ಬ್ರೇಕಿಂಗ್ ನ್ಯೂಸ್
10-06-22 09:51 pm Mangalore Correspondent ಕರಾವಳಿ
ಮಂಗಳೂರು, ಜೂನ್ 10: ಕೇರಳದ ಮಲಪ್ಪುರಂ ಜಿಲ್ಲೆಯ ನಿವಾಸಿ ಶಿಹಾಬ್ ಚೊಟ್ಟೂರು ಎಂಬ ಯುವಕ ಕಾಲ್ನಡಿಗೆಯಲ್ಲೇ ಹಜ್ ಯಾತ್ರೆ ಕೈಗೊಂಡಿದ್ದಾರೆ. ಮಲ್ಲಪುರಂ ನಗರದಿಂದ ಕಾಲ್ನಡಿಗೆಯಲ್ಲೇ ಹೊರಟಿದ್ದು, ತಲಪಾಡಿ ಮೂಲಕ ಕೇರಳದ ಗಡಿಭಾಗ ದಾಟಿ ಮಂಗಳೂರಿಗೆ ಆಗಮಿಸಿದ್ದರು. ಕೇರಳ ಗಡಿಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ ಜನರು ಶಿಹಾಬ್ ಕಾಲ್ನಡಿಗೆ ಯಾತ್ರೆಗೆ ಶುಭ ಕೋರಿದ್ದಾರೆ.
ಶಿಹಾಬ್ 8640 ಕಿಮೀ ದೂರದ ಮೆಕ್ಕಾಕ್ಕೆ ಕಾಲ್ನಡಿಗೆಯಲ್ಲಿ ಹೊರಟಿದ್ದು, 9 ತಿಂಗಳ ಪರ್ಯಂತ ನಡೆದು ತಲುಪುವ ಗುರಿ ಇಟ್ಟುಕೊಂಡಿದ್ದಾರೆ. ತಲಪಾಡಿ ಗಡಿಭಾಗ ತಲುಪುವುದಕ್ಕೂ ಮೊದಲು ಹೊಸಂಗಡಿಯಲ್ಲಿ ಶಿಹಾಬ್ ಆರೋಗ್ಯ ತಪಾಸಣೆಯನ್ನೂ ನಡೆಸಲಾಗಿತ್ತು. ಹೊಸಂಗಡಿಯಿಂದ ತಲಪಾಡಿ ಗಡಿಯ ವರೆಗೆ ಅಭಿಮಾನಿಗಳು ನೆರೆದು ಜೊತೆಯಲ್ಲೇ ಕಾಲ್ನಡಿಗೆ ಬಂದಿದ್ದಾರೆ.




ತಲಪಾಡಿ ಬಳಿಕ ಕೋಟೆಕಾರಿನ ಮಸೀದಿಯಲ್ಲಿ ನಮಾಜ್ ಮಾಡಿ, ಅಲ್ಲಿಂದ ಸ್ಥಳೀಯರು ಬೀಳ್ಕೊಟ್ಟರು. ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟದ ಕೆ.ಅಶ್ರಫ್, ಅಬುಬಕ್ಕರ್ ಸಿದ್ದಿಕ್ ಮತ್ತಿತರರು ಸೇರಿ ತಲಪಾಡಿಯಲ್ಲಿ ಶಿಹಾಬ್ ಅವರನ್ನು ಸ್ವಾಗತಿಸಿದರು. ಸಾವಿರಾರು ಮಂದಿ ಕರ್ನಾಟಕದಿಂದ ಹಜ್ ಯಾತ್ರೆ ತೆರಳಲು ವಿಮಾನ ಟಿಕೆಟ್ ಇನ್ನಿತರ ವ್ಯವಸ್ಥೆ ಮಾಡುತ್ತಿರುವ ಸಂದರ್ಭದಲ್ಲೇ ಶಿಹಾಬ್ ಕಾಲ್ನಡಿಗೆಯಲ್ಲಿ ಹಜ್ ಯಾತ್ರೆ ಕೈಗೊಂಡಿದ್ದು ವಿಶೇಷ. ಕೇರಳ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ವರೆಗೂ ಕರಾವಳಿಯಲ್ಲೇ ಸಾಗಿ, ಆನಂತರ ಪಾಕಿಸ್ಥಾನ, ಅಫ್ಘಾನಿಸ್ತಾನ ಮೂಲಕ ಸೌದಿ ಅರೇಬಿಯಾದ ಮೆಕ್ಕಾ ತೆರಳುವ ಯೋಜನೆ ಇದೆ ಎನ್ನಲಾಗುತ್ತಿದೆ.
Shihab Chottur from Malapurum who has undertaken Haj pilgrimage by walk was welcomed by the people of the community in a grand manner at Talapady on Thursday June 9. Shihab had planned to travel 8,640 kilometres by foot, to reach Mecca in nine months. Several people who gathered in Talapady, welcomed him. On Thursday afternoon, Shihab had a health check-up in Hosangadi. He took rest and then continued his journey.
17-11-25 07:25 pm
Bangalore Correspondent
ಖರ್ಗೆ ಕೋಟೆಯಲ್ಲಿ ಆರೆಸ್ಸೆಸ್ ಸಂಚಲನ ; ಒಂದೂವರೆ ಕಿಮ...
16-11-25 09:15 pm
ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊ...
13-11-25 08:33 pm
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
17-11-25 10:58 pm
HK News Desk
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
ಉಮ್ರಾ ಯಾತ್ರೆ ತೆರಳಿದ್ದ ಹೈದ್ರಾಬಾದ್ ಮೂಲದ 45 ಯಾತ್...
17-11-25 06:13 pm
ರಾಜ್ಯದಲ್ಲಿ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ; ಸಿ...
15-11-25 11:12 pm
ದೆಹಲಿ ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮ...
15-11-25 07:09 pm
18-11-25 10:18 pm
Mangaluru Staff
UT Khader, Ullal, Mangalore Dc, Ashwini: ತನ್ನ...
18-11-25 07:03 pm
Mangalore case, Police, Inspector Balakrishna...
18-11-25 11:27 am
ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ...
17-11-25 06:16 pm
ದೇರಳಕಟ್ಟೆ ಕಾಲೇಜಿನ ಕೇರಳ ವಿದ್ಯಾರ್ಥಿ ನಾಪತ್ತೆ ; ಗ...
16-11-25 10:48 pm
18-11-25 09:09 pm
Mangaluru Staff
ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ; ಸ...
18-11-25 11:18 am
ದುಬಾರಿ ಪಾರ್ಸೆಲ್ ಇದೆ, ಕಸ್ಟಮ್ಸ್ ಸುಂಕ ಕಟ್ಟಲು ಹೇಳ...
17-11-25 12:54 pm
ಬೆಳಗಾವಿಯಲ್ಲಿ ಕುಳಿತು ಅಮೆರಿಕನ್ನರಿಗೆ ಗಾಳ ; ಆನ್ಲೈ...
14-11-25 05:32 pm
Ullal News, Animal Attack, Crime, Kumpala: ಕಣ...
14-11-25 11:16 am