ಬ್ರೇಕಿಂಗ್ ನ್ಯೂಸ್
07-07-22 01:26 pm Mangalore Correspondent ಕರಾವಳಿ
ಮಂಗಳೂರು, ಜುಲೈ 7: ನೂಪುರ್ ಶರ್ಮಾ ಇಸ್ಲಾಂ ಬಗ್ಗೆ ಸತ್ಯ ಹೇಳಿದರೆ ತಪ್ಪಾಗುತ್ತದೆಯೇ ? ಝಾಕಿರ್ ನಾಯ್ಕ್, ಮುಲ್ಲಾಗಳು ಅದೇ ಮಾತನ್ನು ಹೇಳಿದರೆ ತಪ್ಪಾಗುವುದಿಲ್ಲ. ಒಬ್ಬ ಹಿಂದು ಎನ್ನುವ ಕಾರಣಕ್ಕೆ ನೂಪುರ್ ಶರ್ಮಾ ಹೇಳಿದ್ದು ತಪ್ಪು ಎನ್ನುತ್ತಿದ್ದೀರಾ.. ಬಿಜೆಪಿ ನಾಯಕರು ಆಕೆಯನ್ನು ಸಮರ್ಥಿಸುವುದು ಬಿಟ್ಟು ಪಕ್ಷದಿಂದ ತೆಗೆದು ಹಾಕಿ ದೊಡ್ಡ ತಪ್ಪು ಮಾಡಿದ್ದಾರೆ ಎಂದು ಹಿಂದು ಮಹಾಸಭಾ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ವೇಳೆ ಈ ಬಗ್ಗೆ ಪ್ರಶ್ನೆ ಮಾಡಿದ ಧರ್ಮೇಂದ್ರ, ನೂಪುರ್ ಶರ್ಮಾ ಯಾವ ತಪ್ಪು ಮಾಡಿದ್ದಾರೆ, ಆಕೆಯ ಯಾವ ಮಾತುಗಳು ಬಿಜೆಪಿಯವರಿಗೆ ತಪ್ಪಾಗಿ ಕಂಡಿವೆ. ಬಿಜೆಪಿಯವರು ಆಕೆಯ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ಏನು ತಪ್ಪು ಹೇಳಿಕೆ ನೀಡಿದ್ದಾರೆಂದು ಸ್ಪಷ್ಟ ಪಡಿಸಬೇಕಿತ್ತು. ಇವರು ಮುಸ್ಲಿಂ ತುಷ್ಟೀಕರಣಕ್ಕಾಗಿ ಆಕೆಯನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ. ಬಿಜೆಪಿ ನಾಯಕರಿಗೆ ಹಿಂದುತ್ವ ಅನ್ನುವುದು ಕೇವಲ ಅಧಿಕಾರಕ್ಕೇರಲು ಮಾತ್ರ. ಹಿಂದುಗಳ ಶ್ರೇಯಸ್ಸು ಅವರಿಗೆ ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತ ಹರ್ಷನ ಕೊಲೆ ಮಾಡಿದವರಿಗೆ ಇವರದೇ ಸರಕಾರದಲ್ಲಿ ಜೈಲಿನಲ್ಲಿ ರಾಜಾತಿಥ್ಯ ಸಿಗ್ತಾ ಇದೆ. ಒವೈಸಿ ಹಿಂದುಗಳ ವಿರುದ್ಧ ಏನೇ ಹೇಳಿಕೆ ಕೊಟ್ಟರೂ, ಕ್ರಮ ಕೈಗೊಳ್ಳುವುದಿಲ್ಲ. ಹಿಂದು ಮುಖಂಡರು ಯಾವುದೇ ವಿಚಾರ ಕೈಗೆತ್ತಿಕೊಂಡರೂ ಕಾನೂನು ನೆಪ ಹೇಳಿ ಕ್ರಮ ಜರುಗಿಸುತ್ತಾರೆ. ಹಿಂದು- ಮುಸ್ಲಿಮರಿಗೆ ಈ ದೇಶದಲ್ಲಿ ಬೇರೆ ಬೇರೆ ಕಾನೂನು ಇದೆಯೇ.. ಹಿಂದುಗಳು ಕೈಯಲ್ಲಾಗದವರಲ್ಲ ನೆನಪಿಟ್ಟುಕೊಳ್ಳಿ. ಈ ದೇಶದ ಹಿಂದುಗಳು ಕಾನೂನು, ಸಂವಿಧಾನಕ್ಕೆ ಬೆಲೆ ಕೊಟ್ಟಿದ್ದಾರೆ. ನಾವು ನಮ್ಮನ್ನು ರಕ್ಷಣೆ ಮಾಡಿಕೊಳ್ಳಲು ತಯಾರಿದ್ದೇವೆ. ಬಿಜೆಪಿಯ ಯಾವುದೇ ಹಿಂದುತ್ವದ ಬ್ರಾಂಡ್ ನಮಗೆ ಬೇಕಾಗಿಲ್ಲ ಎಂದು ಹೇಳಿದ ಧರ್ಮೇಂದ್ರ, ಹಿಂದುತ್ವದ ಹೆಸರೇಳಿ ರಾಜಕೀಯ ಮಾಡಿದವರನ್ನು ಮುಗಿಸಿ ಹಾಕುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆಯನ್ನು ಕೆಳಗಿಳಿಸಿದ್ದು ಯಾಕೆ.. ಚುನಾವಣೆ ಸಂದರ್ಭದಲ್ಲಿಯೇ ಠಾಕ್ರೆ ಎರಡೂವರೆ ವರ್ಷ ಸಿಎಂ ಹಂಚಿಕೆ ಮಾಡುವ ಪ್ರಸ್ತಾಪ ಮಾಡಿದ್ದರು. ನೀವು ಯಾಕೆ ಬಿಟ್ಟು ಕೊಟ್ಟಿಲ್ಲ. ಈಗ ಹಿಂದುತ್ವದ ರಾಜಕಾರಣ ಮಾಡುವ ಶಿವಸೇನೆಯನ್ನು ಮುಗಿಸಲು ಹನ್ನಾರ ನಡೆಸುತ್ತಿದ್ದಾರೆ. ಇವರಿಗೆ ಬೇರೆ ಯಾರೂ ಹಿಂದುತ್ವದ ಹೆಸರಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದರು.
ಪ್ರತಿ ಮನೆಯಲ್ಲಿ ಘರ್ ಘರ್ ಭಗವಾ
ಇದೇ ವೇಳೆ, ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಹಿಂದು ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್, ಮುಂದಿನ ಬಿಬಿಎಂಪಿ, ಜಿಪಂ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ರಾಷ್ಟ್ರೀಯ ಹಿಂದು ಪಕ್ಷವಾಗಿ ಹಿಂದು ಮಹಾಸಭಾ ಸ್ಪರ್ಧೆ ಮಾಡಲಿದೆ. ಅದಕ್ಕಾಗಿ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಆಗಸ್ಟ್ 14ರ ದಿನವನ್ನು ನಾವು 75ನೇ ವರ್ಷದ ಸಂಕಟ ದಿವಸವನ್ನಾಗಿ ಆಚರಿಸುತ್ತೇವೆ. ಅದರ
ಅಂಗವಾಗಿ ಅಂದು ಪ್ರತಿ ಹಿಂದು ಮನೆಯಲ್ಲಿ ಘರ್ ಘರ್ ಭಗವಾ ಹೆಸರಲ್ಲಿ ಕೇಸರಿ ಧ್ವಜ ಹಾರಿಸಲು ಕರೆ ನೀಡಲಾಗಿದೆ ಎಂದು ಹೇಳಿದರು.
ಈ ದೇಶದಲ್ಲಿ ಸತ್ಯ ಹೇಳುವುದೇ ಅಪರಾಧವಾದರೆ, ಮುಂದಿನ ದಿನಗಳಲ್ಲಿ ಹಿಂದುಗಳ ಬದುಕು ದುಸ್ತರವಾಗಲಿದೆ. ಆತಂಕದಲ್ಲಿ ಬದುಕಬೇಕಾಗುತ್ತದೆ. ಅದಕ್ಕಾಗಿ ಹಿಂದು ರಾಷ್ಟ್ರದ ಸ್ಥಾಪನೆ ಹಾಗೂ ರಾಜಕೀಯವನ್ನು ಹಿಂದುತ್ವಗೊಳಿಸುವುದೇ ಉತ್ತರ ಎಂದ ರಾಜೇಶ್ ಪವಿತ್ರನ್, ಭಗವಾಧ್ವಜವನ್ನು ಬಿಜೆಪಿ, ಸಂಘ ಪರಿವಾರಕ್ಕೆ ಪೇಟೆಂಟ್ ಕೊಟ್ಟಿಲ್ಲ. ಎಸ್ಡಿಪಿಐ ಜೊತೆಗೆ ಸಂಬಂಧ ಇಟ್ಟುಕೊಂಡವರದ್ದು ಯಾವ ಹಿಂದುತ್ವ. ಹಿಂದುಗಳನ್ನು ಕೊಂದಿರುವ ಕೃತ್ಯದಲ್ಲಿ ಹೆಚ್ಚಿನ ಕಡೆ ಬಿಜೆಪಿ ಅಲ್ಪಸಂಖ್ಯಾತ ಘಟಕದ ಕಾರ್ಯಕರ್ತರೇ ಆರೋಪಿಗಳಿದ್ದಾರೆ. ಕನ್ನಯ್ಯಲಾಲ್ ಹತ್ಯೆ ಆರೋಪಿಯೂ ಅಲ್ಪಸಂಖ್ಯಾತ ಘಟಕದ ಕಾರ್ಯಕರ್ತ. ಎಸ್ಡಿಪಿಐ ಅನ್ನೋದು ಬಿಜೆಪಿಯದ್ದೇ ಕೂಸು, ತತ್ವ ಸಿದ್ಧಾಂತ ಬಲಿಕೊಟ್ಟು ಅವರ ಜೊತೆ ಸೇರಿ ಅಧಿಕಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
If Zakir Naik comments it's not wrong but only if Nupur Sharma comments it's a issue slams Hindu Maha sabha in Mangalore.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm