ಯಶಪಾಲ್ ಸುವರ್ಣ, ಪ್ರಮೋದ್ ಮುತಾಲಿಕ್ ತಲೆ ತೆಗೆದರೆ 20 ಲಕ್ಷ ಬಹುಮಾನ ! ಮಾರಿಗುಡಿ ಹೆಸರಲ್ಲಿ ಜಾಲತಾಣದಲ್ಲಿ ಕೊಲೆ ಬೆದರಿಕೆ 

08-06-22 01:13 pm       Udupi Correspondent   ಕರಾವಳಿ

ಬಿಜೆಪಿ ರಾಷ್ಟ್ರೀಯ ಹಿಂದುಳಿದ ಮೋರ್ಚಾಗಳ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಹಾಗೂ ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಅವರನ್ನು ತಲೆ ಕಡಿದರೆ ಇಪ್ಪತ್ತು ಲಕ್ಷ ಬಹುಮಾನ ನೀಡುವುದಾಗಿ ಪೋಸ್ಟ್ ಹಾಕಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಉಡುಪಿ, ಜೂನ್ 8 : ಬಿಜೆಪಿ ರಾಷ್ಟ್ರೀಯ ಹಿಂದುಳಿದ ಮೋರ್ಚಾಗಳ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಹಾಗೂ ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಅವರನ್ನು ತಲೆ ಕಡಿದರೆ ಇಪ್ಪತ್ತು ಲಕ್ಷ ಬಹುಮಾನ ನೀಡುವುದಾಗಿ ಪೋಸ್ಟ್ ಹಾಕಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Mari_gudi_6 ಹೆಸರಿನ ಇನ್ಸ್ ಟಾ ಗ್ರಾಮ ಪೇಜ್ ನಲ್ಲಿ ಈ ರೀತಿ ಬೆದರಿಕೆ ಹಾಕಲಾಗಿದೆ. ಬ್ಯಾರಿ ಯುವಕ, ಮಂಗಳೂರು ಮಾರಿಗುಡಿ ಎಂದು ಪೇಜ್ ಮೇಲ್ಬಾಗದಲ್ಲಿ ಬರೆಯಲಾಗಿದ್ದು ಮಂಗಳೂರಿನ ಯುವಕರು ಈ ಪೇಜ್ ಹಿಂದಿರುವ ಶಂಕೆಯಿದೆ.

ಯಶಪಾಲ್ ಸುವರ್ಣ ಮತ್ತು ಪ್ರಮೋದ್ ಮುತಾಲಿಕ್, ಹಿಜಾಬ್ ವಿಚಾರದಲ್ಲಿ ಉಗ್ರ ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದರು. ಅಲ್ಲದೆ, ಮುಸ್ಲಿಂ ವಿರೋಧಿ ನಿಲುವುಗಳನ್ನು ವ್ಯಕ್ತಪಡಿಸುತ್ತಿದ್ದರು. ಹಿಂದುತ್ವದ ಪರವಾಗಿ ಖಡಕ್ ನಿಲುವುಗಳನ್ನು ಹೇಳುತ್ತಿದ್ದರು. ಇದೇ ಕಾರಣಕ್ಕೋ ಏನೋ ಕಿಡಿಗೇಡಿ ಯುವಕರು ಈ ರೀತಿ ಪೋಸ್ಟ್ ಮಾಡಿ, ಆಕ್ರೋಶ ಹೊರಹಾಕಿದ್ದಾರೆ. ಬಹಿರಂಗ ಬೆದರಿಕೆ ಹಾಕಿರುವ ಬಗ್ಗೆ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಈ ಬಗ್ಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಯಶಪಾಲ್ ಸುವರ್ಣ, ಇಂಥ ಶಕ್ತಿಗಳನ್ನು ಮಟ್ಟ ಹಾಕಲು ಗೊತ್ತಿದೆ. ಈ ರೀತಿಯ ಬೆದರಿಕೆಗಳಿಗೆ ಬಗ್ಗುವುದಿಲ್ಲ. ಯಾರು ಇದರ ಹಿಂದೆ ಇದ್ದಾರೋ ಅವರನ್ನು ಶಿಕ್ಷಿಸಲು ಪೊಲೀಸ್ ಇಲಾಖೆಗೆ ಒತ್ತಾಯಿಸುತ್ತೇನೆ ಎಂದಿದ್ದಾರೆ. 

ಧಾರವಾಡದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಮೋದ ಮುತಾಲಿಕ್, ನನಗೆ ಮತ್ತು ಯಶಪಾಲ್ ಸುವರ್ಣ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಒಬ್ಬರ ತಲೆಗೆ 10 ಲಕ್ಷ ಬೆಲೆ ಘೋಷಣೆ ಹಾಕಿದ್ದಾರೆ. ಈ ರೀತಿ ಸಾಕಷ್ಟು ಜೀವ ಬೆದರಿಕೆ ಬಂದಿದೆ.‌ ಯಾವ ಬೆದರಿಕೆಗೂ ಹೆದರಲ್ಲ. 2009ರಲ್ಲಿ ರಶೀದ್ ಮಲಬಾರಿ ಎಂಬಾತ ನನ್ನನ್ನ ಕೊಲೆ ಮಾಡಲಿಕ್ಕೆ ಬಂದಿದ್ದ.‌ ಇವತ್ತು ಬೆಳಗ್ಗೆ ಎರಡು ಪೋನ್ ಕರೆ ಬಂದಿವೆ. ಈ ಬಗ್ಗೆ ಪೊಲೀಸ್ ಕಮಿಷನರ್ ಗೆ ದೂರು ಕೊಡುತ್ತೇನೆ ಎಂದು ಹೇಳಿದ್ದಾರೆ.

Hijab row, Udupi Yashpal Suvarna and  Pramod Muthalik gets death threats on Instagram. The post by Marigudi 6 offers big money for those who will behead both. Kaup Yuva Morcha lodged a complaint with Kaup police circle inspector Prakash and Kaup police station inspector requesting him to hold investigations and take suitable action in this connection.