ತಾಲೂಕು ಕಚೇರಿಗೆ ಶಾಸಕ ಭರತ್ ಶೆಟ್ಟಿ ದಿಢೀರ್ ಭೇಟಿ, ತಹಸೀಲ್ದಾರ್ ಗೆ ತರಾಟೆ 

28-09-20 07:51 pm       Mangaluru Correspondent   ಕರಾವಳಿ

ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಜನರನ್ನು ಸತಾಯಿಸುತ್ತಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 

ಸುರತ್ಕಲ್, ಸೆಪ್ಟಂಬರ್ 28: ಮಂಗಳೂರು ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಜನರನ್ನು ಸತಾಯಿಸುತ್ತಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 

ಆರ್ ಟಿ ಸಿ ಸಹಿತ ದಾಖಲೆಗಳಿಗಾಗಿ ಸತಾಯಿಸುತ್ತಿದ್ದಾರೆ ಎಂಬ ಜನರ ದೂರಿಗೆ ಸ್ಪಂದಿಸಿ  ಶಾಸಕರು ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ್ದಾರೆ. ಸೂಕ್ತ ಸಮಯದಲ್ಲಿ ದಾಖಲೆ ನೀಡದೆ ಜನರಿಗೆ ಸತಾಯಿಸುತ್ತಿದ್ದೀರಾ... ಜನಪ್ರತಿನಿಧಿಯಾಗಿ ನನಗೆ ಜನರ ಕರೆ ಬರುತ್ತಿದೆ. ಏನು ಮಾಡುತ್ತಿದ್ದೀರಿ, ಒಂದೋ ಕೆಲಸ ಮಾಡಿಸಿ, ಇಲ್ಲದಿದ್ದರೆ ಕೆಲಸ ಮಾಡದವರನ್ನು ತೆಗೆದುಹಾಕಿ ಎಂದು ತಹಶೀಲ್ದಾರ್ ಗುರುಪ್ರಸಾದ್ ಅವರನ್ನು ತರಾಟೆಗೆತ್ತಿಕೊಂಡರು. ಕಚೇರಿಯಲ್ಲಿ ಇಷ್ಟು ಜನ ಇದ್ದರೂ ತಿಂಗಳುಗಟ್ಟಲೆ ಏಕೆ ಸತಾಯಿಸುತ್ತಿದ್ದೀರಿ, ಕಡತ ಯಾಕೆ ವಿಲೇವಾರಿ ಆಗುತ್ತಿಲ್ಲ, ಕಾರಣ ಕೊಡಿ ಎಂದು ಪ್ರಶ್ನೆ ಮಾಡಿದರು. 

ರೆಕಾರ್ಡ್ ರೂಂನಲ್ಲಿ ನಾಲ್ಕು ಜನ ಕೆಲಸಕ್ಕೆ ಇದ್ದಾರೆ. ಕೆಲಸಕ್ಕೆ ಸಿಬಂದಿ ಇದ್ದರೂ 5-6 ತಿಂಗಳ ಕಾಲ ಕೆಲಸ ಆಗದಿದ್ದರೆ ಹೇಗೆ.. ಹೀಗೆಯೇ ಮುಂದುವರಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದರು. 

ಇದೇ ಸಂದರ್ಭ ಮಿನಿ ವಿಧಾನ ಸೌಧದಲ್ಲಿರುವ ವಿವಾಹ ನೋಂದಣಿ ಹಾಗೂ ಭೂದಾಖಲೆ ಪತ್ರಗಳ ರೆಕಾರ್ಡ್ ರೂಮಿಗೂ, ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Join our WhatsApp group for latest news updates (2)

video