ಶಿರಚ್ಛೇದ ಘಟನೆ ಭಯೋತ್ಪಾದಕ ಕೃತ್ಯ, ಐಸಿಸ್ ಮಾನಸಿಕತೆ ತಲೆ ಎತ್ತುತ್ತಿರುವುದಕ್ಕೆ ಸಾಕ್ಷಿ ; ನಳಿನ್ ಕುಮಾರ್ 

29-06-22 11:15 am       Mangalore Correspondent   ಕರಾವಳಿ

ರಾಜಸ್ಥಾನದ ಉದಯಪುರದಲ್ಲಿ ಹಿಂದು ಯುವಕನ ಶಿರಚ್ಛೇದ ಘಟನೆ ಮಾನವೀಯತೆಗೆ ಸವಾಲಾದ ಪ್ರಕರಣ. ಕೃತ್ಯದ ಹಿಂದೆ ವ್ಯವಸ್ಥಿತ ಸಂಚಿದೆ, ಭಯೋತ್ಪಾದಕ ಕೃತ್ಯ. ದೇಶದಲ್ಲಿ ಐಸಿಸ್, ತಾಲಿಬಾನ್ ಮಾನಸಿಕತೆ ತಲೆ ಎತ್ತುತ್ತಿರುವುದಕ್ಕೆ ಇದು ನಿದರ್ಶನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿ ಕಾರಿದ್ದಾರೆ.‌

ಮಂಗಳೂರು, ಜೂನ್ 29: ರಾಜಸ್ಥಾನದ ಉದಯಪುರದಲ್ಲಿ ಹಿಂದು ಯುವಕನ ಶಿರಚ್ಛೇದ ಘಟನೆ ಮಾನವೀಯತೆಗೆ ಸವಾಲಾದ ಪ್ರಕರಣ. ಕೃತ್ಯದ ಹಿಂದೆ ವ್ಯವಸ್ಥಿತ ಸಂಚಿದೆ, ಭಯೋತ್ಪಾದಕ ಕೃತ್ಯ. ದೇಶದಲ್ಲಿ ಐಸಿಸ್, ತಾಲಿಬಾನ್ ಮಾನಸಿಕತೆ ತಲೆ ಎತ್ತುತ್ತಿರುವುದಕ್ಕೆ ಇದು ನಿದರ್ಶನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿ ಕಾರಿದ್ದಾರೆ.‌

ಇದೇ ಮಾದರಿಯ ಹತ್ಯೆ ಶಿವಮೊಗ್ಗದಲ್ಲೂ ನಡೆದಿತ್ತು. ಹಿಂದು ಕಾರ್ಯಕರ್ತ ಹರ್ಷನ ಕತ್ತು ಕೊಯ್ದು ಅದರ ವಿಡಿಯೋವನ್ನು ಆತನ ಸೋದರಿಗೆ ಕಳಿಸಲಾಗಿತ್ತು.‌ ಅದನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸಿದ್ದು ಕಠಿಣ ಕ್ರಮ ಕೈಗೊಂಡಿದೆ. ನೂಪುರ್ ಶರ್ಮಾ ಹೇಳಿಕೆ ನಂತರ ದೇಶದಲ್ಲಿ ನಡೆದಂತಹ ಘಟನೆಗಳು, ಗಲಭೆಗಳ ಹಿಂದೆ ವಿದೇಶಿ ಶಕ್ತಿಗಳ ಕೈವಾಡ ಸ್ಪಷ್ಟವಾಗಿದೆ.‌ ರಾಜಸ್ಥಾನದಲ್ಲಿರುವ ಸರ್ಕಾರದ ತುಷ್ಟೀಕರಣ ನೀತಿ ಈ ಕೃತ್ಯಕ್ಕೆ, ಘಟನೆ ನಡೆಯಲು ಕಾರಣ. ಘಟನೆಯ ಕುರಿತು ಕಾಂಗ್ರೆಸ್ ಯಾಕೆ ಮೌನ ವಹಿಸಿದೆ.‌ ಚಿಕ್ಕ- ಚಿಕ್ಕ ವಿಷಯಕ್ಕೆ ರಸ್ತೆಗೆ ಬರುವ ಚಿಂತಕರು ಈಗ ಎಲ್ಲಿದ್ದಾರೆ.  ಇವರ ತುಷ್ಟೀಕರಣ ರಾಜನೀತಿ, ಇಂತಹ ಮಾನಸಿಕಕತೆ ಬೆಳೆಯಲು ಕಾರಣ. ದೇಶದಲ್ಲಿ ಜನರ ನಡುವೆ ಭಯ ಹುಟ್ಟಿಸುವ ತಂತ್ರ ಇದಾಗಿದೆ. ಮಾನವೀಯ ಗುಣಗಳಿಗೆ ಸವಾಲಾಗಿ ಪರಿಣಮಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇಂತಹ ಮಾನಸಿಕತೆಗಳಿಗೆ ಉತ್ತರ ಪ್ರದೇಶದ ಯೋಗಿ ಮಾದರಿ ನಿರ್ಧಾರಗಳ ಅವಶ್ಯಕತೆ ಇದೆ.‌ ತಕ್ಷಣ ಕಠಿಣ ಕ್ರಮ ಜರುಗಿಸಬೇಕು, ಕೇಂದ್ರ ಸರ್ಕಾರ ಎನ್ ಐಎ ಕಳುಹಿಸಿದೆ. ಏನು ಮಾಡಬೇಕೋ ಅದನ್ನು ಮಾಡಲಿದ್ದಾರೆ.‌ ದೇಶದಲ್ಲಿ ನಿರಂತರ ಗಲಭೆ ಸೃಷ್ಟಿಸಲು, ಹತ್ಯೆ ಮಾಡಿ ಸಮಾಜ ಒಡೆಯುವ ಹುನ್ನಾರ ಇದರ ಹಿಂದಿದೆ. ಜಿಹಾದಿ ಹೆಸರಿನಲ್ಲಿ ಇಂತಹ ಕೃತ್ಯಗಳನ್ನು ಮಾಡಲಾಗ್ತಿದೆ. ಕಾಶ್ಮೀರದಲ್ಲಿ ಹಿಂದೆ ನಡೆದ ಘಟನೆಗಳು ‌ಹೊರಗಡೆ ಬರ್ತಿವೆ. ನರೇಂದ್ರ ಮೋದಿ ಸರ್ಕಾರ ಇದನ್ನ ಸಹಿಸಲ್ಲ, ತಡೆ ಹಾಕುತ್ತೆ.‌ ಈ ರೀತಿಯ ಘಟನೆಗಳನ್ನು ಅಲ್ಲಲ್ಲೇ ನಿಯಂತ್ರಿಸುವ ಕೆಲಸ ಆಗಬೇಕು.‌ ಕ್ರೂರಿ ಮಾನಸಿಕತೆಗಳಿಗೆ ಭಯದ ವಾತಾವರಣ ಸೃಷ್ಟಿಸಬೇಕು. ಅಂಥಹ ವಾತಾವರಣವನ್ನ ನಮ್ಮ ರಾಜ್ಯ ಸರ್ಕಾರವೂ ಮಾಡಲಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

Hindu Man Beheaded In Udaipur shows the mindset of ISIS slams Nalin Kumar Kateel in Mangalore. A man has been beheaded and killed in Rajasthan for a social media post supportive of former Bharatiya Janata Party spokesperson Nupur Sharma in the ongoing controversy over “blasphemy” of Islam’s founder.