ಬ್ರೇಕಿಂಗ್ ನ್ಯೂಸ್
19-06-22 05:52 pm Mangalore Correspondent ಕರಾವಳಿ
ಮಂಗಳೂರು, ಜೂನ್ 19: ಇಂಡಿಗೋ ವಿಮಾನ ಕಂಪನಿಯು ಮುಂಬೈ- ಮಂಗಳೂರು ಮಧ್ಯೆ ಪ್ರತಿ ದಿನ ವಿಮಾನ ಸಂಚಾರಕ್ಕೆ ಮುಂದಾಗಿದೆ. ಇಂಡಿಗೋ ಸಂಸ್ಥೆಯ 6ಇ-5236 ಮತ್ತು 6ಇ -5237 ಸಂಖ್ಯೆಯ ವಿಮಾನಗಳು ಮುಂಬೈ- ಮುಂಗಳೂರು ಮಧ್ಯೆ ದಿನಾ ಬೆಳಗ್ಗೆ ಸಂಚಾರ ನಡೆಸಲಿವೆ.
6ಇ-5236 ಸಂಖ್ಯೆಯ ವಿಮಾನ ಬೆಳಗ್ಗೆ 8.50ಕ್ಕೆ ಮುಂಬೈನಿಂದ ಹೊರಡಲಿದ್ದು, 10.20ಕ್ಕೆ ಮಂಗಳೂರು ತಲುಪಲಿದೆ. ಆನಂತರ, 6ಇ-5237 ಸಂಖ್ಯೆಯ ವಿಮಾನ ಬೆಳಗ್ಗೆ 11ಕ್ಕೆ ಮಂಗಳೂರಿನಿಂದ ಹೊರಟು ಮಧ್ಯಾಹ್ನ 12.40ಕ್ಕೆ ಮುಂಬೈ ತಲುಪಲಿದೆ. ಇದಕ್ಕಾಗಿ ಇಂಡಿಗೋ ಸಂಸ್ಥೆಯು ಏರ್ ಬಸ್ 320 ಮಾದರಿಯ ವಿಮಾನಗಳನ್ನು ಸಂಚಾರಕ್ಕೆ ಇಳಿಸಿದೆ.
ಜೂನ್ 17ರಂದು ಮೊದಲ ಬಾರಿಗೆ ವಿಮಾನ ಪ್ರಾಯೋಗಿಕ ಸಂಚಾರ ನಡೆಸಿದ್ದು, ಮೊದಲ ಸಂಚಾರದಲ್ಲಿ ಸಿಬಂದಿ ಸಹಿತ 88 ಮಂದಿ ಮಂಗಳೂರು ತಲುಪಿದ್ದಾರೆ. ಆನಂತರ 99 ಮಂದಿ ಮಂಗಳೂರಿನಿಂದ ಮುಂಬೈಗೆ ಸಂಚರಿಸಿದ್ದಾರೆ. ರೆಗ್ಯುಲರ್ ಆಪರೇಶನ್ ಜೂನ್ 19ರ ಭಾನುವಾರದಿಂದ ಆರಂಭಗೊಂಡಿದ್ದು, ಮುಂಬೈನಿಂದ ಆಗಮಿಸಿದ ವಿಮಾನದಲ್ಲಿ 55 ಮಂದಿ ಇದ್ದರು. ಮಂಗಳೂರಿನಿಂದ ಮುಂಬೈಗೆ ಹೊರಟ ವಿಮಾನದಲ್ಲಿ ಸಿಬಂದಿ ಸಹಿತ 141 ಮಂದಿ ತೆರಳಿದ್ದಾರೆ.
ಇತ್ತೀಚೆಗೆ ಇಂಡಿಯೋ ಸಂಸ್ಥೆಯು ಮಧ್ಯಾಹ್ನ ನಂತರ ಮಂಗಳೂರಿನಿಂದ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿತ್ತು. ಸದ್ಯಕ್ಕೆ ಮಂಗಳೂರಿನಿಂದ ವಾರಕ್ಕೊಂದರಂತೆ ವಿವಿಧ ನಗರಗಳಿಗೆ 182 ದೇಶೀಯ ವಿಮಾನಗಳು ಸಂಚರಿಸುತ್ತಿದ್ದು, ಈ ಪೈಕಿ 85 ವಿಮಾನಗಳು ಇಂಡಿಗೋ ಸಂಸ್ಥೆಯದ್ದು. ಮಂಗಳೂರಿನಿಂದ ಬೆಂಗಳೂರಿಗೆ 28, ಪುಣೆಯ ಮೂಲದ ದೆಹಲಿಗೆ ನಾಲ್ಕು, ಚೆನ್ನೈಗೆ ಏಳು, ಮುಂಬೈಗೆ 21, ಹೈದರಾಬಾದ್ 14, ಬೆಂಗಳೂರು ಮೂಲಕ ಕೊಲ್ಕತ್ತಾಗೆ ಏಳು ಮತ್ತು ಹುಬ್ಬಳ್ಳಿಗೆ ನಾಲ್ಕು ವಿಮಾನಗಳು ಸಂಚರಿಸುತ್ತವೆ. ಏರ್ ಇಂಡಿಯಾದಿಂದ ಮಂಗಳೂರಿನಿಂದ ಮುಂಬೈಗೆ ಏಳು, ಸ್ಪೈಸ್ ಜೆಟ್ ನಿಂದ ಬೆಂಗಳೂರಿಗೆ 6, ಗೋ ಫಸ್ಟ್ ಕಂಪನಿಯಿಂದ ಮುಂಬೈಗೆ ಏಳು, ಏರ್ ಇಂಡಿಯಾ ಎಕ್ಸ್ ಪ್ರೆಸ್ ಮುಂಬೈಗೆ ಮೂರು ವಿಮಾನಗಳು ಸಂಚರಿಸುತ್ತವೆ.
ಇಂಡಿಗೋ ಸಂಸ್ಥೆಯಿಂದ ಹುಬ್ಬಳ್ಳಿ- ಮಂಗಳೂರು ಮಧ್ಯೆ ವಾರಕ್ಕೆ ನಾಲ್ಕು ವಿಮಾನ ಸಂಚರಿಸುತ್ತಿದ್ದು ಭಾನುವಾರ, ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚಾರ ಇರುತ್ತದೆ.
IndiGo commenced the regular operation of its new flight 6E 5236/6E 5237 on the Mumbai-Mangaluru-Mumbai sector on Sunday, June 19. The trial operations had begun on June 17.Flight 6E 5236 leaves Mumbai at 8.50 AM and reaches Mangaluru at 10.20 AM and flight 6E 5237 leaves Mangaluru at 11 AM to reach Mumbai at 12.40 PM. IndiGo is using Airbus A320 type of aircraft for this new flight.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm