ಬ್ರೇಕಿಂಗ್ ನ್ಯೂಸ್
15-06-22 06:50 pm Mangalore Correspondent ಕರಾವಳಿ
ಮಂಗಳೂರು, ಜೂನ್ 15: ರಾಹುಲ್ ಗಾಂಧಿ ಒಬ್ಬ ವ್ಯಕ್ತಿಯಲ್ಲ, ಶಕ್ತಿ ಅನ್ನುವುದನ್ನು ಬಿಜೆಪಿ ಸರಕಾರ ಸಾಬೀತು ಮಾಡಿದೆ. ಬಿಜೆಪಿ ಸರಕಾರಕ್ಕೆ ರಾಹುಲ್ ಗಾಂಧಿ ಬಗ್ಗೆ ಭಯವಿದ್ದು ಮುಂದಿನ ಬಾರಿ ದೇಶದ ಜನರು ಅವರ ನಾಯಕತ್ವವನ್ನು ಒಪ್ಪಿ ಮತ ನೀಡುತ್ತಾರೆಂಬ ಭಯದಲ್ಲಿ ವ್ಯಕ್ತಿತ್ವಕ್ಕೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ಸುಳ್ಳು ಆರೋಪಗಳನ್ನು ಹೊರಿಸಿ ಚುನಾವಣೆ ಕಾಲದಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ವಿಪಕ್ಷ ನಾಯಕ, ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಯುಟಿ ಖಾದರ್, ಹಿಂದೆ ಮಾಜಿ ಪ್ರಧಾನಿ ರಾಜೀವ ಗಾಂಧಿ ಬಗ್ಗೆಯೂ ಇದೇ ರೀತಿ ಬೋಫೋರ್ಸ್ ಪ್ರಕರಣದ ನೆಪದಲ್ಲಿ ತನಿಖೆ ನಡೆಸಿ ಕಿರುಕುಳ ನೀಡಲಾಗಿತ್ತು. ತನಿಖೆಯ ಬಳಿಕ ರಾಜೀವ ಗಾಂಧಿ ಆರೋಪ ಮುಕ್ತರಾಗಿ ಬಂದಿದ್ದರು. ಅವರು ಇರುತ್ತಿದ್ದರೆ, ದೇಶದ ದಿಕ್ಕೇ ಬದಲಾಗುತ್ತಿತ್ತು. ರಾಜೀವ್ ಕಾಲದಲ್ಲಿ ಖರೀದಿಸಿದ್ದ ಬೋಫೋರ್ಸ್ ಯುದ್ಧೋಪಕರಣಗಳಿಂದಾಗಿ ಕಾರ್ಗಿಲ್ ನಲ್ಲಿ ನಡೆದ ಯುದ್ಧದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆಲ್ಲುವಂತಾಗಿತ್ತು ಎಂದು ಹೇಳಿದರು.
ಇಂದು ಪಾಕಿಸ್ತಾನ, ಚೀನಾ ಅತಿಕ್ರಮಣದಲ್ಲಿ ತೊಡಗಿದೆ. ಹಿಂದೆ ಮೋದಿಯವರು ಪಾಕಿಸ್ಥಾನ, ಚೀನಾದ ವಿರುದ್ಧ ಯುದ್ಧ ಮಾಡುವ ಮಾತನಾಡುತ್ತಿದ್ದರು. ಈಗ ಪಾಕ್ ಗಡಿಯ ಒಳಕ್ಕೆ ಬಂದು 250 ಕಿಲೋ ಆರ್ ಡಿಎಕ್ಸ್ ತಂದಿಟ್ಟರೂ ಇವರಿಗೆ ತಿಳಿಯೋದಿಲ್ಲ. ಇವತ್ತು ಚುನಾವಣೆ ಕಾಲದಲ್ಲಿ ನಾಯಕರನ್ನು ಗುರಿಯಾಗಿಸಿ ಟಾರ್ಗೆಟ್ ಪಾಲಿಟಿಕ್ಸ್ ಮಾಡಲಾಗುತ್ತಿದೆ. ರಾಹುಲ್ ಗಾಂಧಿ ವಿರುದ್ಧ ಯಾವುದೇ ಎಫ್ಐಆರ್ ಇಲ್ಲದಿದ್ದರೂ, ಚುನಾವಣೆ ಕಾಲದಲ್ಲಿ ವ್ಯಕ್ತಿತ್ವಕ್ಕೆ ಧಕ್ಕೆ ಬರುವ ರೀತಿ ಇಡಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಬಿಜೆಪಿ ಸರಕಾರದ ಈ ರೀತಿ ನಡೆ ಅಕ್ಷಮ್ಯ ಎಂದು ಹೇಳಿದರು.
ನಿಮ್ಮ ಪಠ್ಯವನ್ನು ನಮ್ಮ ಮಕ್ಕಳು ಕಲಿಯಬೇಕೇ ?
ಶಾಲಾ ಪಠ್ಯ ಪುಸ್ತಕದಲ್ಲಿ ಬಸವಣ್ಣ, ನಾರಾಯಣ ಗುರು, ಅಂಬೇಡ್ಕರ್ ಅವರಂತಹ ಮಹನೀಯರ ಸಂದೇಶಗಳನ್ನು ತೆಗೆದು ಅವಮಾನ ಮಾಡಿದ್ದಾರೆ. ಸಂವಿಧಾನಕ್ಕೆ ಗೌರವ ನೀಡದ ಪಠ್ಯಪುಸ್ತಕವನ್ನು ನಮ್ಮ ಮಕ್ಕಳು ಕಲಿಯುವ ಅಗತ್ಯ ಇದೆಯೇ ? ಸಾಹಿತಿಗಳು, ವಿರೋಧ ಪಕ್ಷಗಳ ಆಕ್ಷೇಪಕ್ಕೂ ಸರಕಾರ ಬೆಲೆ ಕೊಡದಿರುವುದು ಸರಿಯೇ ? ಇಂಥ ಪಠ್ಯವನ್ನು ಮಕ್ಕಳ ಮೇಲೆ ಹೇರುತ್ತಿರುವ ನಿಮ್ಮ ಉದ್ದೇಶವಾದರೂ ಏನು? ಭವಿಷ್ಯದ ಮಕ್ಕಳಲ್ಲಿ ಸಂಶಯ ಹುಟ್ಟಿಸುವುದೇ? ಇತಿಹಾಸದ ಬಗ್ಗೆ ಅಪಕ್ವ ಮಾಹಿತಿಗಳನ್ನು ಕೊಡುವ ಹುನ್ನಾರವೇ ಎಂದು ಖಾದರ್ ಪ್ರಶ್ನೆ ಮಾಡಿದರು.
ತಕ್ಷಣ ಬಂಧಿಸುತ್ತಿದ್ದರೆ ಗಲಾಟೆ ಆಗುತ್ತಿತ್ತಾ ?
ಧರ್ಮ ನಿಂದನೆ, ದ್ವೇಷದ ಮಾತಿನ ಕಾರಣಕ್ಕೆ ಭಾರತ ದೇಶ ಜಾಗತಿಕ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ. ಒಬ್ಬರ ಹೇಳಿಕೆಯ ಕಾರಣಕ್ಕೆ ಭಾರತ ದೇಶ ಯಾಕೆ ವಿದೇಶಗಳ ಮುಂದೆ ಕ್ಷಮೆ ಕೇಳಬೇಕು ? ಸಾಮರಸ್ಯ ಕದಡುವ ರೀತಿ ಹೇಳಿಕೆ ನೀಡಿದವರನ್ನು ತಕ್ಷಣ ಬಂಧಿಸುತ್ತಿದ್ದರೆ ಪ್ರತಿಭಟನೆ, ಗಲಾಟೆ ಆಗುತ್ತಿತ್ತಾ ಎಂದು ಪ್ರಶ್ನೆಯೊಂದಕ್ಕೆ ಮಾಜಿ ಸಚಿವ ಯು.ಟಿ.ಖಾದರ್ ಉತ್ತರ ನೀಡಿದ್ದಾರೆ.
ದೇಶದಲ್ಲಿ ಶಾತಿ, ಸಾಮರಸ್ಯ ಕದಡುವ ರೀತಿ ಹೇಳಿಕೆ ಕೊಟ್ಟರೂ, ತಕ್ಷಣ ಕ್ರಮ ಕೈಗೊಳ್ಳುವುದಕ್ಕೆ ಮುಂದಾಗುವುದಿಲ್ಲ. ಇಂತಹ ನಿರ್ಲಕ್ಷ್ಯ ನಡೆಯಿಂದಾಗಿ ಕೆಲವು ಸಂಘಟನೆಗಳವರು ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದಾರೆ. ಪ್ರವಾದಿಯ ನಿಂದನೆಯ ಕಾರಣಕ್ಕೆ ಪ್ರತಿಭಟನೆ ನಡೆಸುವುದಿದ್ದರೆ, ಸಂವಿಧಾನದಡಿ ಅವಕಾಶ ಇದೆ. ಹಾಗೆಂದು ಯಾರು ಕೂಡ ಕಾನೂನು ಕೈಗೆತ್ತಿಕೊಂಡು ಹಿಂಸಾಚಾರ ನಡೆಸುವುದು ಸರಿಯಲ್ಲ ಎಂದು ಹೇಳಿದರು. ಮಂಗಳೂರಿನಲ್ಲಿ ಪ್ರತಿಭಟನೆ ನಡೆಸುವ ವಿಚಾರ ನನಗೆ ಗೊತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆಗೆ ಯಾರು ಪ್ರಚೋದನೆ ನೀಡುತ್ತಿದ್ದಾರೋ ಅಂಥವರನ್ನು ಪೊಲೀಸರು, ಗುಪ್ತಚರ ಪಡೆಗಳು ಪತ್ತೆಹಚ್ಚಿ ಬಂಧಿಸಬೇಕು ಎಂದು ಹೇಳಿದರು.
MLA U T Khader expressed concern over the prevailing conditions in the country, predominantly focussing on the action taken against Congress leader Rahul Gandhi by the Enforcement Directorate (ED) and other pressing issues.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
10-09-25 10:50 pm
Mangalore Correspondent
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
ಕೊಲ್ಲೂರು ಮೂಕಾಂಬಿಕೆಗೆ ನಾಲ್ಕು ಕೋಟಿ ಮೌಲ್ಯದ ವಜ್ರ...
10-09-25 08:14 pm
Mangalore, Baikampady Fire, Aromazen: ಬೈಕಂಪಾಡ...
10-09-25 02:10 pm
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm