ಬ್ರೇಕಿಂಗ್ ನ್ಯೂಸ್
29-06-22 10:09 pm Mangalore Correspondent ಕರಾವಳಿ
ಮಂಗಳೂರು, ಜೂನ್ 29 : ದೇಶದಲ್ಲಿ ಮುಸಲ್ಮಾನರಿಗೆ ಕೊಡುವ ಮದರಸ ಶಿಕ್ಷಣದಿಂದಲೇ ಕೇಡುಂಟಾಗುತ್ತಿದೆ. ಮದರಸದಲ್ಲಿ ನೀಡುವಂತಹ ಶಿಕ್ಷಣದಿಂದಾಗಿ ದೇಶದಲ್ಲಿ ಈ ಬೆಳವಣಿಗೆ ಆಗುತ್ತಿದೆ. ಹಾಗಾಗಿ, ದೇಶದಲ್ಲಿ ಮದರಸ ಶಿಕ್ಷಣಕ್ಕೆ ನಿರ್ಬಂಧ ಹೇರಿ, ಬ್ಯಾನ್ ಮಾಡಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸುವುದಾಗಿ ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದ್ದಾರೆ.
ಉದಯಪುರದ ಯುವಕನ ಶಿರಚ್ಛೇದ ಘಟನೆಯನ್ನು ಖಂಡಿಸಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಜರಂಗದಳ, ವಿಹಿಂಪ ವತಿಯಿಂದ ಪ್ರತಿಭಟನೆ ನಡೆಯಿತು. ದೇಶದಲ್ಲಿ ಸಾಕಷ್ಟು ಹಿಂದುಗಳ ಹತ್ಯೆ ಆಗಿದೆ, ಕರ್ನಾಟಕದಲ್ಲೂ ಆಗಿದೆ, ನಿನ್ನೆ ರಾಜಸ್ಥಾನದಲ್ಲಿ ಆಗಿರುವ ಹತ್ಯೆಯನ್ನು ಮಾತ್ರ ನಮ್ಮ ಜೀವಮಾನದಲ್ಲಿ ನೋಡಿಲ್ಲ. ಮಾಂಸ ಕಡಿಯುವ ಕತ್ತಿಯಿಂದ ಹತ್ಯೆ ಮಾಡಿ, ವಿಡಿಯೋ ಮಾಡಿದ್ದು ಅಲ್ಲದೇ, ನೂಪೂರ್ ಶರ್ಮಾಳ ಪರವಾಗಿ ವಿಡಿಯೋ ಹಾಕಿದ್ದಕ್ಕೆ ಮಾಡಿದ್ದು ಅಂತಾ ಸಮರ್ಥನೆ ಮಾಡಿಕೊಂಡಿದ್ದಾರೆ.

ದೇಶದಲ್ಲಿ ಕೆಲವೆಡೆ ಮುಸಲ್ಮಾನರು ಶಾಂತಿದೂತರು ಎಂದು ಹೇಳಿಕೊಳ್ಳುತ್ತಾರೆ. ಜಾತ್ಯತೀತ ನೆಪದಲ್ಲಿ ಅವರನ್ನು ಸಮರ್ಥನೆ ಮಾಡುತ್ತಾರೆ. ನಮ್ಮನ್ನು ಟೆರರಿಸ್ಟ್ ಅಂತಾ ಕರೀತಾರೆ, ನಾವು ಅಂಬೇಡ್ಕರ್ ಸಂವಿಧಾನ ಪಾಲಿಸುವುದು ಎಂದು ಸಾರಿ ಸಾರಿ ಹೇಳುತ್ತಾರೆ. ಆದರೆ ಇವರು ಮಾಡುತ್ತಿರುವ ಕೃತ್ಯಗಳೇ ಇವರೆಷ್ಟು ಕ್ರೂರಿ ಎಂದು ತೋರಿಸುತ್ತದೆ. ದೇಶದಲ್ಲಿ ನಡೆಯುವ ಅಶಾಂತಿಗೆ ಇಸ್ಲಾಂ ಕಾರಣ ಎಂದೇ ನಾವು ಹೇಳುತ್ತೇವೆ, ಇಸ್ಲಾಂ ಶಾಂತಿಯ ಸಂಕೇತವಲ್ಲ. ಇಸ್ಲಾಂ ಹಿಂದುಗಳ ಹತ್ಯೆಗೆ ಹುಟ್ಟಿರುವುದು, ಈ ದೇಶದ ನಾಶಕ್ಕೆ ಹುಟ್ಟಿರುವಂತದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉದಯಪುರದ ಹತ್ಯೆ ಒಬ್ಬ ಹಿಂದುವಿನಿಂದ ಮುಸಲ್ಮಾನನ ಹತ್ಯೆ ಆಗಿರುತ್ತಿದ್ದರೆ ದೇಶದಲ್ಲಿ ಇವತ್ತು ಬೆಂಕಿ ಬೀಳುತ್ತಾ ಇತ್ತು. ಆದರೆ ಇವತ್ತು ಹಿಂದು ಸತ್ತಾಗ ಏನೊಂದೂ ನಡೆಯಲೇ ಇಲ್ಲ, ರಸ್ತೆ ಬದಿ ನಿಂತು ಪ್ರತಿಭಟಿಸುತ್ತಾ ಇದ್ದೇವೆ. ನಾವು ಯಾವುದಾದರೂ ವಿರುದ್ಧ ಧ್ವನಿ ಎತ್ತಿದರೆ, ನಾವು ಅಂಬೇಡ್ಕರ್ ವಿರುದ್ಧ, ಸಂವಿಧಾನದ ವಿರುದ್ಧ ಅಂತಾ ಹೇಳುತ್ತಾರೆ.

ಹಾಗೆ ನೋಡಿದರೆ ಇವತ್ತು ದೇಶದಲ್ಲಿ ಬೆಂಕಿ ಬೀಳಬೇಕಿತ್ತು, ಇವತ್ತು ಹಿಂದುಗಳ ಕೈ ಕಟ್ಟಿ ಹಾಕಿದ್ದು ಇದೇ ಸಂವಿಧಾನ, ಕಾನೂನು, ಪ್ರಜಾಪ್ರಭುತ್ವ. ಈ ಸಂವಿಧಾನದ ನಿಯಮಗಳು ಇಲ್ಲಿನ ಮುಸಲ್ಮಾನರಿಗೆ ಇಲ್ಲ. ಇವರು ಪೊಲೀಸರ ಮೇಲೆ ಹಲ್ಲೆ ಮಾಡುತ್ತಾರೆ, ದೇವಸ್ಥಾನಕ್ಕೆ ಹಾನಿ ಮಾಡುತ್ತಾರೆ, ಇದನ್ನು ಯಾರು ಪ್ರಶ್ನೆ ಮಾಡುವ ಹಾಗೇ ಇಲ್ಲ. ಇದಕ್ಕಾಗಿ ನಾವು ನಮ್ಮ ಸಾಧು ಸಂತರಿಗೆ, ಸ್ವಾಮೀಜಿಗಳಿಗೆ ಹೇಳುತ್ತಾ ಇದ್ದೇವೆ, ಸ್ವಾಮಿ ವಿವೇಕಾನಂದರ ರೀತಿ ಹಿಂದುಗಳಿಗೆ ಕರೆ ಕೊಡಿ, ತಾಯಂದಿರು ಮಕ್ಕಳಿಗೆ ಹೇಳಬೇಕು, ಛತ್ರಪತಿ ಶಿವಾಜಿಗೆ ಹೇಳಿದ ಹಾಗೇ ಎಲ್ಲರೂ ರಸ್ತೆಗೆ ಇಳಿಯಿರಿ, ಹೋರಾಟ ಮಾಡಿ. ಈ ಘಟನೆಯನ್ನು ಖಂಡಿಸಿ ಎಂದು ಶರಣ್ ಪಂಪ್ವೆಲ್ ಕರೆ ನೀಡಿದರು.
ಅಲ್ಲದೆ, ಇವರಿಗೆ ಹಿಂಸೆಯಿಂದ ಉತ್ತರ ಬೇಕೆಂದರೆ, ತಲವಾರಿನಿಂದಲೇ ಉತ್ತರ ಬೇಕೆಂದರೆ ಅದೇ ರೀತಿಯ ಉತ್ತರ ಕೊಡುವ ಅನಿವಾರ್ಯತೆ ಎದುರಾಗಿದೆ ಎನ್ನುವುದನ್ನು ಕಾರ್ಯಕರ್ತರಿಗೆ ಹೇಳಬಯಸುತ್ತೇನೆ. ನಾಳೆಯಿಂದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಇದೇ ರೀತಿ ಪ್ರತಿಭಟನೆ ನಡೆಸಲಾಗುವುದು ಎಂದು ಶರಣ್ ಪಂಪ್ವೆಲ್ ಹೇಳಿದ್ದಾರೆ.
Madrasa should be banned in India says VHP Sharan Pumpwell in Mangalore after Udaipur Beheading. They also had a protest burning the images of accused. Kanhaiya Lal, a tailor was gruesomely murdered in a broad daylight by two men on Tuesday. The murderers later posted a video on social media where they claimed that they are avenging an insult to Islam, indirectly referring to the remarks against Prophet made by suspended BJP leader Nupur Sharma.
17-11-25 07:25 pm
Bangalore Correspondent
ಖರ್ಗೆ ಕೋಟೆಯಲ್ಲಿ ಆರೆಸ್ಸೆಸ್ ಸಂಚಲನ ; ಒಂದೂವರೆ ಕಿಮ...
16-11-25 09:15 pm
ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊ...
13-11-25 08:33 pm
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
17-11-25 10:58 pm
HK News Desk
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
ಉಮ್ರಾ ಯಾತ್ರೆ ತೆರಳಿದ್ದ ಹೈದ್ರಾಬಾದ್ ಮೂಲದ 45 ಯಾತ್...
17-11-25 06:13 pm
ರಾಜ್ಯದಲ್ಲಿ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ; ಸಿ...
15-11-25 11:12 pm
ದೆಹಲಿ ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮ...
15-11-25 07:09 pm
18-11-25 10:18 pm
Mangaluru Staff
UT Khader, Ullal, Mangalore Dc, Ashwini: ತನ್ನ...
18-11-25 07:03 pm
Mangalore case, Police, Inspector Balakrishna...
18-11-25 11:27 am
ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ...
17-11-25 06:16 pm
ದೇರಳಕಟ್ಟೆ ಕಾಲೇಜಿನ ಕೇರಳ ವಿದ್ಯಾರ್ಥಿ ನಾಪತ್ತೆ ; ಗ...
16-11-25 10:48 pm
18-11-25 09:09 pm
Mangaluru Staff
ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ; ಸ...
18-11-25 11:18 am
ದುಬಾರಿ ಪಾರ್ಸೆಲ್ ಇದೆ, ಕಸ್ಟಮ್ಸ್ ಸುಂಕ ಕಟ್ಟಲು ಹೇಳ...
17-11-25 12:54 pm
ಬೆಳಗಾವಿಯಲ್ಲಿ ಕುಳಿತು ಅಮೆರಿಕನ್ನರಿಗೆ ಗಾಳ ; ಆನ್ಲೈ...
14-11-25 05:32 pm
Ullal News, Animal Attack, Crime, Kumpala: ಕಣ...
14-11-25 11:16 am