ಮಾಸ್ಕ್ ಹಾಕದೇ ಹೊರಗೆ ಬಂದರೆ ಹುಷಾರ್‌..! ಇನ್ನು ರೂ. 200 ದಂಡ !

30-09-20 11:54 am       Mangalore Correspondent   ಕರಾವಳಿ

ಜನರು ಮಾಸ್ಕ್ ಧರಿಸದೇ, ಓಡಾಡುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ಪಾಲಿಕೆಯು ಮಾಸ್ಕ್ ಧರಿಸದವರಿಗೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸುತ್ತಿದೆ.

ಮಂಗಳೂರು, ಸೆಪ್ಟಂಬರ್ 30: ಕೋವಿಡ್‌-19 ಹರಡುವುದನ್ನು ತಡೆಯಲು ಮಂಗಳೂರು ಮಹಾನಗರ ಪಾಲಿಕೆ ಶಿಸ್ತು ಕ್ರಮಕ್ಕೆ ಮುಂದಾಗಿದೆ. ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವವರು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳಿಗೆ ಮಂಗಳೂರು ಮಹಾನಗರ ಪಾಲಿಕೆಯಿಂದ 200 ರೂ. ದಂಡ ವಿಧಿಸಲು ನಿರ್ಧರಿಸಲಾಗಿದೆ. 

ಮಾಸ್ಕ್ ಕಟ್ಟಿಕೊಳ್ಳದೇ ಬೈಕ್‌, ಕಾರ್‌ಗಳಲ್ಲಿ ಸಂಚರಿಸುವವರು ಹಾಗೂ ಸಾರ್ವಜನಿಕ ರಸ್ತೆಗಳಲ್ಲಿ ಓಡಾಡುವವರ ಮೇಲೆಯೂ ಪಾಲಿಕೆಯ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದೆ. ಅಲ್ಲಲ್ಲಿ ಜನರು ಮುಖಕ್ಕೆ ಮಾಸ್ಕ್ ಧರಿಸದೇ, ಓಡಾಡುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ಪಾಲಿಕೆಯ ಆಯುಕ್ತರು ಹಾಗೂ ಆರೋಗ್ಯ ಅಧಿಕಾರಿಗಳ ತಂಡದ ನೇತೃತ್ವದಲ್ಲಿ ಮಾಸ್ಕ್ ಧರಿಸದವರಿಗೆ ದಂಡ ಹಾಕುವ ಮೂಲಕ ಬಿಸಿ ಮುಟಿಸಲಾಗುತ್ತಿದೆ. ಹಿಂದೆ ನೂರು ರೂ. ಇದ್ದ ದಂಡ ಶುಲ್ಕವನ್ನು ಈಗ 200 ರೂ.ಗೆ ಏರಿಸಲಾಗಿದೆ.

ಜನರಿಗೆ ದಂಡ ವಿಧಿಸುವುದು ನಮ್ಮ ಉದ್ದೇಶವಲ್ಲ. ಜನರು ಜಾಗೃತರಾಗಬೇಕು. ಮಾಸ್ಕ್ ಇಲ್ಲದೇ ಹೊರಗೆ ಬರಬಾರದು ಎಂಬುದಷ್ಟೇ ನಮ್ಮ ಉದ್ದೇಶ ಎಂದು ಮೇಯರ್ ದಿವಾಕರ ಪಾಂಡೇಶ್ವರ ಹೇಳಿದ್ದಾರೆ.

 video