ತರಗತಿ ಒಳಗೆ ಸಾವರ್ಕರ್, ಭಾರತ ಮಾತೆ ಫೋಟೋ ವೈರಲ್ ; ಹಂಪನಕಟ್ಟೆ ಕಾಲೇಜಿನಲ್ಲಿ ಮತ್ತೊಂದು ವಿವಾದ

09-06-22 12:00 pm       Mangalore Correspondent   ಕರಾವಳಿ

ಹಿಜಾಬ್ ಕಾರಣಕ್ಕೆ ವಿವಾದಕ್ಕೆ ಈಡಾಗಿರುವ ನಗರದ ಹಂಪನಕಟ್ಟೆ ವಿವಿ ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳು ಕ್ಲಾಸ್ ರೂಮ್ ಒಳಗಡೆ ಸಾವರ್ಕರ್ ಮತ್ತು ಭಾರತ ಮಾತೆಯ ಫೋಟೋ ಇಟ್ಟು ಹೂಹಾರ ಹಾಕಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಗಳೂರು, ಜೂನ್ 9: ಹಿಜಾಬ್ ಕಾರಣಕ್ಕೆ ವಿವಾದಕ್ಕೆ ಈಡಾಗಿರುವ ನಗರದ ಹಂಪನಕಟ್ಟೆ ವಿವಿ ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳು ಕ್ಲಾಸ್ ರೂಮ್ ಒಳಗಡೆ ಸಾವರ್ಕರ್ ಮತ್ತು ಭಾರತ ಮಾತೆಯ ಫೋಟೋ ಇಟ್ಟು ಹೂಹಾರ ಹಾಕಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಜೂನ್ 6ರಂದು ಘಟನೆ ನಡೆದಿದ್ದು, ಕಾಲೇಜು ಪ್ರಾಂಶುಪಾಲರ ಅನುಮತಿ ಪಡೆಯದೆ ಬ್ಲಾಕ್ ಬೋರ್ಡ್ ಮೇಲ್ಗಡೆ ಫೋಟೋ ನೇತು ಹಾಕಿದ್ದಾರೆ. ಆನಂತರ, ಇತರೇ ವಿದ್ಯಾರ್ಥಿಗಳು ಈ ಘಟನೆ ಬಗ್ಗೆ ಪ್ರಾಂಶುಪಾಲರಿಗೆ ದೂರು ನೀಡಿದ್ದು, ಫೋಟೋ ಹಾಕಿದವರಿಂದಲೇ ಪ್ರಾಂಶುಪಾಲರು ತೆರವು ಮಾಡಿಸಿದ್ದರು. ಆದರೆ ಹೀಗೆ ಫೋಟೋ ಹಾಕಿರುವುದರ ವಿಡಿಯೋ ವಿದ್ಯಾರ್ಥಿಗಳ ಮೂಲಕ ಜಾಲತಾಣದಲ್ಲಿ ಲೀಕ್ ಆಗಿದ್ದು, ವೈರಲ್ ಆಗಿದೆ.

ಇದೇ ವಿಚಾರದಲ್ಲಿ ಪ್ರಾಂಶುಪಾಲರು ಫೋಟೋ ನೇತು ಹಾಕಿದ್ದ ವಿದ್ಯಾರ್ಥಿಗಳನ್ನು ಕರೆದು ವಾರ್ನ್ ಮಾಡಿದ್ದಾರೆ. ಅಲ್ಲದೆ, ಅವರಿಂದ ಕ್ಷಮಾಪಣಾ ಪತ್ರವನ್ನೂ ಪಡೆದುಕೊಂಡಿದ್ದಾರೆ. ಇದೇ ವೇಳೆ, ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಬಿ. ಪತ್ರಿಕಾ ಹೇಳಿಕೆ ನೀಡಿದ್ದು, ಕಾಲೇಜಿನಲ್ಲಿ ಈ ರೀತಿಯ ನಡೆಗಳ ಮೂಲಕ ಅತಿರೇಕಕ್ಕೆ ಕಾರಣವಾಗುತ್ತಿರುವ ಘಟನೆಯ ಹಿಂದೆ ಯಾರಿದ್ದಾರೆ ಅನ್ನುವುದನ್ನು ಪತ್ತೆ ಮಾಡಬೇಕು. ಇಂಥ ಕೆಲಸಗಳಿಗೆ ಪ್ರಚೋದನೆ ನೀಡುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು. ಮಹಾತ್ಮ ಗಾಂಧಿ ಮಾತ್ರ ನಮಗೆ ರೋಲ್ ಮಾಡೆಲ್. ತರಗತಿ ಒಳಗೆ ಯಾವೆಲ್ಲ ಮಹಾತ್ಮರ ಫೋಟೋ ಹಾಕಬಹುದು ಎಂಬ ಬಗ್ಗೆ ಶಿಕ್ಷಣ ಇಲಾಖೆಯಿಂದಲೇ ಸುತ್ತೋಲೆ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.

The University College, a constituent college of Mangalore University, in the city has removed portraits of V.D. Savarkar and Bharat Mata that were found mounted on the wall above the blackboard in a classroom two days ago without any permission from the college.Some students had mounted the two portraits above the blackboard on Monday evening. It came to light after a video clip showing them viral in social media and after some students brought the matter to the notice of the principal.