ಬ್ರೇಕಿಂಗ್ ನ್ಯೂಸ್
14-06-26 09:46 pm HK News Staffer ದೇಶ - ವಿದೇಶ
ಗುರುಗ್ರಾಮ್, ಜೂನ್ 14: ಕೆಲವೊಮ್ಮೆ ತಮಾಷೆಗಾಗಿ ಮಾಡುವ ಕೆಲಸಗಳೇ ದುಬಾರಿಯಾಗುತ್ತವೆ ಎಂಬುದಕ್ಕೆ ಈ ಘಟನೆಯೇ ನಿದರ್ಶನ. ಸ್ಟ್ಯಾಂಡ್ ಅಪ್ ಕಾಮಿಡಿ ಕಾರ್ಯಕ್ರಮದಲ್ಲಿ ತಮಾಷೆಯಾಗಿ ಹೇಳಿದ ಒಂದು ಮಾತು ಇದೀಗ ಯುವಕನೊಬ್ಬನ ಉದ್ಯೋಗವನ್ನೇ ಕಸಿದುಕೊಂಡಿದ್ದಲ್ಲದೇ ದೇಶಾದ್ಯಂತ ಚರ್ಚೆಗಳನ್ನು ಹುಟ್ಟುಹಾಕಿದೆ.
ಗುರುಗ್ರಾಮ್ ಮೂಲದ ವೆಬ್ ಡೆವಲಪರ್ ಹಿಮಾಂಶು ಜಂಗ್ರಾ ಎಂಬಾತ ಹಾಸ್ಯ ಕಲಾವಿದ ಪ್ರಣಿತ್ ಮೋರೆ ಅವರ ಜೊತೆಗಿನ ಕಾರ್ಯಕ್ರಮದಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆ ಕೆಲಸಕ್ಕೇ ಕುತ್ತು ತಂದಿದೆ. ಖ್ಯಾತ ಸ್ಟ್ಯಾಂಡಪ್ ಕಾಮಿಡಿಯನ್ ಪ್ರಣಿತ್ ಮೋರೆ ಅವರ ಲೈವ್ ಕಾರ್ಯಕ್ರಮದಲ್ಲಿ ಪ್ರೇಕ್ಷಕರೊಂದಿಗೆ ನಡೆಸಿದ ಸಂವಾದದಲ್ಲಿ ಹಿಮಾಂಶು ಜಂಗ್ರಾ ಎಂಬಾತ ತನ್ನ ಡೇಟಿಂಗ್ ಅನುಭವ ಒಂದನ್ನು ಹಂಚಿಕೊಂಡಿದ್ದ.
ಆತ ಒಬ್ಬ ಮಹಿಳೆಯೊಂದಿಗೆ ಡೇಟಿಂಗ್ ಹೋಗಿದ್ದಾಗ 370 ರೂ. ಮೌಲ್ಯದ ಚಿಕನ್ ಬಿರಿಯಾನಿ ಖರೀದಿಸಿದ್ದಾಗಿ ಹೇಳಿದ್ದ. ಮಾತು ಅಷ್ಟಕ್ಕೇ ಸೀಮಿತವಾಗಿದ್ದರೆ ಇಷ್ಟೊಂದು ವಿವಾದ ಆಗುತ್ತಿರಲಿಲ್ಲ. ಆದರೆ ಆತ ತನ್ನ ಮಾತು ಮುಂದುವರೆಸುತ್ತ, ತಾನು ಬಿರಿಯಾನಿ ಬದಲಾಗಿ ಆಕೆಯಿಂದ ಏನಾದರೂ ಪ್ರತಿಫಲವನ್ನು ನಿರೀಕ್ಷಿಸಿದ್ದೆ ಎಂದು ಹೇಳಿ ಖಾಸಗಿ ಕ್ಷಣಗಳನ್ನೂ ವಿವರಿಸಿದ್ದ. ಅಲ್ಲದೆ 370 ರೂ. ನೀಡಿ ಬಿರಿಯಾನಿ ಕೊಡಿಸಿದ್ದಕ್ಕೂ ಫಲ ದೊರೆಯಿತು. ಫುಲ್ ಪೈಸಾ ವಸೂಲಿಯಾಯ್ತು ಎಂದು ವ್ಯಂಗ್ಯವಾಡಿದ್ದ. ಈ ಕುರಿತ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಹಿಮಾಂಶು ಜಂಗ್ರಾ ನೀಡಿರುವ ಹೇಳಿಕೆ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದೆ. ಊಟಕ್ಕೆ ಹಣ ಖರ್ಚು ಮಾಡಿದಷ್ಟಕ್ಕೆ ಮಹಿಳೆಯ ಮೇಲೆ ಯಾವುದೇ ಬಾಧ್ಯತೆ ಅಥವಾ ಹಕ್ಕು ಸೃಷ್ಟಿಯಾಗುವುದಿಲ್ಲ ಎಂದು ಸಾವಿರಾರು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿವಾದ ತೀವ್ರವಾಗುತ್ತಿದ್ದಂತೆ ಜನರ ಗಮನ ಜಂಗ್ರಾ ಕೆಲಸ ಮಾಡುತ್ತಿದ್ದ ಸಂಸ್ಥೆಯ ಮೇಲೆ ತಿರುಗಿದೆ. ಗುರುಗ್ರಾಮ್ ಮೂಲದ ಬ್ರ್ಯಾಂಡಿಂಗ್ ಮತ್ತು ಸೋಶಿಯಲ್ ಮೀಡಿಯಾ ಸಂಸ್ಥೆ Starvik Designಗೆ ಸಾಮಾಜಿಕ ಜಾಲತಾಣ ಬಳಕೆದಾರರಿಂದ ಸಂದೇಶಗಳು ಮತ್ತು ಕರೆಗಳು ಹರಿದು ಬರಲಾರಂಭಿಸಿವೆ. ಹಿಮಾಂಶು ಜಂಗ್ರಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ಕೆಲಸದಿಂದ ಕಿತ್ತೊಗೆದ ಸಂಸ್ಥೆ
ಸಂಸ್ಥೆಗೆ ಸಾವಿರಾರು ಮೇಲ್ ಗಳು ಬರುತ್ತಿದ್ದು, ಸಂಸ್ಥೆಯ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸಾವಿರಾರು ಕಮೆಂಟ್ ಗಳು ಬಂದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸ್ಟಾರ್ವಿಕ್ ಡಿಸೈನ್ ಸಂಸ್ಥೆ ತನ್ನ ಉದ್ಯೋಗಿ ಹಿಮಾಂಶು ಜಂಗ್ರಾನನ್ನು ಕೆಲಸದಿಂದ ಕಿತ್ತೊಗೆದಿದೆ. ಈ ಕುರಿತು ಸಂಸ್ಥೆಯ ಸ್ಥಾಪಕ ವಿವೇಕ್ ವಿಶ್ವಕರ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಜಂಗ್ರಾ ಅವರ ಹೇಳಿಕೆಗಳು ಸಂಸ್ಥೆಯ ಮೌಲ್ಯಗಳನ್ನು ಉಲ್ಲಂಘಿಸುತ್ತದೆ. ಜೊತೆಗೆ, ಈ ವಿವಾದ ಸಂಸ್ಥೆಯ ಉದ್ಯೋಗಿಗಳು, ಗ್ರಾಹಕರು ಮತ್ತು ಕೆಲಸದ ವಾತಾವರಣದ ಮೇಲೆಯೂ ಪರಿಣಾಮ ಬೀರುತ್ತಿತ್ತು. ಈ ಹಿನ್ನೆಲೆಯಲ್ಲಿ ಹಿಮಾಂಶು ಜಂಗ್ರಾ ಅವರೊಂದಿಗೆ ಸಂಬಂಧ ಕಡಿದುಕೊಳ್ಳುವ ನಿರ್ಧಾರಕ್ಕೆ ಬಂದಿದೆ ಎಂದು ಹೇಳಿದರು.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 07:30 pm
HK News Staffer
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
CM Dk Shivakumar, Mangalore: ಕದ್ರಿ ದೇವಸ್ಥಾನದಲ...
18-09-26 03:39 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am