ಆಕೆ ಪಿಲಿಕುಳ ಬೇಡವೆಂದು ಗೋವಾ ಹೋಗಿದ್ದಳು, ಪತಿಯನ್ನು ಬಿಟ್ಟು ತೆರಳಿದ ಪತ್ನಿ ಗೋವಾದಲ್ಲಿ ಪತ್ತೆ !

22-06-22 10:37 am       Mangalore Correspondent   ಕರಾವಳಿ

ಪಿಲಿಕುಳಕ್ಕೆ ಹೋಗೋಣ ಎಂದು ಆ ದಂಪತಿ ಜೊತೆಯಾಗಿಯೇ ಬಸ್ಸಿನಲ್ಲಿ ಬಂದಿದ್ದರು. ಆದರೆ, ಮಂಗಳೂರು ಮುಟ್ಟಿದಾಗ ಅದೇನಾಯ್ತೋ ಏನೋ ಪತ್ನಿ ಪತಿಯನ್ನೇ ಬಿಟ್ಟು ತೆರಳಿದ್ದಳು. ಇದರಿಂದ ಬೇಸತ್ತ ಪತಿರಾಯ ಪಾಂಡೇಶ್ವರ ಠಾಣೆಯಲ್ಲಿ ದೂರನ್ನೂ ಕೊಟ್ಟಿದ್ದರು. ಈಗ ಪತ್ನಿಯನ್ನು ಪೊಲೀಸರು ಗೋವಾದಲ್ಲಿ ಟ್ರೇಸ್ ಮಾಡಿದ್ದಾರೆ.

ಮಂಗಳೂರು, ಜೂನ್ 22: ಪಿಲಿಕುಳಕ್ಕೆ ಹೋಗೋಣ ಎಂದು ಆ ದಂಪತಿ ಜೊತೆಯಾಗಿಯೇ ಬಸ್ಸಿನಲ್ಲಿ ಬಂದಿದ್ದರು. ಆದರೆ, ಮಂಗಳೂರು ಮುಟ್ಟಿದಾಗ ಅದೇನಾಯ್ತೋ ಏನೋ ಪತ್ನಿ ಪತಿಯನ್ನೇ ಬಿಟ್ಟು ತೆರಳಿದ್ದಳು. ಇದರಿಂದ ಬೇಸತ್ತ ಪತಿರಾಯ ಪಾಂಡೇಶ್ವರ ಠಾಣೆಯಲ್ಲಿ ದೂರನ್ನೂ ಕೊಟ್ಟಿದ್ದರು. ಈಗ ಪತ್ನಿಯನ್ನು ಪೊಲೀಸರು ಗೋವಾದಲ್ಲಿ ಟ್ರೇಸ್ ಮಾಡಿದ್ದಾರೆ.

ದಾವಣಗೆರೆ ಮೂಲದ ಶಿಲ್ಪಾ ಎಂಬಾಕೆಯನ್ನು ಎರಡು ತಿಂಗಳ ಹಿಂದೆ ಬಂಟ್ವಾಳದ ಕೊಯ್ಲ ಗ್ರಾಮದ ಹರಿಶ್ಚಂದ್ರ ಎಂಬವರು ಮದುವೆಯಾಗಿದ್ದರು. ಆನಂತರ ಜೊತೆಯಾಗಿಯೇ ಇದ್ದರು. ಎರಡು ದಿನಗಳ ಹಿಂದೆ ಮಂಗಳೂರಿಗೆ ತಿರುಗಾಡಲೆಂದು ಬಂದಿದ್ದರು. ಆದರೆ ಪತ್ನಿ ಶಿಲ್ಪಾ ಪತಿಯನ್ನು ಬಸ್ ನಿಲ್ದಾಣದಲ್ಲಿಯೇ ಬಿಟ್ಟು ತೆರಳಿದ್ದಳು. ಪತಿ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಇದ್ದಾಗ ಶೌಚಾಲಯಕ್ಕೆಂದು ತೆರಳಿದ್ದ ಪತ್ನಿ ಅಲ್ಲಿಂದ ನಾಪತ್ತೆಯಾಗಿದ್ದಳು.

ಆಕೆ ಉಡುಪಿ ಬಸ್ಸನ್ನು ಹತ್ತಿ ಹೋಗಿದ್ದಾಳೆಂದು ಮಾಹಿತಿ ತಿಳಿದುಬಂದಿತ್ತು. ಆನಂತರ, ಹರಿಶ್ಚಂದ್ರ ಅವರು ಪತ್ನಿಗೆ ಫೋನ್ ಮಾಡಿದ್ರೆ, ಸ್ವಿಚ್ ಆಫ್ ಆಗಿತ್ತು. ಪೊಲೀಸರು ಫೋನ್ ನೆಟ್ವರ್ಕ್ ಟ್ರೇಸ್ ಮಾಡಿ, ಲೊಕೇಶನ್ ಪತ್ತೆ ಮಾಡಿದ್ದರು. ತನಿಖೆ ಮುಂದುವರಿಸಿದಾಗ, ಶಿಲ್ಪಾ ಗೋವಾ ತಲುಪಿದ್ದು ಗೊತ್ತಾಗಿದೆ. ವಿಚಾರಿಸಿದಾಗ, ಗಂಡನಿಗೆ ಹುಷಾರಿಲ್ಲವೆಂದು ಬೇಸತ್ತು ಗೆಳತಿ ಮನೆಗೆ ತೆರಳಿದ್ದಾಗಿ ತಿಳಿಸಿದ್ದಾಳೆ. ಪತಿ-ಪತ್ನಿಯ ವಿಷಯ ನಮಗೆ ಬೇಡ ಎಂದು ಪೊಲೀಸರು ಸುಮ್ಮನಾಗಿದ್ದಾರೆ.

Missing wife from Mangalore found in Goa by Police. Wife who requested husband of going to Pilikula park was later missing from the State Bank Bus Stand after she said she will go to the washroom. Bunder Police who began the search found her traced in Goa.