಲು ಸಾಧ್ಯ. 10 ವರ್ಷಗಳ ಅವಧಿ ಮುಗಿದ ನಂತರ, ಅದೇ ಬ್ಯಾಂಕಿನಲ್ಲಿ ಮತ್ತೆ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಅಥವಾ ನಾಮನಿರ್ದೇಶನಗೊಳ್ಳಲು ಕನಿಷ್ಠ 3 ವರ್ಷಗಳ ಕಾಲ ಆಡಳಿತ ಮಂಡಳಿಯಿಂದ ಹೊರಗುಳಿಯಬೇಕು.
ಮೂರು ವರ್ಷಗಳ 'ಕೂಲಿಂಗ್-ಆಫ್' ಅವಧಿಯಲ್ಲಿ ಆ ವ್ಯಕ್ತಿ ಬ್ಯಾಂಕಿನ ಯಾವುದೇ ಆಡಳಿತಾತ್ಮಕ ಅಥವಾ ನಿರ್ವಹಣಾ ನಿರ್ಧಾರಗಳಲ್ಲಿ ಭಾಗವಹಿಸುವಂತಿಲ್ಲ. ಆತ ಕೇವಲ ಒಬ್ಬ ಸಾಮಾನ್ಯ ಗ್ರಾಹಕ ಅಥವಾ ಸದಸ್ಯರಾಗಿ ಮಾತ್ರ ಮುಂದುವರಿಯಬಹುದು. ಇವರು ಸೇವೆ ಸಲ್ಲಿಸಿದ ನಿರ್ದಿಷ್ಟ ಬ್ಯಾಂಕಿನಿಂದ ಮಾತ್ರ 3 ವರ್ಷ ದೂರ ಇಡಲಾಗುತ್ತದೆ. ಆದರೆ, ಅವರು ಇಚ್ಛಿಸಿದರೆ ಅರ್ಹತೆ ಆಧಾರದ ಮೇಲೆ ಬೇರೆ ಯಾವುದೇ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಲು ತಡೆ ಇರುವುದಿಲ್ಲ.


ಅಧಿಕಾರಾವಧಿ ಲೆಕ್ಕಾಚಾರ ಹೇಗೆ?
ಒಬ್ಬ ನಿರ್ದೇಶಕ ರಾಜೀನಾಮೆ ನೀಡಿ, 3 ವರ್ಷ ತುಂಬುವ ಮುನ್ನವೇ ಮತ್ತೆ ಮಂಡಳಿ ಸೇರಿದರೆ, ಅವರ ಹಳೆಯ ಅಧಿಕಾರಾವಧಿಯನ್ನು ಹೊಸ ಅವಧಿಗೆ ಸೇರಿಸಿ ಲೆಕ್ಕ ಹಾಕಲಾಗುತ್ತದೆ. ಹೀಗಾಗಿ ಆರ್ ಬಿಐ ನಿಯಮ ಗಾಳಿಗೆ ತೂರಿದರೆ ಆ ವ್ಯಕ್ತಿಗೆ ಮತ್ತೆ ಸಂಕಷ್ಟ ಎದುರಾಗಲಿದೆ. ನಿರ್ದೇಶಕರೊಬ್ಬರ ಅಧಿಕಾರಾವಧಿ 'ಕ್ಲಾಕ್' ಮತ್ತೆ ಮೊದಲಿನಿಂದ ಆರಂಭವಾಗಬೇಕಾದರೆ, ಅವರು ಕಡ್ಡಾಯವಾಗಿ 3 ವರ್ಷಗಳ ಕಾಲ ಬ್ಯಾಂಕಿನ ಆಡಳಿತ ಮಂಡಳಿಯಿಂದ ಸಂಪೂರ್ಣ ದೂರ ಉಳಿದಿರಲೇಬೇಕು ಎಂದು ಆರ್ ಬಿಐ ಹೊಸ ನಿಯಮ ಹೇಳುತ್ತದೆ.
ನಗರ ಮತ್ತು ಗ್ರಾಮೀಣ ಸಹಕಾರಿ ಬ್ಯಾಂಕುಗಳಿಗೆ ಹಾಗೂ ಕೇಂದ್ರ ಸಹಕಾರಿ ಬ್ಯಾಂಕುಗಳಿಗೆ ಈ ನಿಯಮ ಅನ್ವಯವಾಗಲಿದೆ. ಕರ್ನಾಟಕದಲ್ಲಿ ಬಹುತೇಕ ಎಲ್ಲ ಜಿಲ್ಲೆಗಳ ಡಿಸಿಸಿ ಬ್ಯಾಂಕುಗಳಲ್ಲಿ ನಿರ್ದೇಶಕರು ಸತತವಾಗಿ ಒಂದೇ ಸ್ಥಾನಕ್ಕೆ ಮರು ಆಯ್ಕೆಯಾಗುತ್ತಿದ್ದು ಬ್ಯಾಂಕುಗಳ ಅಧಿಕಾರವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಚಕ್ರಾಧಿಪತ್ಯ ಮಾಡಿಕೊಂಡು ಸರ್ವಾಧಿಕಾರ ನಡೆಸುತ್ತಿದ್ದವರು ಈ ನಿಯಮ ಪ್ರಕಾರ ಕೂಡಲೇ ರಾಜಿನಾಮೆ ನೀಡಬೇಕಾಗುತ್ತದೆ.
19-07-26 08:34 pm
HK News Desk
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
19-07-26 09:37 pm
HK News Staffer
20 ದಿನಗಳ ಉಪವಾಸದಿಂದ ಹದಗೆಟ್ಟ ಆರೋಗ್ಯ, ಸೋನಮ್ ವಾಂಗ...
18-07-26 09:31 pm
ಮಾಜಿ ಪ್ರಧಾನಿ ದೇವೇಗೌಡರ ಧರ್ಮಪತ್ನಿ ಚನ್ನಮ್ಮ ನಿಧನ...
18-07-26 06:22 pm
ಡೊನಾಲ್ಡ್ ಟ್ರಂಪ್ ಕೊಂದವರಿಗೆ 10 ಮಿಲಿಯನ್ ಡಾಲರ್ ಬಹ...
18-07-26 12:48 pm
‘ಪ್ರಾಜೆಕ್ಟ್ ಮೇಘಾಲಯ’ ಸಂಚು ಸ್ಫೋಟ! ವಿಜಯ್ ಸರ್ಕಾರ...
18-07-26 12:22 pm
17-07-26 10:25 pm
HK News Staffer
ಎಸ್ಐಆರ್ ನಡುವೆ ಶಾಶ್ವತ ನಿವಾಸಿ ಪತ್ರ ಜಾರಿ ಅಕ್ರಮ ಬ...
17-07-26 07:58 pm
ಉಳ್ಳಾಲ ತೀರಕ್ಕೆ ಅಪ್ಪಳಿಸಿದ ಬೂತಾಯಿ ಮೀನುಗಳ ರಾಶಿ !...
17-07-26 07:22 pm
ಸುರತ್ಕಲ್ ಬಳಿ ಮೀನುಗಾರಿಕಾ ದೋಣಿ ಪಲ್ಟಿ ; ಸಮುದ್ರಕ್...
17-07-26 03:55 pm
ಸೌಂದರ್ಯ ಕೆಡಿಸಿದೆ ತೊಕ್ಕೊಟ್ಟು ಫ್ಲೈ ಓವರಿನ ಅನಧಿಕೃ...
15-07-26 10:44 pm
19-07-26 07:42 pm
HK News Desk
ಮೂಡುಬಿದ್ರೆ ; ಕುಡಿದ ಮತ್ತಿನಲ್ಲಿ ಮಚ್ಚು ಹಿಡಿದು ಯು...
18-07-26 10:06 pm
ಮೈಸೂರು ; ಹೊಸ ಬದುಕಿನ ಕನಸು 15 ದಿನದಲ್ಲೇ ನುಚ್ಚುನ...
18-07-26 07:27 pm
ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ ; 8 ಕಾರ್...
18-07-26 07:21 pm
ಸಂಪಾಜೆ ಮೀಸಲು ಅರಣ್ಯದಲ್ಲಿ ಕಾಡುಕೋಣ ಬೇಟೆ ; ತಡೆದು...
18-07-26 12:34 pm