ಬ್ರೇಕಿಂಗ್ ನ್ಯೂಸ್
27-06-22 08:21 pm Mangalore Correspondent ಕರಾವಳಿ
ಮಂಗಳೂರು, ಜೂನ್ 27: ರಾಜ್ಯದಲ್ಲಿ ಮುಸ್ಲಿಮರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ವ್ಯಾಪಾರ ನಿರ್ಬಂಧ ಹೆಸರಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಹೇಳುತ್ತಿದ್ದರೂ, ತಳಮಟ್ಟದಲ್ಲಿ ವ್ಯತಿರಿಕ್ತ ಪರಿಸ್ಥಿತಿ ಇದೆ. ಇದರಿಂದ ಮಾನಸಿಕವಾಗಿ ನೊಂದಿದ್ದೇನೆ. ವಕ್ಫ್ ಆಸ್ತಿಯನ್ನು ಕಬಳಿಸಿದ ಬಗ್ಗೆ ವರದಿ ಕೊಟ್ಟು ಹೈಕೋರ್ಟ್ ನ್ಯಾಯಾಧೀಶರು ಒಪ್ಪಿಕೊಂಡಿದ್ದರೂ, ಸರಕಾರ ಅದನ್ನು ಜಾರಿಗೊಳಿಸುತ್ತಿಲ್ಲ. ಅಲ್ಪಸಂಖ್ಯಾತರ ಆಸ್ತಿ, ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ರಾಜ್ಯ ಸರಕಾರದ ಗನ್ ಮೆನ್ ಇಟ್ಟುಕೊಂಡು ತಿರುಗಾಡುವುದು ಸರಿಯಲ್ಲವೆಂದು ಅದನ್ನು ಹಿಂತಿರುಗಿಸುತ್ತಿದ್ದೇನೆ. ಅದರ ಜೊತೆಗೆ ನನಗೆ ಕೊಟ್ಟಿರುವ ಎಲ್ಲ ಸರಕಾರಿ ಸವಲತ್ತುಗಳನ್ನೂ ಹಿಂತಿರುಗಿಸುತ್ತೇನೆ ಎಂದು ಬಿಜೆಪಿ ಹಿರಿಯ ಮುಖಂಡ, ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಣಿಪ್ಪಾಡಿಯವರು, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ನಾಲ್ಕು ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ರಾಜ್ಯದಾದ್ಯಂತ ಕಬಳಿಸಿರುವ ಬಗ್ಗೆ ಸರಕಾರಕ್ಕೆ ವರದಿ ಕೊಟ್ಟಿದ್ದೇನೆ. ವರದಿ ಜಾರಿಗೊಳಿಸಲು ಒತ್ತಾಯಿಸಿ ಪ್ರಧಾನ ಮಂತ್ರಿಗೂ ಪತ್ರ ಬರೆದಿದ್ದೇನೆ. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ, ಈಗಿನ ಮುಖ್ಯಮಂತ್ರಿ ಬೊಮ್ಮಾಯಿಗೂ ಮನವಿ ಮಾಡಿದ್ದೇನೆ. ಈ ವರದಿ ಜಾರಿಯಾದಲ್ಲಿ ಅಲ್ಪಸಂಖ್ಯಾತರಿಗೆ ಸಿಗಬೇಕಾದ ಅಪರಿಮಿತ ಸೊತ್ತು ಮತ್ತೆ ಕೈಸೇರಲಿದೆ ಅನ್ನುವುದನ್ನು ಹೇಳಿದ್ದೇನೆ. ಅಲ್ಪಸಂಖ್ಯಾತರ ಪೈಕಿ 97 ಶೇಕಡಾ ಜನ ನನ್ನ ವರದಿಯನ್ನು ಒಪ್ಪಿದ್ದಾರೆ.
ವಕ್ಫ್ ಆಸ್ತಿಯನ್ನು ಕಬಳಿಸಿರುವ ಮಂದಿಯನ್ನು ಜೈಲಿಗಟ್ಟಬೇಕು. ಅಮಾನತ್ ಬ್ಯಾಂಕ್ ಹಗರಣ ಮಾಡಿರುವ ಮಂದಿಯನ್ನು ಬಂಧಿಸಬೇಕು. ಯಾರು ವಕ್ಫ್ ಮಂಡಳಿಯ ಸದಸ್ಯರು ಆರೋಪಿಗಳಿದ್ದಾರೋ ಅವರನ್ನು ಪತ್ತೆ ಮಾಡಬೇಕು ಎಂದು ಆಗ್ರಹಿಸಿದ್ದೇನೆ. ಆದರೆ ನಮ್ಮದೇ ಸರಕಾರ ನನ್ನ ಮನವಿಗೆ ಕಿವಿಗೊಟ್ಟಿಲ್ಲ. ಈ ಹಿಂದೆ ಸಂಘ ಪರಿವಾರದ ಮುಖಂಡರು ವರದಿಯ ಜಾರಿಗೆ ಹೇಳಿದ್ದರು. ಬಳಿಕ ಮಂಡನೆಯಾಗಿ ವಿಧಾನ ಪರಿಷತ್ತಿನಲ್ಲಿ ಅಂಗೀಕೃತ ಆಗಿದ್ದರೂ, ಆನಂತರ ವರದಿಯನ್ನು ಜಾರಿಗೊಳಿಸದೆ ಕೈಬಿಟ್ಟಿದ್ದಾರೆ. ಈಗ ವಕ್ಫ್ ಕಮಿಟಿ ಅಧ್ಯಕ್ಷರಾಗಿರುವ ಶಾಫಿ ಸಹದಿ ಅವರು ಬಿಜೆಪಿ ಸದಸ್ಯರಲ್ಲ. ಅವರ ವಿರುದ್ಧವೂ ಹೈಕೋರ್ಟಿನಲ್ಲಿ ಕೇಸು ದಾಖಲಿಸಿದ್ದೇನೆ. ವಕ್ಫ್ ಹಗರದಲ್ಲಿ ಅವರೂ ಒಬ್ಬ ಆರೋಪಿ. ಅಂಥ ವ್ಯಕ್ತಿಯನ್ನು ನೇಮಿಸಿದ್ದನ್ನು ಪ್ರಶ್ನಿಸಿ ರಾಜ್ಯದ ಮುಖ್ಯಮಂತ್ರಿ, ಕಾನೂನು ಸಚಿವ, ಅಡ್ವಕೇಟ್ ಜನರಲ್ ವಿರುದ್ಧವೂ ಕೇಸು ಹಾಕಿದ್ದೇನೆ.
ವಕ್ಫ್ ಬೋರ್ಡ್ ನಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. 5 ಸಾವಿರ ವಾಟರ್ ಫಿಲ್ಟರ್ ವಿತರಣೆ ನೆಪದಲ್ಲಿ 70 ಕೋಟಿ ಲೂಟಿ ಮಾಡಿದ್ದಾರೆ. ಅಲ್ಪಸಂಖ್ಯಾತರ ಹಾಸ್ಟೆಲ್ ಗಳಿಗೆ ವಾಷಿಂಗ್ ಮೆಶಿನ್ ಪೂರೈಕೆಯಲ್ಲಿ ಹೆಚ್ಚು ದರ ತೋರಿಸಿ 100 ಕೋಟಿ ಹಗರಣ ಮಾಡಿದ್ದಾರೆ. ಇವರೆಡು ಪ್ರಕರಣದಲ್ಲಿಯೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮಾಜಿ ಮುಖ್ಯ ಕಾರ್ಯದರ್ಶಿ ಎ.ಬಿ.ಇಬ್ರಾಹಿಂ ಶಾಮೀಲಾಗಿದ್ದಾರೆ. ಈಗ ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನವನ್ನು ಕಬಳಿಸಲು ನೋಡುತ್ತಿದ್ದಾರೆ. ವಕ್ಫ್ ಕಾಯ್ದೆಯಡಿ ನೋಂದಣಿಯಾಗಿರುವ ಆಸ್ತಿಯಾಗಿದ್ದು, ಅದರ ದಾಖಲೆಗಳು ನನ್ನಲ್ಲಿವೆ. 1966ರಲ್ಲಿ ಮೈಸೂರು ಸ್ಟೇಟ್ ವಕ್ಫ್ ಬೋರ್ಡ್ ಅಡಿ ನೋಂದಣಿಯಾಗಿದ್ದು, ಎರಡೂವರೆ ಎಕ್ರೆ ಜಾಗ ಸೆಂಟ್ರಲ್ ಮುಸ್ಲಿಂ ಅಸೋಸಿಯೇಶನ್ ಹೆಸರಲ್ಲಿದೆ. ಇದಲ್ಲದೆ, 1998ರಲ್ಲಿ ಸುಪ್ರೀಂ ಕೋರ್ಟ್ ವಕ್ಫ್ ಆಸ್ತಿ ಯಾವತ್ತಿದ್ದರೂ, ವಕ್ಫ್ ಆಸ್ತಿಯೇ. ಅದನ್ನು ಬದಲಿಸುವಂತಿಲ್ಲ ಎಂದಿದೆ. ಆದರೆ, ಈಗಿನ ರಾಜ್ಯ ಸರಕಾರ ಮೈಸೂರು ರಸ್ತೆಯ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನವನ್ನು ಕಬಳಿಸಲು ನೋಡುತ್ತಿದೆ.
ವರದಿ ತಪ್ಪಾಗಿದ್ದಲ್ಲಿ ತಲೆ ಕಡಿಯಿರಿ !
ವಕ್ಫ್ ಆಸ್ತಿಯನ್ನು ಸರಿಯಾಗಿ ನೋಡಿಕೊಂಡಲ್ಲಿ ವಾರ್ಷಿಕ 600 ಕೋಟಿ ಗಳಿಸಬಹುದು. ಬಹಳಷ್ಟು ಕಡೆ ವಕ್ಫ್ ಆಸ್ತಿಯನ್ನು 10 ರೂ, 20 ರೂ.ಗೆ ಬಾಡಿಗೆ ಕೊಡಲಾಗಿದೆ. ಅದನ್ನು ಸರಿಪಡಿಸಲು ವರದಿಯಲ್ಲಿ ಹೇಳಿದ್ದೇನೆ. ಎಲ್ಲಿ ಅತಿಕ್ರಮಣ ಆಗಿದೆಯೋ ಅದನ್ನು ಮತ್ತೆ ವಶಕ್ಕೆ ಪಡೆಯಲು ಸೂಚಿಸಿದ್ದೇನೆ. ನನ್ನ ವರದಿ ಏನಾದರೂ ತಪ್ಪಾಗಿದ್ದಲ್ಲಿ ನನ್ನ ತಲೆ ಕಡಿಯಲಿ, ರೆಡಿ ಇದ್ದೇನೆ ಎಂದರು ಮಾಣಿಪ್ಪಾಡಿ. ರಾಜ್ಯದಲ್ಲಿ ಮುಸ್ಲಿಮರ ಸಾಂವಿಧಾನಿಕ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ. ವಕ್ಫ್ ಆಸ್ತಿ ನಷ್ಟಗೊಂಡಲ್ಲಿ ಅಲ್ಪಸಂಖ್ಯಾತರು ಬಹಳಷ್ಟು ನಷ್ಟಕ್ಕೆ ಒಳಗಾಗಲಿದ್ದಾರೆ. ಬಪ್ಪನಾಡಿನಲ್ಲಿ ಎಲ್ಲರೂ ಒಟ್ಟಾಗಿ ವ್ಯಾಪಾರ ವ್ಯವಹಾರ ಮಾಡುತ್ತಿದ್ದರು. ಅಲ್ಲಿ ಜನರ ಒಗ್ಗಟ್ಟನ್ನು ಒಡೆದು ವೈಷಮ್ಯ ಬಿತ್ತಿದರು. ದಯವಿಟ್ಟು ಜನರನ್ನು ಎತ್ತಿಕಟ್ಟಿ ಕೋಮು ಗಲಭೆಗೆ ಆಸ್ಪದ ಕೊಡಬೇಡಿ. ಮುಸ್ಲಿಮರಿಗೆ ಮಾಡುತ್ತಿರುವ ಅಗೌರವ, ತಾರತಮ್ಯದ ಕಾರಣ ತೀವ್ರ ನೊಂದಿದ್ದೇನೆ, ಈ ಪರಿಸ್ಥಿತಿಯಲ್ಲಿ ಸರಕಾರಿ ಸೌಲಭ್ಯಗಳನ್ನು ಹೊಂದಿರುವುದಕ್ಕೆ ಅರ್ಥವಿಲ್ಲ ಎಂದು ಅನ್ವರ್ ಮಾಣಿಪ್ಪಾಡಿ ಹೇಳಿದರು.
ಪಕ್ಷ ಬಿಡುವ ಪ್ರಶ್ನೆಗೆ ವೈಟ್ ಅಂಡ್ ಸೀ ಎಂದ್ರು
ನೀವು ಪಕ್ಷದ ಒಳಗಿದ್ದುಕೊಂಡೇ ವಿರೋಧ ಮಾತನಾಡುತ್ತಿದ್ದೀರಿ, ಪಕ್ಷ ಬಿಡುತ್ತೀರಾ ಎಂಬ ಪ್ರಶ್ನೆಗೆ, ಆ ರೀತಿಯ ನಿರ್ಧಾರಕ್ಕೆ ಬಂದಿಲ್ಲ. ನನ್ನನ್ನು ಪಕ್ಷದಿಂದ ಹೊರಕ್ಕೆ ಹಾಕಿದರೆ, ಓಕೆ. ಮುಂದೆ ಏನ್ಮಾಡಬೇಕು ಎಂದು ಚಿಂತಿಸುತ್ತೇನೆ, ವೈಟ್ ಅಂಡ್ ಸೀ ಅಂತ ಚುಟುಕಾಗಿ ಹೇಳಿದರು. ನಿಮಗೆ ದ್ವೇಷ ಯಾಕೆ ಎಂದು ಕೇಳಿದ ಪ್ರಶ್ನೆಗೆ ವ್ಯಗ್ರರಾದ ಮಾಣಿಪ್ಪಾಡಿ, ನನಗೆ ದ್ವೇಷ, ಸಿಟ್ಟಾಗದೆ ಇರುತ್ತಾ.. ನಾನು ಕಷ್ಟಪಟ್ಟು ವಕ್ಫ್ ಆಸ್ತಿ ಉಳಿಸಲು ಪಣ ತೊಟ್ಟಿದ್ದೇನೆ. ಆದರೆ ವರದಿಯನ್ನು ಬದಿಗೆ ಸರಿಸಲು ವಿಜಯೇಂದ್ರ ಕೋಟಿ ಕೋಟಿ ವಹಿವಾಟು ನಡೆಸಲು ಬಂದಿದ್ದರು. ನಿಮಗೆಷ್ಟು ಕೋಟಿ ಬೇಕು ಎಂದು ನನ್ನಲ್ಲಿ ಕೇಳಿದ್ದರು. ಆದರೆ ನನ್ನ ಸಮುದಾಯದ ಪರವಾಗಿ ನಿಂತು ಭ್ರಷ್ಟಾಚಾರವನ್ನು ನಿರಾಕರಿಸಿದ್ದೇನೆ. ನಾನು ಎಲ್ಲವನ್ನೂ ಸಮಾಜಕ್ಕೆ ಬಿಡುತ್ತಿದ್ದೇನೆ ಎಂದು ಹೇಳಿದರು.
Senior BJP leader Anwar Manippady on Monday June 27, expressed concern over the ill treatment meted out towards minority community and demanded that they must be respected with all dignity, owing to the duties that they have been bestowed upon by the Constitution.He expressed that the recent happenings in the past few years has been distressing. He also claimed to have been attacked time and again.“We have been denied justice in spite of the constitution, nurturing our rights. Above all, Prime Minister’s magnificent concept of Sabka Sath and Sabka Vikas is indeed a revolutionary step towards an illustrious future. But this concept has not been initiated as yet.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm