ಕಣಿಯೂರು ; ಮನೆಯ ಬೆಂಕಿ ನಂದಿಸುವ ನೆಪದಲ್ಲಿ ಚಿನ್ನಾಭರಣ ಎಗರಿಸಿದ ಭೂಪ ಪೊಲೀಸ್ ಬಲೆಗೆ

09-06-22 12:56 pm       Mangalore Correspondent   ಕರಾವಳಿ

ಉಪ್ಪಿನಂಗಡಿ ಬಳಿಯ ಕಣಿಯೂರಿನಲ್ಲಿ ಮನೆಗೆ ಬೆಂಕಿ ಬಿದ್ದು ಸ್ಥಳೀಯರು ರಕ್ಷಣೆಗೆ ತೆರಳಿದ್ದಾಗ ವ್ಯಕ್ತಿಯೊಬ್ಬ ಮನೆಯ ಒಳಗಿದ್ದ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪುತ್ತೂರು, ಜೂನ್ 9: ಉಪ್ಪಿನಂಗಡಿ ಬಳಿಯ ಕಣಿಯೂರಿನಲ್ಲಿ ಮನೆಗೆ ಬೆಂಕಿ ಬಿದ್ದು ಸ್ಥಳೀಯರು ರಕ್ಷಣೆಗೆ ತೆರಳಿದ್ದಾಗ ವ್ಯಕ್ತಿಯೊಬ್ಬ ಮನೆಯ ಒಳಗಿದ್ದ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಉಪ್ಪಿನಂಗಡಿ ಬಳಿಕ ಕಣಿಯೂರಿನ ಆನಂದ ಮೂಲ್ಯ ಎಂಬವರ ಮನೆಗೆ ಮೇ 16ರಂದು ಬೆಂಕಿ ಬಿದ್ದಿತ್ತು. ಒಂದು ಭಾಗದಲ್ಲಿ ಪೂರ್ತಿ ಸುಟ್ಟು ಹೋಗಿದ್ದು, ಸ್ಥಳೀಯರು, ಮನೆಯವರು ಗಾಬರಿಗೊಂಡು ಒಳಗಿದ್ದ ವಸ್ತುಗಳನ್ನೆಲ್ಲ ತಂದು ಹೊರಗೆ ರಾಶಿ ಹಾಕಿದ್ದರು. ಒಂದು ಬಾಕ್ಸ್ ನಲ್ಲಿ 2.5 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಇನ್ನಿತರ ದಾಖಲೆ ಪತ್ರಗಳಿದ್ದವು. ಹೊರಗೆ ತಂದಿಟ್ಟಿದ್ದ ಬಾಕ್ಸ್ ನಲ್ಲಿ ಬಳಿಕ ನೋಡಿದರೆ ಚಿನ್ನಾಭರಣ ಕಾಣೆಯಾಗಿತ್ತು.

Daijiworld - A News portal linking West coast of India and the World

ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ತನಿಖೆ ನಡೆಸಿದಾಗ ಸ್ಥಳೀಯ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ಶಿವಪ್ರಸಾದ್ (38) ಎಂಬಾತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು ಬಂಗಾರವನ್ನು ಹಿಂತಿರುಗಿಸಿದ್ದಾನೆ. ಬೆಂಕಿ ಬಿದ್ದ ಸಂದರ್ಭದಲ್ಲಿ ತಾನೇ ಬೆಂಕಿಗಾಹುತಿಯಾಗುತ್ತಿದ್ದ ಚಿನ್ನಾಭರಣ ಇದ್ದ ಬಾಕ್ಸ್ ಅನ್ನು ತಂದು ಹೊರಗೆ ಇಟ್ಟಿದ್ದು, ಅದೇ ವೇಳೆ ಚಿನ್ನವನ್ನು ಎಗರಿಸಿದ್ದಾಗಿ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

In a bizarre incident that is reported from the taluk, which occurred on May 16, Uppinangady police arrested a man, employee of a local bar and restaurant on the accusation of stealing gold from a house that was on fire. The house of Anand Moolya, resident of Malengal in Kaniyoor village of Beltangady caught fire on May 16. Locals helped in time and put off the fire. Many things went up in ashes.