ಬ್ರೇಕಿಂಗ್ ನ್ಯೂಸ್
19-06-22 07:29 pm Mangalore Correspondent ಕರಾವಳಿ
ಮಂಗಳೂರು, ಜೂನ್ 19 : ಸೇನೆಯಲ್ಲಿರುವ ಸೈನಿಕರನ್ನು ಆರ್ಥಿಕ ಹೊರೆ ಎಂದು ಭಾವಿಸಿದ್ದು ಇತಿಹಾಸದಲ್ಲಿ ಇದೇ ಮೊದಲು. ರೈತರು ಮತ್ತು ಸೈನಿಕರನ್ನು ಈ ರೀತಿ ಕಂಡಿರುವುದಕ್ಕೆ ಬಿಜೆಪಿ ಭಾರೀ ಬೆಲೆಯನ್ನು ತೆರಲಿದೆ ಎಂದು ಮಾಜಿ ಸಚಿವ, ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ.
ಅಗ್ನಿಪಥ್ ಸೇನಾ ನೇಮಕಾತಿ ಯೋಜನೆ ವಿರೋಧಿಸಿ ಸುದ್ದಿಗೋಷ್ಟಿ ನಡೆಸಿದ ಖಾದರ್, ಬಿಜೆಪಿ ಸರಕಾರ ದೇಶದ ಯುವಜನತೆಯನ್ನು ದಾರಿ ತಪ್ಪಿಸುತ್ತಿದೆ. ಉದ್ಯೋಗ ಮತ್ತು ಶಿಕ್ಷಣದಿಂದ ವಂಚಿತ ಮಾಡುವುದೇ ಅಗ್ನಿಪಥ್ ಯೋಜನೆ. ಹುತಾತ್ಮ ಸೈನಿಕರನ್ನು ಮುಂದಿಟ್ಟುಕೊಂಡು ಬಿ.ಜೆ.ಪಿ ಅಧಿಕಾರಕ್ಕೆ ಬರುತ್ತೆ. ಆದರೆ ಸೇನೆಯಲ್ಲಿ ದುಡಿಯುವವರಿಗೆ ಸವಲತ್ತು ಕೊಡುವ ಯೋಗ್ಯತೆ ಇಲ್ವಾ..? ಎಂದು ಪ್ರಶ್ನಿಸಿದರು.

ದೇಶದ ಗಡಿಯಲ್ಲಿ ಬಂದೂಕು, ಫಿರಂಗಿ ಹಿಡಿದು ಶತ್ರು ದೇಶದ ಮೇಲೆ ಹೋರಾಟ ಮಾಡುವವರು ಸೈನಿಕರು. ಆದ್ರೆ ಸೇನೆಗೆ ಸೇರುವ ಯುವಕರ ಮೇಲೆಯೇ ಭಾರತ ಸರ್ಕಾರ ಫಿರಂಗಿ ಬಂದೂಕು ಬಿಡುತ್ತಿದೆ ಎಂದು ಹೇಳಿದ ಖಾದರ್, ಪೌರ ಕಾರ್ಮಿಕರನ್ನೆ ನಾವು ಗುತ್ತಿಗೆ ಆಧಾರದ ಬದಲು ಪರ್ಮನೆಂಟ್ ಮಾಡಿದ್ದೆವು. ಆದ್ರೆ ಬಿ.ಜೆ.ಪಿ ಸರ್ಕಾರ ಸೇನೆಗೆ ಗುತ್ತಿಗೆ ಆಧಾರದಲ್ಲಿ ಯೋಧರ ನೇಮಕ ಮಾಡುತ್ತಿದೆ. ಸೇನೆಯ ಮುಖ್ಯಸ್ಥರ ಬಳಿಯೇ ಯೋಜನೆಯ ಸಾಧಕ ಬಾಧಕ ಚರ್ಚೆ ಮಾಡಿಲ್ಲ. ಖಾಸಗಿ ಸಂಸ್ಥೆಯ ಮೂಲಕ ನೇಮಕಾತಿ ನಡೆಯುತ್ತದೆ. ದೇಶದ ಸೇನೆಯನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.
![]()
ಬಿಜೆಪಿ ಅಧಿಕಾರಕ್ಕೆ ಬರುವಾಗ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಎಂದು ಹೇಳುತ್ತದೆ. ಇವತ್ತು ಇದ್ದ ಕೆಲಸವೇ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಹೋರಾಟದಂತೆ ಇದು ಇನ್ನೊಂದು ರೀತಿಯ ಹೋರಾಟಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ.
ದೇವರ ನಿಂದೆಯನ್ನು ಕಾಂಗ್ರೆಸ್ ಸಹಿಸಲ್ಲ

ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿ ಶೈಲಜಾ ಅಮರನಾಥ್ ಹಿಂದು ದೇವರನ್ನು ಅವಹೇಳನ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ, ಯಾವ ಧರ್ಮದ ನಿಂದನೆ ಮಾಡಿದ್ರು ಕಾಂಗ್ರೆಸ್ ಅದನ್ನು ಒಪ್ಪಲ್ಲ. ಯಾರು ಯಾರ ಧರ್ಮದ ನಿಂದನೆಯನ್ನೂ ಮಾಡಬಾರದು, ಕಾಂಗ್ರೆಸ್ ಇದನ್ನು ಖಂಡಿಸುತ್ತದೆ. ಯಾರ ವೈಯಕ್ತಿಕ ನಿಂದನೆಗು ಕಾಂಗ್ರೆಸ್ ಅವಕಾಶ ನೀಡಲ್ಲ ಎಂದು ಹೇಳಿದ್ದಾರೆ. ಕ್ಲಬ್ ಹೌಸ್ ಚರ್ಚೆಗಿಂತ ಮಾಡುವುದಕ್ಕೆ ಬೇರೆ ಸಾಕಷ್ಟು ಕೆಲಸವಿದೆ. ಜಿಲ್ಲಾಧ್ಯಕ್ಷರು ಈ ಬಗ್ಗೆ ಮಾಹಿತಿ ಪಡೆದಿದ್ದಾರೆ. ರಾಜ್ಯ ನಾಯಕರ ಗಮನಕ್ಕೆ ತರಲಾಗಿದೆ ಎಂದು ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ.
BJP is planning to divide the indian army with Agneepath scheme says UT Khader in Mangalore. Also speaking about IT cell congress members of Puttur making deformation speech on Hindu Gods on social media is totally Condemnable said Khader.
28-10-25 10:03 pm
Bangalore Correspondent
ಶಾಸಕಾಂಗ ನಾಯಕರ ಆಯ್ಕೆ ವೇಳೆ 2.5 ವರ್ಷ ಎಂದು ತಿಳಿಸಿ...
28-10-25 07:18 pm
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
28-10-25 10:23 pm
HK News Desk
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
28-10-25 08:36 pm
Mangalore Correspondent
ಸ್ಪೀಕರ್ ಕೊಠಡಿ- ಶಾಸಕರ ಭವನ ನವೀಕರಣ ನೆಪದಲ್ಲಿ ಭಾರೀ...
28-10-25 03:36 pm
ಲಾರಿ ಧಾವಂತಕ್ಕೆ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಬ...
27-10-25 11:01 pm
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
28-10-25 10:48 pm
Mangalore Correspondent
ಕೋಟಿ ರೂ. ಚೀಟಿ ವ್ಯವಹಾರ ಇದೆ, ಹಣ ಸಾಲ ಕೊಟ್ಟರೆ ದುಪ...
27-10-25 05:29 pm
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm