ಬ್ರೇಕಿಂಗ್ ನ್ಯೂಸ್
26-06-22 04:56 pm Mangalore Correspondent ಕರಾವಳಿ
ಮಂಗಳೂರು, ಜೂನ್ 26: ಮಂಗಳೂರು ಕಮಿಷನರೇಟ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವಿಭಾಗದ ವತಿಯಿಂದ ಅಂತಾರಾಷ್ಟ್ರೀಯ ಡ್ರಗ್ಸ್ ವಿರೋಧಿ ದಿನದ ಅಂಗವಾಗಿ ಒಟ್ಟು ಒಂದು ಕೋಟಿ 82 ಲಕ್ಷ ರೂಪಾಯಿ ಮೌಲ್ಯದ ವಿವಿಧ ರೀತಿಯ ಮಾದಕ ದ್ರವ್ಯಗಳನ್ನು ನಾಶ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ವಿಭಾಗದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ವಶಕ್ಕೆ ಪಡೆದಿರುವ 23.75 ಲಕ್ಷ ಮೌಲ್ಯದ 53.128 ಕೇಜಿ ಗಾಂಜಾ ಹಾಗೂ 30 ಲಕ್ಷ ಮೌಲ್ಯದ 120 ಗ್ರಾಮ್ ಹೆರಾಯಿನ್ ಅನ್ನು ನಾಶ ಮಾಡಲಾಯಿತು. ಮೂಲ್ಕಿ ಬಳಿಯ ಲಿಂಗಪ್ಪಯ್ಯ ಕಾಡಿನಲ್ಲಿರುವ ರಾಮ್ಕಿ ಎನರ್ಜಿ ಅಂಡ್ ಎನ್ವಿರಾನ್ಮೆಂಟ್ ಕಂಪನಿಯ ಬಯೋ ಮೆಡಿಕಲ್ ವೇಸ್ಟ್ ಘಟಕದಲ್ಲಿ ಮಾದಕ ದ್ರವ್ಯಗಳನ್ನು ಪೊಲೀಸರು ನಾಶ ಪಡಿಸಿದರು.
ಇದೇ ವೇಳೆ, ಮಂಗಳೂರು ಪೊಲೀಸ್ ಕಮಿಷನರೇಟ್ ವತಿಯಿಂದ 1.16 ಕೋಟಿ ಮೌಲ್ಯದ 580.860 ಕೇಜಿ ಗಾಂಜಾ, 1.37 ಲಕ್ಷ ಮೌಲ್ಯದ 25 ಗ್ರಾಮ್ ಹೆರಾಯಿನ್, 11.20 ಲಕ್ಷ ಮೌಲ್ಯದ 320 ಎಂಡಿಎಂ ಡ್ರಗ್ಸ್ ಅನ್ನೂ ಸುಡಲಾಯಿತು. ಮಂಗಳೂರು ನಗರ ವ್ಯಾಪ್ತಿಯ 15 ಠಾಣೆಗಳಲ್ಲಿ 95 ಪ್ರಕರಣಗಳಲ್ಲಿ ಭಾರೀ ಪ್ರಮಾಣದ ಡ್ರಗ್ಸ್ ವಶಕ್ಕೆ ಪಡೆಯಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್, ಬಂಟ್ವಾಳ ಎಎಸ್ಪಿ ಶಿವಾಂಶು ರಜಪೂತ್, ಪುತ್ತೂರು ಎಎಸ್ಪಿ ಗಾನ ಪಿ. ಕುಮಾರ್, ಮಂಗಳೂರು ನಗರ ಅಪರಾಧ ವಿಭಾಗದ ಡಿಸಿಪಿ ಹರಿರಾಮ್ ಶಂಕರ್ ನೇತೃತ್ವದಲ್ಲಿ ವಿವಿಧ ಮಾದಕ ವಸ್ತುಗಳನ್ನು ಪರಿಶೀಲಿಸಿ ಸ್ವತಃ ಪೊಲೀಸರೇ ನಾಶ ಪಡಿಸುವ ಯಂತ್ರಕ್ಕೆ ಹಾಕಿದರು.
The Dakshina Kannada police destroyed 53.128 kg of ganja worth Rs 23,75,300 and 120 gram heroin worth Rs 30,00,000 as part of International Day against Drug Abuse and Illicit Trafficking on Sunday June 26.After obtaining court permission, the illicit drugs were destroyed in the Biomedical Waste Management, Processing, and Disposal Unit of Ramky Energy and Environment Ltd.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
10-09-25 10:50 pm
Mangalore Correspondent
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
ಕೊಲ್ಲೂರು ಮೂಕಾಂಬಿಕೆಗೆ ನಾಲ್ಕು ಕೋಟಿ ಮೌಲ್ಯದ ವಜ್ರ...
10-09-25 08:14 pm
Mangalore, Baikampady Fire, Aromazen: ಬೈಕಂಪಾಡ...
10-09-25 02:10 pm
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm