ಬ್ರೇಕಿಂಗ್ ನ್ಯೂಸ್
15-06-22 09:56 pm Mangalore Correspondent ಕರಾವಳಿ
ಮಂಗಳೂರು, ಜೂ.15 : ಅಮೆರಿಕಾದಲ್ಲಿ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಕೆಲಸಕ್ಕಿದ್ದು ಲಕ್ಷಾಂತರ ವೇತನ ಪಡೆಯುತ್ತಿದ್ದ ಯುವಕನೊಬ್ಬ ಅವೆಲ್ಲವನ್ನೂ ತ್ಯಜಿಸಿ ಊರಿಗೆ ಬಂದು ಭಾರತೀಯ ಸೇನೆಯಲ್ಲಿ ಉದ್ಯೋಗಕ್ಕೆ ಸೇರಿದ ವಿಲಕ್ಷಣ ಪ್ರಸಂಗ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸಾತ್ವಿಕ್ ಕುಳಮರ್ವ ಎಂಬ ಯುವಕನ ದಿಟ್ಟ ನಡೆ ಬೆರಗು ಮೂಡಿಸುವಂಥದ್ದು. ಎಲೆಕ್ಟ್ರಿಕ್ ಎಂಜಿನಿಯರಿಂಗ್ ನಲ್ಲಿ ಎಂಎಸ್ ಪದವಿ ಪಡೆದು, ಅಮೆರಿಕದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರೂ, ತಾನು ಶಿಕ್ಷಣಕ್ಕಾಗಿ ಮಾಡಿದ ಬ್ಯಾಂಕ್ ಸಾಲ ತೀರುತ್ತಲೇ ಹಿಂತಿರುಗಿ ಬಂದಿದ್ದಾರೆ.

ಅಮೆರಿಕದ ಉದ್ಯೋಗ ಬಿಟ್ಟು ಬಂದ ಸಾತ್ವಿಕ್, ಭಾರತೀಯ ಸೇನಾಪಡೆಗೆ ಅರ್ಜಿ ಸಲ್ಲಿಸಿದ್ದರು. ಆನಂತರ ತರಬೇತಿ ಪಡೆದು ಟೆಲಿಕಮ್ಯುನಿಕೇಶನ್ ವಿಭಾಗದಲ್ಲಿ ಲೆಪ್ಟಿನೆಂಟ್ ಆಗಿ ಆಯ್ಕೆ ಆಗಿದ್ದಾರೆ. ನಿವೃತ್ತ ಪ್ರಾಂಶುಪಾಲ ಪ್ರೊ.ಗಣಪತಿ ಭಟ್ ಕುಳಮರ್ವ ಮತ್ತು ಪಿಯು ಕಾಲೇಜು ಉಪನ್ಯಾಸಕಿ ಪಿ.ವಸಂತಿ ದಂಪತಿ ಪುತ್ರ ಸಾತ್ವಿಕ್, ಜಮ್ಮುವಿನ ಸಾತ್ವಾರಿಯಲ್ಲಿ 26 ಐಡಿಎಸ್ಆರ್ (ಇನ್‌ಫೆಂಟ್ರಿ ಡಿವಿಶನ್ ಸಿಗ್ನಲ್ಸ್ ರೆಜಿಮೆಂಟ್) ನಲ್ಲಿ ಲೆಫ್ಟಿನೆಂಟ್ ಹುದ್ದೆಗೆ ನಿಯೋಜನೆಗೊಂಡಿದ್ದಾರೆ.
ಜೂನ್ 10 ರಂದು ಡೆಹ್ರಾಡೂನ್‌ನಲ್ಲಿ ನಡೆದ ಇಂಡಿಯನ್ ಮಿಲಿಟರಿ ಅಕಾಡೆಮಿಯ ಪಾಸಿಂಗ್ ಔಟ್ ಡೇ ಪರೇಡ್ ನಲ್ಲಿ ಪಾಲ್ಗೊಂಡ 288 ಮಂದಿ ಯುವಕರಲ್ಲಿ ಸಾತ್ವಿಕ್ ಒಬ್ಬರು. ಬೆಳ್ತಂಗಡಿಯ ಸಂತ ತೆರೆಸಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಪಿಯುಸಿ, ಆನಂತರ ಬೆಂಗಳೂರಿನಲ್ಲಿ ಟೆಲಿಕಮ್ಯುನಿಕೇಶನ್ ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಎಂಎಸ್ ಪದವಿಯನ್ನು ಅಮೆರಿಕದ ಅರಿಝೋನಾ ಸ್ಟೇಟ್ ಯುನಿವರ್ಸಿಟಿಯಲ್ಲಿ ಮುಗಿಸಿ, ಅಲ್ಲಿಯೇ ಉದ್ಯೋಗದಲ್ಲಿದ್ದರು.
Twenty Six year old Sathwik from Belthangady, is one among the 288 gentleman cadets ready to defend the country, after rigorous military training at the Indian Military Academy, Dehradun. As he completed his training, a passing out parade was held on June 11 at Dehradun. After completing two weeks of orientation training at Jabalpur, he will join the telecommunication wing of a regiment in Jammu, as a lieutenant.A family member said that all cadets have been given a break of three weeks, before reporting for their new postings.
13-02-26 10:41 am
HK News Desk
ಖರೀದಿಸಿದ ಕೆಲವೇ ದಿನಗಳಲ್ಲಿ ಕೈಕೊಟ್ಟ ₹52 ಲಕ್ಷದ ಹಿ...
11-02-26 11:02 pm
Breast Cancer Awareness Drive Goes Nationwide...
11-02-26 01:34 pm
ಸ್ತನ ಕ್ಯಾನ್ಸರ್ ಬಗ್ಗೆ ದೇಶವ್ಯಾಪಿ ಜಾಗೃತಿ ; ಕಲಬರಗ...
11-02-26 01:09 pm
ಛೆ… ಇವಳೆಂಥ ಮಗಳು! ಅಮ್ಮನ ಖಾಸಗಿ ಅಂಗ, ದೊಡ್ಡಮ್ಮನ ಬ...
09-02-26 07:20 pm
12-02-26 10:51 pm
HK News Desk
ನಕಲಿ ಷೇರು ಹೂಡಿಕೆ ಆ್ಯಪ್ ಹೆಸರಲ್ಲಿ ದುಪ್ಪಟ್ಟು ಲಾಭ...
12-02-26 09:31 pm
ಅಮೆರಿಕದಲ್ಲಿ ಪೊಲೀಸ್ ಅಧಿಕಾರಿ ಕಾರು ಗುದ್ದಿ ಭಾರತೀಯ...
12-02-26 09:19 pm
260 ಜನರನ್ನು ಬಲಿ ಪಡೆದ ಅಹಮದಾಬಾದ್ ವಿಮಾನ ಪತನ ; ಇಂ...
12-02-26 01:40 pm
ಡಿಕೆ - ಸಿದ್ದು ಪವರ್ ಫೈಟ್ ; ‘ರಾಜಕಾರಣ ಮಾಡೋಕೆ ಬಂದ...
12-02-26 01:09 pm
13-02-26 01:28 pm
Mangalore Correspondent
ಶಾಲಾ ಮಕ್ಕಳನ್ನು ಟಿಪ್ಪರ್ ನಲ್ಲಿ ತುಂಬಿಸಿ ಅಧ್ಯಯನ ಪ...
13-02-26 01:06 am
ಮೋದಿ ಹೆಸರಲ್ಲಿ ಹತ್ತು ನಮೋ ಕುಟೀರ ನಿರ್ಮಾಣ ಯೋಜನೆ ;...
12-02-26 10:36 pm
ಲವ್ ಜಿಹಾದ್ ಆರೋಪ ; ಸುರತ್ಕಲ್ ಲೇಡಿಸ್ ಪಿಜಿಯಲ್ಲಿ ಹ...
12-02-26 05:55 pm
ಕೈಗಾರಿಕೆಗಳ ಮಾಲಿನ್ಯ ತಡೆಯಲು ಅಧಿಕಾರಿಗಳು ವಿಫಲ ; ವ...
12-02-26 04:05 pm
13-02-26 11:52 am
HK News Desk
ರೌಡಿ ಶೀಟರ್ ಬಿಕ್ಲು ಶಿವ ಕೊಲೆ ; ಕೊನೆಗೂ ಭೈರತಿ ಬ...
13-02-26 12:54 am
ವಿಷದ ಲಡ್ಡು ತಿನ್ನಿಸಿ 6 ಜನರ ಹತ್ಯೆ ; ದೆಹಲಿಯಲ್ಲಿ...
12-02-26 02:34 pm
ಫ್ಲ್ಯಾಟ್, ಚಿನ್ನದ ನೆಪದಲ್ಲಿ ಮುಂಬೈನ ಮಹಿಳಾ ಉದ್ಯಮಿ...
11-02-26 10:54 pm
ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ಬೆಲೆಯ ಜಮೀನು ಗುಳು...
11-02-26 09:10 pm