ಬ್ರೇಕಿಂಗ್ ನ್ಯೂಸ್
07-07-22 10:34 am Mangalore Correspondent ಕರಾವಳಿ
ಬಂಟ್ವಾಳ, ಜುಲೈ 7: ಮನೆ ಮೇಲೆ ಗುಡ್ಡ ಕುಸಿದ ಪ್ರಕರಣದಲ್ಲಿ ಮತ್ತಿಬ್ಬರು ಸಾವನ್ನಪ್ಪಿದ್ದು ಮೃತರ ಸಂಖ್ಯೆ ಮೂರಕ್ಕೇರಿದೆ. ಬಂಟ್ವಾಳದ ವಗ್ಗ ಬಳಿಯ ಪಂಜಿಕಲ್ಲು ಎಂಬಲ್ಲಿ ಬುಧವಾರ ಸಂಜೆ ಘಟನೆ ನಡೆದಿತ್ತು.
ಹೆನ್ರಿ ಕಾರ್ಲೊ ಎಂಬವರ ರಬ್ಬರ್ ತೋಟಕ್ಕೆ ಟ್ಯಾಪಿಂಗ್ ಕೆಲಸಕ್ಕೆಂದು ಐವರು ಕಾರ್ಮಿಕರು ಬಂದಿದ್ದರು. ತೋಟದ ಪಕ್ಕದಲ್ಲೇ ಶೆಡ್ ರೀತಿ ಮನೆ ಮಾಡಿಕೊಂಡಿದ್ದು ಸಂಜೆ ಸುರಿದ ಮಳೆಗೆ ಇವರಿದ್ದ ಮನೆಯ ಮೇಲೆ ಮಣ್ಣು , ಕಲ್ಲು ಕುಸಿದು ಬಿದ್ದಿದೆ. ಈ ವೇಳೆ, ಅಖಿಲ್ ಎಂಬ ಒಬ್ಬಾತ ಮನೆಯ ಹೊರಗಿದ್ದರಿಂದ ಬಚಾವಾಗಿದ್ದಾನೆ.


ಸಂಜೆ ಏಳು ಗಂಟೆ ಸುಮಾರಿಗೆ ಘಟನೆ ನಡೆದಿದ್ದು ಈ ವೇಳೆ ಮನೆಯ ಒಳಗಿದ್ದ ನಾಲ್ವರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದರು. ಒಬ್ಬ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನಿಬ್ಬರು ಕಾರ್ಮಿಕರು ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾರೆ. ಮೃತರನ್ನು ಬಿಜು ಪಾಲಕ್ಕಾಡ್(45), ಸಂತೋಷ್ ಆಲಪ್ಪುಳ(46), ಬಾಬು ಕೊಟ್ಟಾಯಂ (46) ಎಂದು ಗುರುತಿಸಲಾಗಿದೆ.

ಬಿಜು ಮೃತದೇಹ ಮೊದಲು ಪತ್ತೆಯಾಗಿತ್ತು. ಆಬಳಿಕ ಬಾಬು ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಕಂಡುಬಂದಿದ್ದರು. ಸಂತೋಷ್ ಟಾಯ್ಲೆಟ್ ಒಳಗಡೆ ಪತ್ತೆಯಾಗಿದ್ದು ರಾತ್ರಿ 11 ಗಂಟೆ ವೇಳೆಗೆ ಹೊರಗೆಳೆದು ತರಲಾಗಿತ್ತು. ಉಸಿರು ಕಟ್ಟಿದ್ದರಿಂದ ಚಿಂತಾಜನಕ ಸ್ಥಿತಿಯಲ್ಲಿದ್ದರು. ರಾತ್ರಿಯೇ ಮಂಗಳೂರಿನ ಆಸ್ಪತ್ರೆಗೆ ಕರೆತರಲಾಗಿತ್ತು. ತಲೆಯ ಭಾಗಕ್ಕೆ ಪೆಟ್ಟು ಬಿದ್ದಿದ್ದ ಸಂತೋಷ್ ಮತ್ತು ಬಾಬು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಭಾರೀ ಮಳೆಗೆ ವಗ್ಗದಲ್ಲಿ ಗುಡ್ಡ ಕುಸಿತ ; ಶೆಡ್ ನೆಲಸಮ, ಓರ್ವ ಕಾರ್ಮಿಕ ಸಾವು
The rubber tapping labourers of Kerala origin got stuck under a pile of mud as a hill collapsed on the shed where they were residing on the night of Wednesday, July 6. While three died, one person is rescued and undergoing treatment at a hospital.
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 10:57 am
HK News Staffer
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm