ಬ್ರೇಕಿಂಗ್ ನ್ಯೂಸ್
04-07-22 06:31 pm Mangalore Correspondent ಕರಾವಳಿ
ಮಂಗಳೂರು, ಜುಲೈ 4: ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗಾಗಿ ಕಾರ್ಯಾಚರಣೆ ನಡೆಸಬೇಕೆಂಬ ಗೃಹ ಸಚಿವರ ಸೂಚನೆ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಅಲರ್ಟ್ ಆಗಿದ್ದಾರೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ವಿವಿಧ ಮಾದರಿಗಳಲ್ಲಿ ಕೆಲಸ ಮಾಡುತ್ತಿರುವ 4 ಸಾವಿರಕ್ಕೂ ಹೆಚ್ಚು ಉತ್ತರ ಭಾರತೀಯರೆಂದು ಹೇಳಿಕೊಂಡಿದ್ದ ಕಾರ್ಮಿಕರನ್ನು ಪತ್ತೆ ಮಾಡಿ ಅವರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಈ ಪೈಕಿ ಸೂಕ್ತ ದಾಖಲಾತಿ ಇಲ್ಲದ 518 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ನಗರದ ರೊಸಾರಿಯೋ ಶಾಲಾ ಸಭಾಂಗಣದಲ್ಲಿ ಸೋಮವಾರ 518 ಮಂದಿಯನ್ನು ಕೂಡಿಹಾಕಲಾಗಿತ್ತು. ಪ್ರತೀ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಲಸ ಮಾಡಿಸುವ ಗುತ್ತಿಗೆದಾರರು, ಕೈಗಾರಿಕೆ ಸಂಕೀರ್ಣಗಳನ್ನು ಭೇಟಿಯಾಗಿ ಪೊಲೀಸರು ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮಾಹಿತಿ ಸಂಗ್ರಹ ಮಾಡಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಒರಿಸ್ಸಾ ಎಂದು ಹೇಳಿಕೊಂಡು ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಗುರಿಯಾಗಿಸಿ ಅವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿದ್ದು, ಆ ಪೈಕಿ 518 ಮಂದಿಯನ್ನು ವಶಕ್ಕೆ ಪಡೆದು ಮಂಗಳೂರಿನ ಸಭಾಂಗಣದಲ್ಲಿ ಕೂಡಿಹಾಕಲಾಗಿತ್ತು. ಅವರಲ್ಲಿ ಸೂಕ್ತ ದಾಖಲಾತಿ ಇಲ್ಲದ ಕಾರಣಕ್ಕೆ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರತಿಯೊಬ್ಬರಿಂದ ತಲಾ 20 ಪ್ರಶ್ನಾವಳಿಗಳನ್ನು ಮುಂದಿಟ್ಟು ಉತ್ತರ ಪಡೆಯಲಾಗುತ್ತಿದೆ. ವಿಳಾಸ ದಾಖಲೆ, ಊರು, ಕೆಲಸ ಮಾಡುವ ಸಂಸ್ಥೆ, ಉಳಿದುಕೊಂಡ ಜಾಗದ ಬಗ್ಗೆ ಮಾಹಿತಿ, ಮೊಬೈಲ್ ನಂಬರ್, ಸಂಬಂಧಿಕರ ನಂಬರ್ ಹೀಗೆ ಸುಮಾರು 20 ಪ್ರಶ್ನೆಗಳನ್ನು ರೆಡಿ ಮಾಡಿದ್ದು ಅವರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸೂಕ್ತವಾಗಿ ಸ್ಪಂದಿಸದ ಕಾರಣಕ್ಕೆ ಅವರನ್ನು ವಶಕ್ಕೆ ಪಡೆದು ಸೂಕ್ತ ದಾಖಲಾತಿ ನೀಡುವಂತೆ ಸೂಚನೆ ನೀಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಶಶಿಕುಮಾರ್, ಎಲ್ಲರ ಬ್ಯಾಂಕ್ ಮಾಹಿತಿ, ಮೊಬೈಲ್ ಸಂಖ್ಯೆ ಇನ್ನಿತರ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ಒಂದು ವರ್ಷದ ಮೊಬೈಲ್ ಸಿಡಿಆರ್ ತೆಗೆದು ಚೆಕ್ ಮಾಡುತ್ತೀವಿ. ಬಾಂಗ್ಲಾದೇಶದ ಇತರೇ ವ್ಯಕ್ತಿಗಳ ಜೊತೆ ಸಂಪರ್ಕದಲ್ಲಿದ್ದಾರೆಯೇ ಅಥವಾ ಇನ್ನಾವುದೇ ಸಂಶಯಾಸ್ಪದ ವ್ಯಕ್ತಿಗಳ ಜೊತೆ ಸಂಪರ್ಕದಲ್ಲಿದ್ದಾರೆಯೇ, ವಿದೇಶಕ್ಕೆ ಕರೆ ಮಾಡಿದ್ದಾರೆಯೇ ಎಂಬ ಬಗ್ಗೆ ತಪಾಸಣೆ ನಡೆಸಲಾಗುವುದು. ಅವರ ದಾಖಲೆ ಪತ್ರಗಳ ಬಗ್ಗೆಯೂ ನಕಲಿಯೇ, ಅಸಲಿಯೇ ಅನ್ನುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಬ್ಯಾಂಕ್ ಖಾತೆಯಲ್ಲಿ ಸಂಶಯಾಸ್ಪದ ನೆಲೆಯಲ್ಲಿ ಹಣಕಾಸು ವರ್ಗಾವಣೆ ಆಗಿದೆಯೇ ಎಂಬ ಬಗ್ಗೆಯೂ ತನಿಖೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವಾರದ ಹಿಂದೆ ಮಂಗಳೂರಿಗೆ ಬಂದಿದ್ದ ಗೃಹ ಸಚಿವರು, ಅಕ್ರಮ ವಲಸಿಗರ ಬಗ್ಗೆ ಒಂದು ವಾರದೊಳಗೆ ತನಿಖೆ ನಡೆಸಿ ರಿಪೋರ್ಟ್ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು. ಅದರಂತೆ, 18 ಪೊಲೀಸ್ ತಂಡಗಳನ್ನು ರಚಿಸಿ ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ವಿದೇಶಿಗರ ಪತ್ತೆಗೆ ಡ್ರಿಲ್ ಆರಂಭಗೊಂಡಿತ್ತು. ಇದೀಗ, 518 ಮಂದಿಯನ್ನು ವಶಕ್ಕೆ ಪಡೆದು ಸೂಕ್ತ ದಾಖಲಾತಿ ಪತ್ರಗಳನ್ನು ಹಿಡಿದು ತರುವಂತೆ ಒತ್ತಡ ಹೇರಲಾಗಿದೆ. ದಾಖಲೆ ಪತ್ರಗಳನ್ನು ತೋರಿಸಿದಲ್ಲಿ ಮಾತ್ರ ಅವರನ್ನು ಹಿಂದಕ್ಕೆ ಬಿಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕರಾವಳಿಯಲ್ಲಿ ಕಾರ್ಮಿಕರ ಸೋಗಿನಲ್ಲಿ ಬಾಂಗ್ಲನ್ನರು
ಕರಾವಳಿಯಲ್ಲಿ ಹಿಂದಿನಿಂದಲೂ ಉಗ್ರರು ಅಡಗಿಕೊಂಡಿದ್ದಾರೆ, ಉಗ್ರರ ಸ್ಲೀಪರ್ ಸೆಲ್ ಎಂಬ ಹಣೆಪಟ್ಟಿ ಇದೆ. ಅಲ್ಲದೆ, ಬಾಂಗ್ಲಾದೇಶ ಮೂಲದ ಪ್ರಜೆಗಳು ಇಲ್ಲಿ ಕಾರ್ಮಿಕರಾಗಿ ತೊಡಗಿಸಿಕೊಂಡಿದ್ದಾರೆ ಎನ್ನುವ ಮಾಹಿತಿಗಳಿದ್ದವು. ಆದರೆ, ಈ ಬಗ್ಗೆ ದೊಡ್ಡ ಮಟ್ಟದ ಪೊಲೀಸ್ ಕಾರ್ಯಾಚರಣೆ ಈತನಕ ನಡೆದಿಲ್ಲ. ದಕ್ಷಿಣ ಕನ್ನಡ ಮತ್ತು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಅತಿ ಹೆಚ್ಚು ಬಾಂಗ್ಲಾ ದೇಶದ ಪ್ರಜೆಗಳು ಕಟ್ಟಡ ನಿರ್ಮಾಣ, ಮರದ ಮಿಲ್ ಗಳಲ್ಲಿ ಕೆಲಸದಲ್ಲಿ ತೊಡಗಿಸಿದ್ದಾರೆಂಬ ಅನುಮಾನ ಇದೆ. ಹೆಚ್ಚಿನವರು ತಾವು ಪಶ್ಚಿಮ ಬಂಗಾಳದವರೆಂದು ಹೇಳಿಕೊಂಡು ಕಾರ್ಮಿಕರಾಗಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಡುಪ್ಲಿಕೇಟ್ ಐಡಿ ಕಾರ್ಡನ್ನೂ ಮಾಡಿಕೊಂಡಿರುತ್ತಾರೆ. ವರ್ಷದ ಹಿಂದೆ ಮಂಗಳೂರಿನ ಹೆಸರಾಂತ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಮಣ್ಣು ಕುಸಿದು ಮೃತಪಟ್ಟ ಇಬ್ಬರು ಕಾರ್ಮಿಕರ ಖಚಿತ ವಿವರಗಳು ದೊರಕಿರಲಿಲ್ಲ. ಪಶ್ಚಿಮ ಬಂಗಾಳ ಎಂದಷ್ಟೇ ಮಾಹಿತಿ ಇತ್ತು. ಮೃತರನ್ನು ಬಾಂಗ್ಲಾ ಪ್ರಜೆಗಳು ಎಂದು ಹೇಳಲಾಗಿತ್ತು.
The verification process of tracking illegal immigrants was held at Rosario Hall on Monday July 4.In the last one week Mangaluru police have been conducting a drive to identify illegal immigrants.On Monday, the final verification of suspicious individuals or individuals who have not given all the needed details was conducted although it is not necessary that all are illegal immigrants.Speaking to media, police commissioner N Shashi Kumar said, “The home minister during his visit to Mangaluru directed the police to keep a track on illegal immigrants.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm