"ಅಭಿವೃದ್ಧಿಯಿಂದಲೇ ಬಿಜೆಪಿ ಉಳ್ಳಾಲದಲ್ಲಿ ಶಾಸಕರನ್ನು ಗೆಲ್ಲಿಸಲಿದೆ "

28-09-20 08:24 pm       Mangaluru Correspondent   ಕರಾವಳಿ

ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ಅನುದಾನದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿದೆ.

ಉಳ್ಳಾಲ, ಸೆಪ್ಟಂಬರ್ 28: ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ಅನುದಾನದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿದೆ. ಸ್ಥಳೀಯ ಶಾಸಕ ಖಾದರ್ ಅವರು ಅಸಡ್ಡೆ ವಹಿಸಿರುವ ಎಲ್ಲ ಪ್ರದೇಶಗಳ ಅಭಿವೃದ್ಧಿ ಕಾರ್ಯವನ್ನು ಸರ್ಕಾರವು ಉಸ್ತುವಾರಿ ಸಚಿವರ ಮೂಲಕ ನಡೆಸುತ್ತಿದೆ. ಸದ್ಯದಲ್ಲೇ ಕ್ಷೇತ್ರಕ್ಕೆ ಅತೀ ಅಗತ್ಯವಿರುವ ಅಗ್ನಿಶಾಮಕ ಠಾಣೆ, ಪದವಿ ಕಾಲೇಜು ಹಾಗೂ ಐಟಿಐ ಕಾಲೇಜನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ ಪಂಡಿತ್‌ಹೌಸ್ ಹೇಳಿದರು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಮಳೆಹಾನಿ ಪರಿಹಾರದ ಐದು ಲಕ್ಷ ರೂ. ಅನುದಾನದಲ್ಲಿ ನಡೆಯಲಿರುವ ಕುತ್ತಾರು ಬೇರಿಕೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. 

ಕ್ಷೇತ್ರದ ಎಲ್ಲ 27 ಗ್ರಾಮಗಳಿಗೂ ಅತೀ ಹೆಚ್ಚಿನ ಅನುದಾನವನ್ನು ತಂದು ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತೇವೆ. ಆಮೂಲಕ ಮುಂದಿನ ಬಾರಿ ಕ್ಷೇತ್ರದಿಂದ ಬಿಜೆಪಿ ಶಾಸಕರು ಆಯ್ಕೆಯಾಗುವಂತೆ ಮಾಡಲಾಗುವುದು ಎಂದರು. 

ಜಿಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಸ್ಥಳೀಯ ಶಾಸಕರು ಅಭಿವೃದ್ಧಿ ವಿಷಯದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ತಮಗೆ ಮತ ಸಿಗುವ ಕ್ಷೇತ್ರಗಳಿಗೆ ಮಾತ್ರ ಅನುದಾನ ಬರುವಂತೆ ಮಾಡಿ ಬೇರೆ ಪ್ರದೇಶಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ದ.ಕ. ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ,  ಬಿಜೆಪಿ ದ.ಕ. ಜಿಲ್ಲಾ ಸಮಿತಿ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಹಿರಿಯ ಮುಖಂಡ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಧನಲಕ್ಷ್ಮಿ ಗಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿ ಹೇಮಂತ್ ಶೆಟ್ಟಿ, ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ ಭರತ್‌ರಾಜ್ ಗಟ್ಟಿ, ಕಿಶೋರ್ ಕುಲಾಲ್, ಜಿಲ್ಲಾ ಯುವ ಮೋರ್ಚಾ ಸದಸ್ಯ ಪ್ರದೀಪ್ ಶೆಟ್ಟಿ, ಹಿರಿಯರಾದ ಬಾಬು ಶೆಟ್ಟಿ ದೇಸೋಡಿ, ಕೊಣಾಜೆ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಸದಾಶಿವ ಆಚಾರ್ಯ, ಪ್ರಮುಖ್ ಸುಮಲತ, ರತ್ನಾಕರ ಕಾವ, ಮುನ್ನೂರು ಪಂಚಾಯಿತಿ ನಿಕಟಪೂರ್ವ ಉಪಾಧ್ಯಕ್ಷ ಹರೀಶ್ ಭಂಡಾರಮನೆ ಉಪಸ್ಥಿತರಿದ್ದರು.

Join our WhatsApp group for latest news updates (2)