ಕಂಠಪೂರ್ತಿ ಕುಡಿದು ಹೊಳೆಗೆ ಹಾರಿದ ಯುವ ವಿಜ್ಞಾನಿ ! 

30-09-20 10:30 pm       Mangaluru Correspondent   ಕರಾವಳಿ

ಕಂಠ ಪೂರ್ತಿ ಕುಡಿದು ಹೊಸಮಠ ಹೊಳೆಗೆ ಹಾರಿದ್ದಲ್ಲದೆ, ರಕ್ಷಣೆಗೆ ಬಂದ ಸ್ಥಳೀಯರೊಂದಿಗೆ ರಾದ್ಧಾಂತ ಎಬ್ಬಿಸಿದ ಘಟನೆ ಬುಧವಾರ ಸಂಜೆ ನಡೆದಿದೆ. 

ಪುತ್ತೂರು, ಸೆಪ್ಟಂಬರ್ 30: ರಬ್ಬರ್ ಸಂಶೋಧನಾ ಕೇಂದ್ರದ ವಿಜ್ಞಾನಿಯೊಬ್ಬರು ಕಂಠ ಪೂರ್ತಿ ಕುಡಿದು ಹೊಸಮಠ ಹೊಳೆಗೆ ಹಾರಿದ್ದಲ್ಲದೆ, ರಕ್ಷಣೆಗೆ ಬಂದ ಸ್ಥಳೀಯರೊಂದಿಗೆ ರಾದ್ಧಾಂತ ಎಬ್ಬಿಸಿದ ಘಟನೆ ಬುಧವಾರ ಸಂಜೆ ನಡೆದಿದೆ. 

ನದಿಗೆ ಹಾರಿದ ವಿಜ್ಞಾನಿಯನ್ನು ಸಾರ್ವಜನಿಕರು ನೀರಿನಿಂದ ಮೇಲೆತ್ತಿ ರಕ್ಷಣೆ ಮಾಡಿದ್ದಾರೆ. ಕಡಬ ಸಮೀಪದ ಹೊಸಮಠ ಸೇತುವೆ ಬಳಿಗೆ ಬೈಕಿನಲ್ಲಿ ಆಗಮಿಸಿದ್ದ ರವಿಚಂದ್ರ ಎಂಬ ತಮಿಳುನಾಡು ಮೂಲದ ವಿಜ್ಞಾನಿ, ಕುಡಿದ ಮತ್ತಿನಲ್ಲಿ ನದಿಗೆ ಹಾರಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಮತ್ತು ಇಬ್ಬರು ಮೆಸ್ಕಾಂ ಸಿಬ್ಬಂದಿಗಳು ನದಿಗೆ ಇಳಿದು ರಕ್ಷಣೆಗೆ ಮುಂದಾಗಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಕಡಬ ಎಸ್ಐ ರುಕ್ಮ ನಾಯ್ಕ್ ಮತ್ತು ಎಎಸ್ಐ ಸುರೇಶ್, ಸಿಬ್ಬಂದಿ ಕನಕರಾಜ್ ಸ್ಥಳೀಯರ ಜೊತೆ ಸೇರಿ ವಿಜ್ಞಾನಿಯನ್ನು ಹೊಳೆಯಿಂದ ಮೇಲೆಕೆತ್ತಲು ಯತ್ನಿಸಿದ್ದಾರೆ. 

ಆದರೆ ನದಿಯಿಂದ ಮೇಲಕ್ಕೆ ಎತ್ತಿದ ತಕ್ಷಣ ವಿಜ್ಞಾನಿ, ಸ್ಥಳದಲ್ಲಿ ದೊಡ್ಡ ರಾದ್ದಾಂತ ಸೃಷ್ಟಿಸಿದ್ದಾನೆ. ಕೊನೆಗೆ ಯುವಕನ ಕೈಕಾಲು ಕಟ್ಟಿ ಆಸ್ಪತ್ರೆಗೆ ತರಲಾಯಿತು. ರವಿಚಂದ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣ ಸ್ಪಂದಿಸಿದ ಕಡಬ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.