ಬ್ರೇಕಿಂಗ್ ನ್ಯೂಸ್
27-06-22 10:25 pm Mangalore Correspondent ಕರಾವಳಿ
ಮಂಗಳೂರು, ಜೂನ್ 27: ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ನಂಬರ್ ವನ್ ಆದಾಯ ಬರುತ್ತಿರುವ ಕುಕ್ಕೆ ಸುಬ್ರಹ್ಮಣ್ಯ ಶಿವನ ದೇವಸ್ಥಾನವಾಗಿದ್ದರೂ, ಮಠದ ಅಧೀನದಲ್ಲಿರುವುದರಿಂದ ವೈಷ್ಣವ ತತ್ವ ಪಾಲನೆ ಮಾಡಲಾಗುತ್ತಿದೆ. ಈ ಬಗ್ಗೆ ರಾಜ್ಯ ಧಾರ್ಮಿಕ ಪರಿಷತ್ ಮತ್ತು ಮುಜರಾಯಿ ಇಲಾಖೆ ಆಯುಕ್ತರಿಗೆ ದೂರು ನೀಡಲಾಗಿದೆ. ಗರ್ಭಗುಡಿ ಒಳಗಿರುವ ಮೂಲ ಮಹಾಗಣಪತಿ ದೇವರಿಗೆ ಅಭಿಷೇಕ ಪೂಜೆಗಳು ನಡೆಯುತ್ತಿಲ್ಲ. ಪರಿವಾರ ದೇವರುಗಳಿಗೂ ತ್ರಿಕಾಲ ಪೂಜೆ ನಡೆಯುತ್ತಿಲ್ಲ. ಈ ಬಗ್ಗೆ ನಿರ್ಧರಿಸಬೇಕಾದ ರಾಜ್ಯ ಧಾರ್ಮಿಕ ಪರಿಷತ್ ಪೂರ್ತಿ ನಿಷ್ಕ್ರಿಯವಾಗಿದ್ದು, ಮುಜರಾಯಿ ಸಚಿವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಿತರಕ್ಷಣಾ ವೇದಿಕೆ ಆರೋಪಿಸಿದೆ.
ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿದ ವೇದಿಕೆಯ ಅಧ್ಯಕ್ಷ ಮಹೇಶ್ ಕುಮಾರ್ ಕೆ.ಎಸ್, ರಾಜ್ಯದ ಧಾರ್ಮಿಕ ಪರಿಷತ್ತಿಗೆ ಮುಜರಾಯಿ ಸಚಿವರು ಅಧ್ಯಕ್ಷರು. ಆದರೆ ಕಳೆದ ನವೆಂಬರ್ ಬಳಿಕ ಈವರೆಗೂ ರಾಜ್ಯ ಧಾರ್ಮಿಕ ಪರಿಷತ್ ಸಭೆಯನ್ನೇ ನಡೆಸಿಲ್ಲ. ಧಾರ್ಮಿಕ ಪರಿಷತ್ತಿನಲ್ಲಿ ದೇವಸ್ಥಾನಗಳ ಕುಂದು ಕೊರತೆ ಬಗ್ಗೆ ಅಹವಾಲು ಇರುತ್ತದೆ. ಅಲ್ಲಿ ಸಭೆಯನ್ನೇ ನಡೆಸದೇ ಇರುವಾಗ ಇದರ ಬಗ್ಗೆ ಚರ್ಚೆಯೇ ಆಗುವುದಿಲ್ಲ. ಏಳು ತಿಂಗಳಿಂದ ಧಾರ್ಮಿಕ ಪರಿಷತ್ ನಿಷ್ಕ್ರಿಯವಾಗಿದೆ ಎಂದು ಹೇಳಿದರು.
ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಕಾದಶಿ ದಿವಸ ಅನ್ನದಾನ ವ್ಯವಸ್ಥೆ ಮಾಡಬೇಕೆಂದು ಮನವಿ ಸಲ್ಲಿಸಿದ್ದೇವೆ. ದೂರದ ಊರುಗಳಿಂದ ಸಾವಿರಾರು ಜನರು ಬರುತ್ತಾರೆ. ಆದರೆ ಇಲ್ಲಿ ಏಕಾದಶಿ ನೆಪದಲ್ಲಿ ಭಕ್ತರಿಗೆ ಅನ್ನಪ್ರಸಾದ ನೀಡುವುದಿಲ್ಲ. ದೇವರಿಗೆ ನೈವೇದ್ಯ ನೀಡುತ್ತಾರೆ. ಆದರೆ, ಭಕ್ತರಿಗೆ ಅನ್ನ ನೀಡದಿರುವುದು ತಪ್ಪು. ಕೆಲವು ವೈಷ್ಣವ ದೇವಸ್ಥಾನಗಳಲ್ಲಿ ಇರುವಂತೆ ಏಕಾದಶಿಯಂದು ಅನ್ನದಾನ ಮಾಡದಿರುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಬದಲಿಗೆ ಉಪಹಾರ ಮಾಡಿದ್ದಾರೆ. ಸರ್ಪ ಸಂಸ್ಕಾರಕ್ಕಾಗಿ ಎಲ್ಲೋ ದೂರದಿಂದ ಬಂದಿರುತ್ತಾರೆ. ಏಕಾದಶಿ ವಿಷಯ ತಿಳಿಯದೆ ಅವರಿಗೆ ಕಷ್ಟ ಆಗುತ್ತದೆ. ಶಿವಾಂಶ ದೇವಸ್ಥಾನದಲ್ಲಿ ಏಕಾದಶಿ ವ್ಯವಸ್ಥೆಯ ಅಗತ್ಯವಿಲ್ಲ ಎಂದು ಮಹೇಶ್ ಕುಮಾರ್ ಹೇಳಿದರು.
ಕಳೆದ ಬಾರಿ ಧಾರ್ಮಿಕ ಪರಿಷತ್ ಸದಸ್ಯರು ವೈಷ್ಣವ ವಿಚಾರದಲ್ಲಿ ಮಾತನಾಡಿದ ಕಾರಣಕ್ಕೆ ಅವರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ, ದೂರು ನೀಡಲಾಗಿತ್ತು. ದೇವಸ್ಥಾನದ ಅರ್ಚಕರೇ ಮಠದವರ ಮಾತು ಕೇಳಿ ಈ ಆರೋಪ ಮಾಡಿದ್ದರು. ಮಿಥ್ಯಾರೋಪ ಹೊರಿಸಿದ ಅರ್ಚಕರ ವಿರುದ್ಧ ಕ್ರಮ ಜರುಗಿಸಬೇಕೆಂದು ಮುಜರಾಯಿ ಆಯುಕ್ತರಿಗೆ ದೂರು ನೀಡಿದ್ದೇವೆ. ಆ ಬಗ್ಗೆ ಇನ್ನೂ ನಿರ್ಣಯ ಪ್ರಕಟಿಸಿಲ್ಲ ಎಂದು ವೇದಿಕೆಯ ಕಾರ್ಯದರ್ಶಿ ಶ್ರೀನಾಥ್ ಟಿ.ಎಸ್ ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯ ಹಿಂದೆ ಶಿವಾಂಶ ದೇವಸ್ಥಾನ ಎನ್ನುವುದಕ್ಕೆ ಸರಕಾರಿ ದಾಖಲೆ ಇದೆ. 1923ರಲ್ಲಿ ಪ್ರಕಟಿತ ಗಜೆಟ್ ನಲ್ಲಿಯೂ ಉಲ್ಲೇಖ ಇದೆ. ಸುಬ್ರಹ್ಮಣ್ಯ ಮಠದವರು ಮಾಧ್ವ ಮತದ ಪ್ರೇರಣೆಯಿಂದ ವೈಷ್ಣವ ದೇವಸ್ಥಾನವಾಗಿ ರೂಪಿಸಿದ್ದಾರೆ. ಆದರೆ ಈ ಬಗ್ಗೆ ಕೋರ್ಟ್ ತೀರ್ಪು ನೀಡಿದ್ದು, ಶೈವ ಪದ್ಧತಿಯಲ್ಲೇ ಪೂಜೆ, ಪುನಸ್ಕಾರ ನಡೆಸಬೇಕೆಂದು ಹೇಳಿದೆ. ಹಾಗಿದ್ದರೂ ಅಲ್ಲಿನ ಅರ್ಚಕರು ನ್ಯಾಯಾಲಯದ ತೀರ್ಪನ್ನು ಪಾಲಿಸದೆ, ವೈಷ್ಣವ ಪದ್ಧತಿಯಲ್ಲಿ ಪೂಜೆ ನಡೆಸುತ್ತಾರೆ. ಗಣೇಶೋತ್ಸವ ದಿನವೂ ಅಲ್ಲಿನ ಮೂಲ ಮಹಾಗಣಪತಿಗೆ ಪೂಜೆ ಸಲ್ಲಿಸುವುದಿಲ್ಲ. ಶಿವರಾತ್ರಿಗೆ ಉತ್ಸವ ನಡೆಸುವುದಿಲ್ಲ ಎಂದು ಶ್ರೀನಾಥ್ ಹೇಳಿದರು.
Subramanya Temple Hitarakshana Samiti slams Muzrai Minister over defaults at the temple during a press meet held at Press Club in Mangalore.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm