ಬ್ರೇಕಿಂಗ್ ನ್ಯೂಸ್
25-06-22 11:32 am HK News Desk ಕರಾವಳಿ
ಮಂಗಳೂರು, ಜೂನ್ 25 : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ಇಂದು ಬೆಳಗ್ಗೆ 9.10ರಿಂದ 15 ರ ನಡುವೆ ಸುಳ್ಯ ತಾಲೂಕಿನ ಹಲವೆಡೆ ಜನರಿಗೆ ಕಂಪನದ ಅನುಭವ ಆಗಿದ್ದು ಜನರು ಭೀತಿಯಿಂದ ಮನೆಯಿಂದ ಹೊರಗೋಡಿ ಬಂದಿದ್ದಾರೆ.
ಸುಳ್ಯ ತಾಲೂಕಿನ ಮರ್ಕಂಜ, ಕೊಡಪ್ಪಾಲ, ಗೂನಡ್ಕ, ಅರಂತೋಡು ಮೊದಲಾದೆಡೆ ಭೂಮಿ ಕಂಪಿಸಿದ ಅನುಭವ ಆಗಿದ್ದು ಒಂದು ಕ್ಷಣ ಭೀತಿಗೆ ಒಳಗಾಗಿದ್ದಾರೆ. ನಾಲ್ಕು ದಿನಗಳ ಹಿಂದೆ ಹಾಸನ, ಕೊಡಗಿನಲ್ಲಿಯೂ ಭೂಕಂಪನದ ಅನುಭವ ಆಗಿತ್ತು. ಹಾಸನ ಜಿಲ್ಲೆಯ ಹೊಳೆ ನರಸೀಪುರ, ಅರಕಲಗೂಡು, ಕೊಡಗಿನ ಸೋಮವಾರಪೇಟೆ, ಮಡಿಕೇರಿಯಲ್ಲೂ ಕಂಪನದ ಅನುಭವ ಆಗಿತ್ತು.
ಇದೀಗ ಹಾಸನದ ಕಂಪನದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಕಂಪನ ಸದ್ದು ಮಾಡಿದೆ. ಕಂಪನ ಎಷ್ಟರ ಪ್ರಮಾಣ ಇತ್ತು ಎನ್ನೋದನ್ನು ಅಧಿಕಾರಿಗಳು ಪತ್ತೆ ಮಾಡುತ್ತಿದ್ದಾರೆ.
ಕಂಪನದ ಅನುಭವ ಆಗುತ್ತಲೇ ಜನರು ಆತಂಕದಿಂದ ಮನೆಯಿಂದ ಹೊರಗೋಡಿ ಬಂದಿದ್ದಾರೆ. ಮನೆಯಲ್ಲಿದ್ದ ಪಾತ್ರೆಗಳು ಅಲುಗಾಡಿದ್ದು, ಕೆಲವು ಕಡೆ ಕಪಾಟಿನಲ್ಲಿಟ್ಟಿದ್ದ ಪಾತ್ರೆ ಮತ್ತಿತರ ವಸ್ತುಗಳು ಕೆಳಗೆ ಬಿದ್ದಿವೆ. ಕೆಲವು ಮನೆಗಳ ಗೋಡೆ ಬಿರುಕುಬಿಟ್ಟಿದ್ದು, ಮನೆಯ ಮೇಲ್ಭಾಗಕ್ಕೆ ಹಾಕಿದ್ದ ಡಬ್ಬಿ, ಶೀಟ್ ಅದುರಿದಂತೆ ಸದ್ದು ಮಾಡಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
Earthquake at Sullia in Dakshina Kannada after Hassana and Kodagu, people panic. In Sullia, almost all parts of the taluk experienced mild tremors at around 9 am.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
10-09-25 10:50 pm
Mangalore Correspondent
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
ಕೊಲ್ಲೂರು ಮೂಕಾಂಬಿಕೆಗೆ ನಾಲ್ಕು ಕೋಟಿ ಮೌಲ್ಯದ ವಜ್ರ...
10-09-25 08:14 pm
Mangalore, Baikampady Fire, Aromazen: ಬೈಕಂಪಾಡ...
10-09-25 02:10 pm
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm