ಬ್ರೇಕಿಂಗ್ ನ್ಯೂಸ್
28-06-22 10:42 am Mangalore Correspondent ಕರಾವಳಿ
ಮಂಗಳೂರು, ಜೂನ್ 28: ದಕ್ಷಿಣ ಕನ್ನಡ - ಕೊಡಗು ಗಡಿಭಾಗದಲ್ಲಿ ಮತ್ತೆ ಭೂಮಿ ಕಂಪಿಸಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ. ಸುಳ್ಯ ತಾಲೂಕಿನ ಸಂಪಾಜೆ, ಗುತ್ತಿಗಾರು, ಶಾಂತಿನಗರ ಭಾಗದಲ್ಲಿ ಮತ್ತೆ ಕಂಪನದ ಅನುಭವ ಆಗಿದೆ.
ಬೆಳಗ್ಗೆ 7.45ರ ಸುಮಾರಿಗೆ ಕೆಲಹೊತ್ತು ಭೂಮಿ ಅದುರಿದ ರೀತಿ ಕಂಪನದ ಅನುಭವ ಉಂಟಾಗಿದ್ದು ಜನರು ಆತಂಕಗೊಂಡು ಮನೆಯಿಂದ ಹೊರಗೋಡಿ ಬಂದಿದ್ದಾರೆ. ಮನೆಯಲ್ಲಿನ ಪಾತ್ರೆಗಳು, ಮನೆ ಮೇಲಿನ ಹಂಚು, ಶೀಟ್ ಗಳು ಅದುರಿದಂತೆ ಸದ್ದು ಮಾಡಿದೆ. ಬೈಕಿನಲ್ಲಿದ್ದವರು ಕುಳಿತಲ್ಲೇ ನೆಲ ಅದುರಿದ ಅನುಭವಕ್ಕೆ ಒಳಗಾಗಿದ್ದಾರೆ.

ಎರಡು ದಿನಗಳ ಹಿಂದೆ ಸುಳ್ಯ ತಾಲೂಕಿನ ಗಡಿಭಾಗ ಸಂಪಾಜೆ ಮತ್ತು ಇನ್ನಿತರ ಹಲವು ಕಡೆ ಬೆಳಗ್ಗೆ 9.10ರ ಸುಮಾರಿಗೆ ಕಂಪನ ಆಗಿತ್ತು. ಕೊಡಗಿನ ಹಲವೆಡೆಯೂ ಕಂಪನ ಉಂಟಾಗಿತ್ತು. ಇದೀಗ ಇಂದು ಬೆಳಗ್ಗೆ ಅದೇ ರೀತಿ ಏನೋ ವಿಚಿತ್ರ ಸದ್ದಿನೊಂದಿಗೆ ಭೂಕಂಪನ ಉಂಟಾಗಿದೆ. ಜನರಲ್ಲಿ ತೀವ್ರ ಆತಂಕ ಉಂಟಾಗಿದೆ. ಮನೆಯ ಎದುರಲ್ಲಿದ್ದ ಶೀಟ್ ಹನಿ ಮಳೆಯ ನಡುವೆ ಜರ್ರನೆ ಅದುರಿ ಸದ್ದು ಮಾಡಿದ್ದು ಸಂಪಾಜೆಯ ಮನೆಯೊಂದರ ಸಿಸಿಟಿವಿಯಲ್ಲಿ ದಾಖಲಾಗಿದೆ. ಭಾನುವಾರದ ಕಂಪನ ತೀವ್ರತೆ 2.3 ಇತ್ತು.
Once again the earth shook in the taluk at around 7.45 am on Tuesday June 28. People ran out of their houses in order to save their lives.
17-11-25 07:25 pm
Bangalore Correspondent
ಖರ್ಗೆ ಕೋಟೆಯಲ್ಲಿ ಆರೆಸ್ಸೆಸ್ ಸಂಚಲನ ; ಒಂದೂವರೆ ಕಿಮ...
16-11-25 09:15 pm
ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊ...
13-11-25 08:33 pm
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
17-11-25 10:58 pm
HK News Desk
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
ಉಮ್ರಾ ಯಾತ್ರೆ ತೆರಳಿದ್ದ ಹೈದ್ರಾಬಾದ್ ಮೂಲದ 45 ಯಾತ್...
17-11-25 06:13 pm
ರಾಜ್ಯದಲ್ಲಿ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ; ಸಿ...
15-11-25 11:12 pm
ದೆಹಲಿ ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮ...
15-11-25 07:09 pm
18-11-25 10:18 pm
Mangaluru Staff
UT Khader, Ullal, Mangalore Dc, Ashwini: ತನ್ನ...
18-11-25 07:03 pm
Mangalore case, Police, Inspector Balakrishna...
18-11-25 11:27 am
ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ...
17-11-25 06:16 pm
ದೇರಳಕಟ್ಟೆ ಕಾಲೇಜಿನ ಕೇರಳ ವಿದ್ಯಾರ್ಥಿ ನಾಪತ್ತೆ ; ಗ...
16-11-25 10:48 pm
18-11-25 09:09 pm
Mangaluru Staff
ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ; ಸ...
18-11-25 11:18 am
ದುಬಾರಿ ಪಾರ್ಸೆಲ್ ಇದೆ, ಕಸ್ಟಮ್ಸ್ ಸುಂಕ ಕಟ್ಟಲು ಹೇಳ...
17-11-25 12:54 pm
ಬೆಳಗಾವಿಯಲ್ಲಿ ಕುಳಿತು ಅಮೆರಿಕನ್ನರಿಗೆ ಗಾಳ ; ಆನ್ಲೈ...
14-11-25 05:32 pm
Ullal News, Animal Attack, Crime, Kumpala: ಕಣ...
14-11-25 11:16 am