ಬ್ರೇಕಿಂಗ್ ನ್ಯೂಸ್
11-06-22 10:18 pm Mangalore Correspondent ಕರಾವಳಿ
ಮಂಗಳೂರು, ಜೂನ್ 11 : ನಮ್ಮ ಸಂಘರ್ಷ ಇರುವುದು, ಭಾರತೀಕರಣ ಮತ್ತು ತುಕ್ಡೇ ತುಕ್ಡೇ ಗ್ಯಾಂಗ್ ನಡುವೆ. ಇವರು ಭಾರತೀಯತೆ, ರಾಷ್ಟ್ರೀಯತೆ ಹೇಳಿಕೊಡುವುದಕ್ಕೆ ವಿರೋಧ ಮಾಡುತ್ತಿದ್ದಾರೆ. ಇವರಿಗೆ ಕುವೆಂಪು, ಅಂಬೇಡ್ಕರ್, ಬಸವಣ್ಣರ ಬಗ್ಗೆ ಅಭಿಮಾನ ಇಲ್ಲ. ನಾವು ರಾಷ್ಟ್ರೀಯತೆ ಶಿಕ್ಷಣ ಹೇಳಿಕೊಟ್ಟರೆ ಭಾರತ ಎದ್ದು ನಿಲ್ಲುತ್ತದೆ ಎನ್ನುವ ಭಯ ಇವರಲ್ಲಿದೆ. ಇದರ ಹಿಂದೆ ಅಂತಾರಾಷ್ಟ್ರೀಯ ಸಂಚು ಅಡಗಿದೆ ಎಂದು ಕಾಂಗ್ರೆಸ್ ನಾಯಕರ ಹೆಸರೆತ್ತದೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಟಾಂಗ್ ಇಟ್ಟಿದ್ದಾರೆ.
ಮಂಗಳೂರಿನ ಸಂಘನಿಕೇತನದಲ್ಲಿ ಸಿಟಿಜನ್ ಕೌನ್ಸಿಲ್ ಏರ್ಪಡಿಸಿದ ಪಠ್ಯ ರಾಜಕಾರಣ- ಸತ್ಯ -ಮಿಥ್ಯ ಎನ್ನುವ ಸಂವಾದ ಕಾರ್ಯಕ್ರಮದಲ್ಲಿ ಸಿಟಿ ರವಿ ಮಾತನಾಡಿದರು. ಯಾವ ದೇಶದಲ್ಲಿ ತನ್ನ ಪರಂಪರೆಯನ್ನು ಹೇಳಿಕೊಡುವುದಿಲ್ಲವೋ ಆ ದೇಶ ಬಹಳ ಕಾಲ ಉಳಿಯಲ್ಲ. ಜಪಾನ್ ದ್ವಿತೀಯ ಯುದ್ಧದಲ್ಲಿ ಸಂಪೂರ್ಣ ನಾಶ ಆಗಿತ್ತು. ಆದರೆ ಎರಡೇ ದಶಕದಲ್ಲಿ ತಲೆಯೆತ್ತಿ ನಿಂತಿತ್ತು. ದೇಶವನ್ನು ಮತ್ತೆ ಕಟ್ಟಲು ಅಲ್ಲಿನ ಪ್ರಮುಖರು ಸೇರಿದ್ದರು. ಹಲವು ಚರ್ಚೆಗಳಲ್ಲಿ ನಾನಾ ರೀತಿಯ ಸಲಹೆಗಳು ಬಂದಿದ್ದವು. ರಾಷ್ಟ್ರ ನಾಯಕ ಬೇಕು, ಕಂಪನಿಗಳಿಂದ ಹೂಡಿಕೆ ಮಾಡಿಸಬೇಕು, ಹೆಚ್ಚು ದುಡಿಯಬೇಕು ಇತ್ಯಾದಿ. ಆದರೆ, ಕೊನೆಗೆ ಅಲ್ಲಿ ತೆಗೆದುಕೊಂಡಿದ್ದು ದೇಶ ಕಟ್ಟಲು ಶಿಕ್ಷಣ ಮುಖ್ಯ ಅನ್ನುವುದು, ರಾಷ್ಟ್ರೀಯತೆ ಆಧರಿಸಿದ ಶಿಕ್ಷಣ ಅಳವಡಿಸಿದರು.

ನಮ್ಮ ದೇಶದ ನೈಜತೆ ಅರಿಯಲು, ಶಿಕ್ಷಣದ ಬಗ್ಗೆ ಅರಿಯಲು ಧರ್ಮಪಾಲ್ ಅವರ ಬ್ಯೂಟಿಫುಲ್ ಟ್ರೀ ಪುಸ್ತಕ ಓದಬೇಕು. ಕಾಂಗ್ರೆಸ್ ಕಾರಣದಿಂದ ನಾವು ಈ ದೇಶದ ನೈಜ ಇತಿಹಾಸ ಓದಲಿಲ್ಲ. ನಾವು ಸಣ್ಣವರಿದ್ದಾಗ ಅಲೆಗ್ಸಾಂಡರ್ ಡ್ಯಾಶ್ ಅನ್ನುವ ಪ್ರಶ್ನೆಗೆ ಗ್ರೇಟ್ ಎಂದು ಉತ್ತರಿಸುತ್ತಿದ್ದೆವು. ಯಾವುದೇ ದೇಶ ತನ್ನ ಮೇಲಿನ ದಾಳಿಕೋರನನ್ನು ಗ್ರೇಟ್ ಅಂತ ಹೇಳಿಕೊಡುವುದಿಲ್ಲ. ನಮ್ಮ ಮಕ್ಕಳಿಗೆ ಅದನ್ನೇ ಹೇಳಿಕೊಟ್ಟರೆ, ಅವನೇ ಗ್ರೇಟ್ ಎಂಬ ಭಾವನೆ ಬರುತ್ತದೆ. ಯಾಕೆ, ಪೃಥ್ವಿರಾಜ್, ಶಿವಾಜಿ ಬಗ್ಗೆ, ರಾಮಾಯಣದ ಬಗ್ಗೆ ಹೇಳಿಕೊಡಲ್ಲ. ಇದನ್ನು ಕಲಿಸುತ್ತಿದ್ದರೆ ಈ ದೇಶದಲ್ಲಿ ಭಯೋತ್ಪಾದಕರು ಹುಟ್ಟುತ್ತಿರಲಿಲ್ಲ.

ದೇಶಕ್ಕಾಗಿ ಶಿಕ್ಷೆ ಅನುಭವಿಸಿದ ವೀರ ಸಾವರ್ಕರನ್ನು ಹೇಡಿ ಎಂದು ಚಿತ್ರಿಸುತ್ತಾರೆ. ಶಿವಾಜಿಯನ್ನು ಪುಕ್ಕಲ ಎಂದು ಹೇಳುತ್ತಾರೆ. ನಮ್ಮಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಪಂಚಾಂಗ, ಖಗೋಳ ವಿಜ್ಞಾನ, ಗಣಿತ, ಶರೀರ ಶಾಸ್ತ್ರ, ಶಿಲ್ಪಶಾಸ್ತ್ರಗಳ ಜ್ಞಾನ ಇತ್ತು. ಅದರ ಬಗ್ಗೆ ನಾವು ಶಿಕ್ಷಣದಲ್ಲಿ ಯಾಕೆ ಹೇಳಬಾರದು. ಇದಕ್ಕಾಗಿಯೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದ್ದು, ಅದರ ಒಂದಂಶವನ್ನು ನಾವು ಜಾರಿಗೆ ತಂದಿದ್ದೇವೆ. ಈಗಲೇ ಇವರು ಒದ್ದಾಟ ಶುರು ಮಾಡಿದ್ದಾರೆ.

ಇಸ್ಲಾಮ್ ಇರುವಲ್ಲಿ ಮಾತ್ರ ಭಯೋತ್ಪಾದನೆ
ಇಸ್ಲಾಮ್ ಕಾಲಿಟ್ಟ ಜಾಗದಲ್ಲಿ ಅಲ್ಲಿನ ಮೂಲ ಸಂಸ್ಕೃತಿ ನಾಶವಾಗಿದೆ. ಇಸ್ಲಾಂ ಇರುವಲ್ಲಿ ಮಾತ್ರ ಭಯೋತ್ಪಾದನೆ ತಾಂಡವ ಆಡುತ್ತಿದೆ ಯಾಕೆ ಎಂದು ಪ್ರಶ್ನಿಸಿದ ಸಿಟಿ ರವಿ, ಎಲ್ಲದನ್ನೂ ಜಾತಿಯ ದೃಷ್ಟಿಯಿಂದ ನೋಡುವುದಾದರೆ, ವ್ಯಾಸ ಮಹರ್ಷಿಯೆಂದು ಪೂಜಿಸಲ್ಪಟ್ಟ ವ್ಯಕ್ತಿ ಬೇಡನಾಗಿದ್ದ. ಕೃಷ್ಣನೂ ಬೇಡ ಜನಾಂಗದ ಕಪ್ಪು ವರ್ಣೀಯನಾಗಿದ್ದ. ಆದರೆ ತನ್ನ ಜೀವನದಿಂದ ದೇವನಾದ. ಅವರ ಬಗ್ಗೆ ಹೇಳಿದರೆ ಕೇಸರೀಕರಣ ಆಗುವುದೇ ಎಂದು ಕೇಳಿದರು.

ಈ ದೇಶಕ್ಕೆ ಸೆಕ್ಯುಲರಿಸಂ ಅನ್ನು ಅಂಬೇಡ್ಕರ್ ಕೊಟ್ಟಿದ್ದಲ್ಲ. ಅಂಬೇಡ್ಕರ್ ಸಂವಿಧಾನದ ಮೊದಲ ಪುಟದಲ್ಲಿ ರಾಮ, ಕೃಷ್ಣನ ಉಲ್ಲೇಖ ಮಾಡಿದ್ದಾರೆ. ಸಂಶಯ ಇದ್ದವರು ಅದರ ಮೂಲಪ್ರತಿಯನ್ನು ತೆಗೆದು ನೋಡಬಹುದು. ಆದರೆ, ಕಾಂಗ್ರೆಸ್ ಸೆಕ್ಯುಲರಿಸಂ ಪದವನ್ನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂವಿಧಾನಕ್ಕೆ ತುರುಕಿತ್ತು. ಸಂಸತ್ತಿನಲ್ಲಿ ಯಾವುದೇ ಚರ್ಚೆ ಇಲ್ಲದೆ, ಎಲ್ಲರೂ ಜೈಲಿನಲ್ಲಿದ್ದಾಗ ದೇಶಕ್ಕೆ ಸೆಕ್ಯುಲರಿಸಂ ಹೇರಿದ್ದರು.
ಪಠ್ಯದ ಬಗ್ಗೆ ಮೊದಲ ವಿರೋಧ ಬಂದಿದ್ದು ಕರಾವಳಿಯಲ್ಲಿ. ಮೊದಲಿಗೆ ನಾರಾಯಣ ಗುರುಗಳ ಪಠ್ಯ ತೆಗೆದಿದ್ದಾಗಿ ಆಕ್ಷೇಪ ಎತ್ತಿದರು. ಆನಂತರ ಕುವೆಂಪು ಬಗ್ಗೆ ಪ್ರಶ್ನಿಸಿದರು. ನಾವು ಕುವೆಂಪು ಬಗ್ಗೆ ಹತ್ತು ಪಾಠಕ್ಕೆ ಹೆಚ್ಚಿಸಿದ್ದೇವೆ ಎಂದಾಗ ಅದನ್ನು ಬಿಟ್ಟುಬಿಟ್ಟರು. ಬಸವಣ್ಣರ ಬಗ್ಗೆ ಆಕ್ಷೇಪ ಎತ್ತಿದರು. ನಾವು ಬಸವಣ್ಣರ ಅನುಭವ ಮಂಟಪವನ್ನೇ ಕಟ್ಟಲು ಹೊರಟವರು. ಆದರೆ, ಇವರು ಬಸವಣ್ಣ ಕಟ್ಟಿದ ಅನುಭವ ಮಂಟಪವನ್ನು ಕಿತ್ತುಕೊಂಡು ಪೀರ್ ಷಾ ಮಸೀದಿ ಮಾಡಿದವರ ಬಗ್ಗೆ ಒಂದು ಮಾತೂ ಆಡಲ್ಲ ಎಂದು ಕುಟುಕಿದರು, ಕಾಂಗ್ರೆಸ್, ಕಮ್ಯುನಿಸ್ಟ್ ಸೇರಿ ಮೂರು ಸಿ ಕ್ಯೂಬ್ ಗಳು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲ ಮಾಡಿವೆ. ಆದರೆ ಶಿಕ್ಷಣ ಬಲ ಪಡಿಸುವುದು ನಮ್ಮ ಗುರಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕುಲಸಚಿವ ಪ್ರೊ.ಪಿ.ಎಲ್.ಧರ್ಮ, ಪಠ್ಯ ರಚನೆ ಎಂಬುದನ್ನು ನಾವು ವಿಶಾಲ ದೃಷ್ಟಿಯಿಂದ ನೋಡಬೇಕಿದೆ. ಭಾರತೀಯ, ರಾಷ್ಟ್ರೀಯತೆ ನೆಲೆಯ ತಳಪಾಯ ಈಗಿನ ಅಗತ್ಯ. ಪಠ್ಯದ ನಡುವಿನ ವಾಸ್ತವಗಳು ಕೆಲವೊಮ್ಮೆ ಕಹಿಯಾಗುತ್ತವೆ. ಎಡಪಂಥೀಯ ವಾದದಲ್ಲಿ ವಾಸ್ತವ ಯಾಕಿಲ್ಲ ಎಂಬುದನ್ನು ಚಿಂತಿಸಬೇಕಾಗುತ್ತದೆ. ದೇಶ ಕಟ್ಟುವಾಗ ಅಸ್ಮಿತೆಗಳು, ಬಹುತ್ವ ಬೇಕಾಗುತ್ತದೆ. ಇದರ ಬಗ್ಗೆ ಚರ್ಚೆ ಆಗಬೇಕಾಗಿದೆ ಎಂದರು. ಸೊರಬ ಶಾಸಕ ಕುಮಾರ್ ಬಂಗಾರಪ್ಪ, ಸಿಟಿಜನ್ ಕೌನ್ಸಿಲಿನ ಚಿದಾನಂದ ಕೆದಿಲಾಯ ಉಪಸ್ಥಿತರಿದ್ದರು.
We are prepared to bring Uttar Pradesh chief minister Yogi Adityanath’s bulldozer model against those who spoil communal harmony in Karnataka,” said BJP national chief secretary C T Ravi. He was speaking after participating in ‘Nari Sammana Deshada Abhimana’ conference held by the BJP Mahila Morcha at Sparsha Mandira, B C Road on Saturday. He said, “Some political parties which have lost elections are trying to create unrest in the country by means of propaganda. The Modi government at the Centre is capable of stopping it.
28-10-25 10:03 pm
Bangalore Correspondent
ಶಾಸಕಾಂಗ ನಾಯಕರ ಆಯ್ಕೆ ವೇಳೆ 2.5 ವರ್ಷ ಎಂದು ತಿಳಿಸಿ...
28-10-25 07:18 pm
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
28-10-25 10:23 pm
HK News Desk
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
28-10-25 08:36 pm
Mangalore Correspondent
ಸ್ಪೀಕರ್ ಕೊಠಡಿ- ಶಾಸಕರ ಭವನ ನವೀಕರಣ ನೆಪದಲ್ಲಿ ಭಾರೀ...
28-10-25 03:36 pm
ಲಾರಿ ಧಾವಂತಕ್ಕೆ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಬ...
27-10-25 11:01 pm
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
28-10-25 10:48 pm
Mangalore Correspondent
ಕೋಟಿ ರೂ. ಚೀಟಿ ವ್ಯವಹಾರ ಇದೆ, ಹಣ ಸಾಲ ಕೊಟ್ಟರೆ ದುಪ...
27-10-25 05:29 pm
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm