ಬ್ರೇಕಿಂಗ್ ನ್ಯೂಸ್
28-06-22 10:38 pm Mangalore Correspondent ಕರಾವಳಿ
ಮಂಗಳೂರು, ಜೂನ್ 28: ಉಳ್ಳಾಲ ಸಮುದ್ರದಲ್ಲಿ ಮುಳುಗಿರುವ ಸಿರಿಯಾ ಮೂಲದ ಸರಕು ಹಡಗಿನಿಂದ ತೈಲ ಸೋರಿಕೆಯಾಗಿರುವುದನ್ನು ಜಿಲ್ಲಾಡಳಿತ ಖಚಿತ ಪಡಿಸಿದೆ. ತೈಲ ಸೋರಿಕೆಯಾಗಿದ್ದು, ತೀರ ಪ್ರದೇಶದ ಮೀನುಗಾರರು ಜಾಗ್ರತೆ ವಹಿಸಬೇಕು. ಅಲ್ಲದೆ, ಉಳ್ಳಾಲ ಭಾಗದಲ್ಲಿ ಮೀನುಗಾರಿಕೆ ನಡೆಸಕೂಡದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ ನೀಡಿರುವ ಪ್ರಕಟಣೆಯ ಪ್ರಕಾರ ಹಡಗಿನ ಡರ್ಟಿ ವಾಟರ್ ಟ್ಯಾಂಕಿನಲ್ಲಿ ತೈಲ ಸೋರಿಕೆಯಾಗಿದೆ ಎನ್ನುವ ಮಾಹಿತಿ ಇದೆ. ಆದರೆ ಉಳ್ಳಾಲ ಪ್ರದೇಶದ ಮೀನುಗಾರರ ಪ್ರಕಾರ, ಎರಡು ದಿನಗಳ ಹಿಂದೆಯೇ ತೈಲ ಸೋರಿಕೆ ಆಗಿದ್ಯಂತೆ. ಗಾಳಿ ದಕ್ಷಿಣ ಕಡೆಗೆ ಇರುವುದರಿಂದ ಅದರ ವಾಸನೆಯು ಕೇರಳದ ಕಡೆಗೆ ಸಾಗುತ್ತಿದೆ. ಹೀಗಾಗಿ ಉಳ್ಳಾಲದಲ್ಲಿ ಅಷ್ಟರ ಮಟ್ಟಿಗೆ ವಾಸನೆ ಹರಡಿಲ್ಲ. ಬಟ್ಟಂಪಾಡಿ ಪ್ರದೇಶದಲ್ಲಿ ಮಾತ್ರ ತೈಲದ ವಾಸನೆ ಇದೆ. ಕಡಲಿನ ಅಬ್ಬರವೂ ಹೆಚ್ಚಿರುವುದರಿಂದ ಅದರ ಘಾಟು ಈಗ ತಿಳಿಯುತ್ತಿಲ್ಲ. ಇನ್ನೆರಡು ದಿನ ಹೋದಲ್ಲಿ ಉಳ್ಳಾಲದಲ್ಲಿ ಘಾಟು ಹೆಚ್ಚಲಿದೆ ಎಂದು ಅಲ್ಲಿನ ಮೀನುಗಾರರು ಹೇಳಿದ್ದಾರೆ.



ಸಿರಿಯಾ ಮೂಲದ ಸರಕು ಹಡಗು ವಾರದ ಹಿಂದೆ 5 ನಾಟಿಕಲ್ ಮೈಲು ದೂರದಲ್ಲಿ ದುರಂತಕ್ಕೀಡಾಗಿತ್ತು. ಆನಂತರ, ಗಾಳಿಗೆ ತೀರ ಸೇರಿದ್ದು, ಈಗ ಉಚ್ಚಿಲ ಬಟ್ಟಂಪಾಡಿ ಪ್ರದೇಶದಿಂದ ಒಂದು ನಾಟಿಕಲ್ ಮೈಲು ದೂರದಲ್ಲಿ ನೆಲದಲ್ಲಿ ಹೂತು ಬಿಟ್ಟಿದೆ. ಆದರೆ ಅದರ ತುದಿಯ ಭಾಗ ಮೇಲಕ್ಕೆ ಕಾಣುತ್ತಿದೆ. ಇದೇ ವೇಳೆ, ತೈಲ ಸೋರಿಕೆ ಆಗದಂತೆ ತಡೆಯಲು ಜಿಲ್ಲಾಡಳಿತದಿಂದ ಉಳ್ಳಾಲ ತೀರದಲ್ಲಿ ಕಸರತ್ತು ನಡೆದಿತ್ತು. ಕೋಸ್ಟ್ ಗಾರ್ಡ್ ಮತ್ತು ಇನ್ನಿತರ ಭದ್ರತಾ ಘಟಕಗಳು ತೀರ ಪ್ರದೇಶದಲ್ಲಿ ತೈಲು ಸೋರಿಕೆಯಾದರೆ ತೀರಕ್ಕೆ ಸಮಸ್ಯೆಯಾಗದಂತೆ ಹೇಗೆ ತಡೆಯಬೇಕು ಅನ್ನುವ ಬಗ್ಗೆ ಅಣಕು ಕಾರ್ಯಾಚರಣೆ ನಡೆಸಿದ್ದವು. ಈಗ ತೈಲ ಸೋರಿಕೆಯಾಗಿದ್ದು, ಸ್ಥಳದಲ್ಲಿ ಯಾವುದೇ ಅಧಿಕಾರಿ ತಂಡ ಕಂಡುಬಂದಿಲ್ಲ ಎಂದಿದ್ದಾರೆ ಸ್ಥಳೀಯರು.
Mangalore oil spill from the cargo ship, fishermen advised not to go for fishing. Indian Coast Guard has continued to monitor the situation around the grounded merchant ship MV Princess Miral of New Mangalore for any probable leakage of oil from the ship. The ship had sunk two days ago. The State administration along with other stakeholders is also coordinating for shore line cleanup in case of any oil spill.Constant surveillance has been undertaken by Coast Guard aircraft and ships in the area around the vessel and onshore for pollution response since June 21.
17-11-25 07:25 pm
Bangalore Correspondent
ಖರ್ಗೆ ಕೋಟೆಯಲ್ಲಿ ಆರೆಸ್ಸೆಸ್ ಸಂಚಲನ ; ಒಂದೂವರೆ ಕಿಮ...
16-11-25 09:15 pm
ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊ...
13-11-25 08:33 pm
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
17-11-25 10:58 pm
HK News Desk
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
ಉಮ್ರಾ ಯಾತ್ರೆ ತೆರಳಿದ್ದ ಹೈದ್ರಾಬಾದ್ ಮೂಲದ 45 ಯಾತ್...
17-11-25 06:13 pm
ರಾಜ್ಯದಲ್ಲಿ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ; ಸಿ...
15-11-25 11:12 pm
ದೆಹಲಿ ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮ...
15-11-25 07:09 pm
18-11-25 10:18 pm
Mangaluru Staff
UT Khader, Ullal, Mangalore Dc, Ashwini: ತನ್ನ...
18-11-25 07:03 pm
Mangalore case, Police, Inspector Balakrishna...
18-11-25 11:27 am
ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ...
17-11-25 06:16 pm
ದೇರಳಕಟ್ಟೆ ಕಾಲೇಜಿನ ಕೇರಳ ವಿದ್ಯಾರ್ಥಿ ನಾಪತ್ತೆ ; ಗ...
16-11-25 10:48 pm
18-11-25 09:09 pm
Mangaluru Staff
ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ; ಸ...
18-11-25 11:18 am
ದುಬಾರಿ ಪಾರ್ಸೆಲ್ ಇದೆ, ಕಸ್ಟಮ್ಸ್ ಸುಂಕ ಕಟ್ಟಲು ಹೇಳ...
17-11-25 12:54 pm
ಬೆಳಗಾವಿಯಲ್ಲಿ ಕುಳಿತು ಅಮೆರಿಕನ್ನರಿಗೆ ಗಾಳ ; ಆನ್ಲೈ...
14-11-25 05:32 pm
Ullal News, Animal Attack, Crime, Kumpala: ಕಣ...
14-11-25 11:16 am