ಶಾಸಕ ಖಾದರ್ ಮಾರ್ಮಿಕ ಮಾತು ವರ್ಕೌಟ್ ; ಉಪ್ಪಿನಂಗಡಿ ಕಾಲೇಜಿನಲ್ಲಿ ಹೋರಾಟ ಬಿಟ್ಟು ತರಗತಿಗೆ ಹಾಜರಾದ ವಿದ್ಯಾರ್ಥಿನಿಯರು ! 

09-06-22 06:28 pm       Mangalore Correspondent   ಕರಾವಳಿ

ಹಿಜಾಬ್ ಹೋರಾಟದಿಂದ ಸುದ್ದಿಯಾಗಿದ್ದ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರಿವರ್ತನೆ ಗೋಚರಿಸಿದ್ದು, ಇತ್ತೀಚೆಗೆ ಅಮಾನತುಗೊಂಡವರು ಸೇರಿದಂತೆ 46 ವಿದ್ಯಾರ್ಥಿನಿಯರು ಹಿಜಾಬ್‌ ಬೇಡಿಕೆ ಬದಿಗಿಟ್ಟು ತರಗತಿಗೆ ಹಾಜರಾಗಿದ್ದಾರೆ. 

ಪುತ್ತೂರು, ಜೂನ್ 9 : ಹಿಜಾಬ್ ಹೋರಾಟದಿಂದ ಸುದ್ದಿಯಾಗಿದ್ದ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರಿವರ್ತನೆ ಗೋಚರಿಸಿದ್ದು, ಇತ್ತೀಚೆಗೆ ಅಮಾನತುಗೊಂಡವರು ಸೇರಿದಂತೆ 46 ವಿದ್ಯಾರ್ಥಿನಿಯರು ಹಿಜಾಬ್‌ ಬೇಡಿಕೆ ಬದಿಗಿಟ್ಟು ತರಗತಿಗೆ ಹಾಜರಾಗಿದ್ದಾರೆ. 

ಸೋಮವಾರದಿಂದ 24 ವಿದ್ಯಾರ್ಥಿನಿಯರ ಕಾಲೇಜು ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದರೂ ವಾರದ ಹಿಂದೆ ಅಮಾನತುಗೊಂಡ ವಿದ್ಯಾರ್ಥಿನಿಯರು ಸೇರಿ ಹಲವರು ಕಾಲೇಜಿಗೆ ಬಂದು ತರಗತಿಗೆ ಪ್ರವೇಶಿಸಲು ಯತ್ನಿಸಿದ ಬೆನ್ನಲ್ಲೇ ಎಲ್ಲ ವಿದ್ಯಾರ್ಥಿನಿಯರ ಹೆತ್ತವರಿಗೆ ಕಾಲೇಜಿನಿಂದ ಮಾಹಿತಿ ನೀಡಲಾಯಿತು. ಬಹುತೇಕ ಹೆತ್ತವರು ತಮ್ಮ ಮಕ್ಕಳು ಹಿಜಾಬ್‌ ಹೋರಾಟದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿಯೇ ಇಲ್ಲವೆಂದು ತಿಳಿಸಿದ್ದು ವಿಶೇಷವಾಗಿತ್ತು. 

Protesting girls in Mangaluru college warns massive protest if they are not  allowed to wear Hijab - Indus Scrolls

ಅಮಾನತಾಗಿದ್ದ ಆರು ಮಂದಿ ತರಗತಿಗೆ ಹಾಜರು 

ವಾರದ ಮೊದಲು ಅಮಾನತಾಗಿದ್ದ ಆರು ವಿದ್ಯಾರ್ಥಿನಿಯರು ಬುಧವಾರ ಕಾಲೇಜಿಗೆ ಆಗಮಿಸಿ ಸಮವಸ್ತ್ರ ನಿಯಮಾವಳಿಯನ್ನು ಪಾಲಿಸುವುದಾಗಿ ಮುಚ್ಚಳಿಕೆ ಬರೆದು ಕೊಟ್ಟು ತರಗತಿಗೆ ಬಂದಿದ್ದಾರೆ. ಇದೇ ವೇಳೆ, ಪ್ರತಿಭಟನೆಗು ಹಾಜರಾಗದೆ, ಕಾಲೇಜಿಗೂ ಬರದೆ ದೂರ ಉಳಿದಿದ್ದ 11 ಮಂದಿ ವಿದ್ಯಾರ್ಥಿನಿಯರು ಕೂಡ ತರಗತಿಗೆ ಹಾಜರಾಗಿದ್ದಾರೆ. ಇದರಿಂದಾಗಿ ಒಟ್ಟು 101 ಮುಸ್ಲಿಮ್‌ ವಿದ್ಯಾರ್ಥಿನಿಯರನ್ನು ಹೊಂದಿರುವ ಕಾಲೇಜಿನಲ್ಲಿ ಬುಧವಾರ 46 ಮಂದಿ ಸಮವಸ್ತ್ರ ನಿಯಮ ಪಾಲನೆಯೊಂದಿಗೆ ತರಗತಿ ಪ್ರವೇಶಿಸಿದ್ದಾರೆ. 

Go to Pakistan, Saudi: Muslim MLA supports Karnataka hijab ban

ಎರಡು ದಿನಗಳ ಹಿಂದೆ ಹಿಜಾಬ್ ಹೋರಾಟ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಶಾಸಕ ಯು.ಟಿ.ಖಾದರ್ ಮಾರ್ಮಿಕ ಮಾತುಗಳನ್ನು ಹೇಳಿದ್ದರು. ಇದರ ಕಾರಣವೋ ಏನೋ ದಿಢೀರ್ ಆಗಿ ಹಿಜಾಬ್ ಹೋರಾಟ ನಡೆಸುತ್ತಿರುವ ಮಂದಿ ಮನಸ್ಸು ಬದಲಾಯಿಸಿದ್ದಾರೆ. ಪ್ರತಿಭಟನೆಯ ಕಾರಣ ತರಗತಿಗೆ ಗೈರು ಹಾಜರಾಗಿದ್ದ ಉಳಿದ ವಿದ್ಯಾರ್ಥಿನಿಯರು ಕೂಡ ಕಾಲೇಜಿಗೆ ಆಗಮಿಸುವ ಭರವಸೆಯನ್ನು ಉಪನ್ಯಾಸಕರು ವ್ಯಕ್ತಪಡಿಸಿದ್ದಾರೆ.

ಉಪ್ಪಿನಂಗಡಿ ; ಹಿಜಾಬ್ ಪಟ್ಟುಹಿಡಿದ ಮತ್ತೆ 24 ವಿದ್ಯಾರ್ಥಿನಿಯರಿಗೆ ಒಂದು ವಾರ ಕಾಲೇಜಿಗೆ ನಿರ್ಬಂಧ

ಹಿಜಾಬ್ ಹೋರಾಟ ಮಾಡೋರು ಸೌದಿ, ಪಾಕಿಸ್ತಾನಕ್ಕೆ ಹೋಗಿ ಬರಬೇಕು, ಅಲ್ಲಿ ಹೇಗಿದೆ ಅಂತ ತಿಳ್ಕೊಂಡು ಬರಲಿ!  

Uppinangady Hijab row, Khaders statement goes viral, 46 students attend class without Hijab.