ಬ್ರೇಕಿಂಗ್ ನ್ಯೂಸ್
18-06-22 09:13 pm Mangalore Correspondent ಕರಾವಳಿ
ಪುತ್ತೂರು, ಜೂನ್ 18 : ಕ್ಲಬ್ ಹೌಸ್ ಚರ್ಚೆಯಲ್ಲಿ ಹಿಂದು ದೇವರನ್ನು ಅವಹೇಳನ ಮಾಡಿದ ಆರೋಪಕ್ಕೀಡಾಗಿರುವ ಕಾಂಗ್ರೆಸ್ ನಾಯಕಿ ಶೈಲಜಾ ಅಮರನಾಥ್ ಅವರ ಪುತ್ತೂರಿನ ಮನೆಗೆ ಕಿಡಿಗೇಡಿಗಳು ದಾಳಿ ಮಾಡಿದ್ದಾರೆ.
ಶೈಲಜಾ, ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದು ಪುತ್ತೂರಿನ ಬಪ್ಪಳಿಗೆಯಲ್ಲಿರುವ ಮನೆಗೆ ಕಿಡಿಗೇಡಿಗಳು ಕಲ್ಲೆಸೆದು ಕಿಟಕಿಯ ಗಾಜು ಒಡೆದು ಹಾಕಿದ್ದಲ್ಲದೆ ಹಳೆ ಆಯಿಲ್ ಎಣ್ಣೆಯ ಸುರಿದಿದ್ದಾರೆ. ಶೈಲಜಾ ಕಾಂಗ್ರೆಸ್ ರಾಜ್ಯ ಘಟಕದ ಐಟಿ ಸೆಲ್ ಕಾರ್ಯದರ್ಶಿಯೂ ಆಗಿದ್ದು ಇತ್ತೀಚೆಗೆ ಕ್ಲಬ್ ಹೌಸ್ ನಲ್ಲಿ ಮನಬಂದಂತೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಶ್ರೀರಾಮ, ಸೀತಾಮಾತೆ, ಹನುಮಂತ ದೇವರ ಬಗ್ಗೆ ಅಶ್ಲೀಲ ರೀತಿಯಲ್ಲಿ ಕ್ಲಬ್ ಹೌಸ್ ಚರ್ಚೆಯಲ್ಲಿ ಮಾತನಾಡಿದ್ದರು.


ಶ್ರೀರಾಮ ಸಲಿಂಗಕಾಮಿ, ರಾಮನಿಗೆ ಹಂದಿ ಮಾಂಸ ಇಷ್ಟ ಎಂದು ಶೈಲಜಾ ಅವಹೇಳನ ಮಾಡಿದ್ದು ಅದರ ಆಡಿಯೋ ವೈರಲ್ ಆಗಿದೆ. ಈ ಬಗ್ಗೆ ಪುತ್ತೂರಿ ಠಾಣೆಯಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರು ಶೈಲಜಾ ಅಮರನಾಥ್ ಸೇರಿ ನಾಲ್ವರ ವಿರುದ್ದ ಪೊಲೀಸ್ ದೂರು ನೀಡಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ.


ದೂರು ನೀಡಿದ ಬೆನ್ನಲ್ಲೇ ಶನಿವಾರ ಸಂಜೆ ವೇಳೆಗೆ ಶೈಲಜಾ ಮನೆಗೆ ದಾಳಿ ನಡೆಸಲಾಗಿದ್ದು ಆಯಿಲ್ ಎರಚಿ ಅಲ್ಲಿಂದ ಪರಾರಿಯಾಗಿದ್ದಾರೆ. ಗಾಜು ಒಡೆದು ಮನೆಯ ಹೊರಭಾಗಕ್ಕೆ ಆಯಿಲ್ ಎರಚಿ ಹಾನಿ ಮಾಡಿದ್ದಾರೆ. ಸ್ಥಳಕ್ಕೆ ಪುತ್ತೂರು ನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.


ಕ್ಲಬ್ ಹೌಸ್ ಚರ್ಚೆಯಲ್ಲಿ ಶೈಲಜಾ ಜೊತೆ ಪ್ರೀತಿ ಶೆಟ್ಟಿ ಮಹಾಲಕ್ಷ್ಮಿ, ಅನಿಲ್, ಪುನೀತ್ ಮತ್ತಿತರರು ಪಾಲ್ಗೊಂಡಿದ್ದು ಅವರ ವಿರುದ್ಧವೂ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಪ್ರವೀಣ್ ಕುಮಾರ್ ಎಂಬವರು ಪೊಲೀಸ್ ದೂರು ನೀಡಿದ್ದರು. ಹಿಂದುಗಳ ಭಾವನೆಗೆ ಧಕ್ಕೆ ತಂದಿರುವುದಾಗಿ ದೂರಿನಲ್ಲಿ ತಿಳಿಸಿದ್ದು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಜೂ.15 ರಂದು ರಾತ್ರಿ 9 ಗಂಟೆಗೆ ಸಾಮಾಜಿಕ ಜಾಲತಾಣ ಕ್ಲಬ್ ಹೌಸ್ನಲ್ಲಿ ಏರ್ಪಡಿಸಿದ್ದ `ಸಂಡೇ ಅಂಕಲ್ಸ್ ಆರ್ ಮಂಡೇ ಸನ್ಸ್’ ಎಂಬ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಜ್ಯ ನಾಯಕಿ ಶೈಲಜಾ ಅಮರನಾಥ್, ಪ್ರೀತು ಶೆಟ್ಟಿ ಯಾನೆ ಮಹಾಲಕ್ಷ್ಮೀ, ಕಾಂಗ್ರೆಸ್ ಐಟಿ ಸೆಲ್ಲಿನ ಅನಿಲ್, ಪ್ರವೀಣ್, ಪುನೀತ್ ಮುಂತಾದವರು ಭಾಗವಹಿಸಿದ್ದು ಹಿಂದು ದೇವರ ಅವಹೇಳನಗೈದ ಬಗ್ಗೆ ದೂರು ನೀಡಲಾಗಿತ್ತು.
Puttur Indecent remarks on Hindu gods in Club house by congress members, The house of Shilaja Amarnath was attacked by Hindu Organisations by throwing back ink. It is said that Congress IT Cell members have made indecent comments about Hindu Gods during a conversion that was made on Club House. The video of this was leaked on social media. A complaint has been filed by Hindu outfits at Puttur town police station.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm