ಬ್ರೇಕಿಂಗ್ ನ್ಯೂಸ್
09-07-22 10:37 am Mangalore Correspondent ಕರಾವಳಿ
ಮಂಗಳೂರು, ಜುಲೈ 8: ಪಿಎಸ್ಐ ನೇಮಕಾತಿ ಹಗರಣದಲ್ಲಿ ನೇರವಾಗಿ ರಾಜ್ಯ ಸರಕಾರವೇ ಶಾಮೀಲಾತಿ ಹೊಂದಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಕಾಂಗ್ರೆಸ್ ಆರಂಭದಲ್ಲಿಯೇ ದೊಡ್ಡ ಮಟ್ಟದ ಹಗರಣ ಆಗಿರುವ ಬಗ್ಗೆ ಶಂಕೆ ಪಟ್ಟಿತ್ತು. ಆದರೆ ಬಿಜೆಪಿ ನಾಯಕರು ಏನೂ ಆಗಿಲ್ಲ ಎಂಬಂತೆ ಹೇಳಿಕೆ ನೀಡುತ್ತಿದ್ದರು. ಈಗ ಹೈಕೋರ್ಟ್ ಛಾಟಿ ಬೀಸಿದ ಬಳಿಕ ಇಲಾಖೆಯ ಮುಖ್ಯಸ್ಥರಾಗಿದ್ದ ಪೊಲೀಸ್ ಅಧಿಕಾರಿಯನ್ನು ಬಂಧಿಸಿದ್ದಾರೆ. ಹಗರಣದಲ್ಲಿ ದೊಡ್ಡ ಮಟ್ಟದ ಅಧಿಕಾರಿಗಳನ್ನು ಬಂಧಿಸಲು ಹೈಕೋರ್ಟ್ ನ್ಯಾಯಾಧೀಶರು ಹೇಳಬೇಕಿತ್ತೇ ಎಂದು ಮಾಜಿ ಸಚಿವ, ವಿಪಕ್ಷ ಉಪ ನಾಯಕ ಯುಟಿ ಖಾದರ್ ಪ್ರಶ್ನೆ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಯುಟಿ ಖಾದರ್, ಸಾವಿರಾರು ಯುವಕರು ಪಿಎಸ್ಐ ಪರೀಕ್ಷೆಯನ್ನು ಬರೆದಿದ್ದಾರೆ. ಉದ್ಯೋಗದ ನಿರೀಕ್ಷೆಯಲ್ಲಿದ್ದರು. ಆದರೆ, ಇವರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನಂತಹ ಮಹತ್ವದ ಹುದ್ದೆಯ ನೇಮಕಾತಿಯಲ್ಲೇ ಹಗರಣ ನಡೆಸಿದ್ದಾರೆ. ಈ ಬಗ್ಗೆ ಅಭ್ಯರ್ಥಿಗಳು ತನಿಖೆ ನಡೆಸಬೇಕೆಂದು ದೂರು ಕೊಟ್ಟಾಗ, ಹಾಗೇನೂ ಆಗಿಲ್ಲ ಎಂದೇ ಗೃಹ ಸಚಿವರು ವಾದಿಸಿದ್ದರು. ವಿಧಾನಸಭೆಯಲ್ಲಿ ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡಿದಾಗಲೂ, ಹಗರಣ ಆಗಿಯೇ ಇಲ್ಲ ಎಂದಿದ್ದರು. ಈಗ ನಿಧಾನಕ್ಕೆ ಹಗರಣದ ಅಸಲಿಯತ್ತು ಹೊರಗೆ ಬರುತ್ತಿದೆ. ಆದರೆ, ಇಲಾಖೆಯ ಮುಖ್ಯಸ್ಥರನ್ನು ಬಂಧಿಸುವುದಕ್ಕೆ ಹೈಕೋರ್ಟ್ ನ್ಯಾಯಾಧೀಶರು ಹೇಳಬೇಕಾಗಿ ಬಂದಿದ್ದು ಏನನ್ನು ಸೂಚಿಸುತ್ತದೆ. ಇವರು ಯಾರನ್ನು ರಕ್ಷಿಸಲು ನೋಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಹೈಕೋರ್ಟ್ ನ್ಯಾಯಾಧೀಶರು ರಾಜ್ಯ ಸರಕಾರಕ್ಕೆ ಛೀಮಾರಿ ಹಾಕಿದ ಬಳಿಕ ನೇಮಕಾತಿ ವಿಭಾಗದ ಮುಖ್ಯಸ್ಥರನ್ನು ಬಂಧಿಸಿದ್ದಾರೆ. ಆನಂತರ ನ್ಯಾಯಾಧೀಶರೇ ತಮಗೆ ವರ್ಗಾವಣೆ ಬೆದರಿಕೆ ಬಂದಿದೆ ಎನ್ನುವ ರೀತಿ ಮಾತನಾಡಿದ್ದಾರೆ. ನ್ಯಾಯಾಧೀಶರಿಗೇ ಈ ಸ್ಥಿತಿಯಾದರೆ, ರಾಜ್ಯದ ಸಾಮಾನ್ಯ ಜನರ ಪಾಡೇನು. ವರ್ಗಾವಣೆ ಬೆದರಿಕೆ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ತನಿಖೆಗೆ ಆದೇಶಿಸಬೇಕು ಎಂದು ಯುಟಿ ಖಾದರ್ ಆಗ್ರಹ ಮಾಡಿದ್ದಾರೆ. ಪಿಎಸ್ಐ ಹಗರಣದಲ್ಲಿ ನೈಜಾಂಶ ಬಯಲಿಗೆಳೆಯಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನ್ಯಾಯಾಧೀಶರು ಹೇಳಬೇಕಿತ್ತೇ.. ಹಗರಣದಲ್ಲಿ ಇಡೀ ರಾಜ್ಯ ಸರಕಾರವೇ ಶಾಮೀಲಾಗಿರುವುದನ್ನು ಇದು ತೋರಿಸುತ್ತದೆ. ಈಗಲೂ ಹಗರಣದಲ್ಲಿ ಪಾಲ್ಗೊಂಡ ದೊಡ್ಡವರ ರಕ್ಷಣೆಗೆ ಸರಕಾರ ಟೊಂಕ ಕಟ್ಟಿ ನಿಂತಿದೆ ಎಂದು ಖಾದರ್ ಆರೋಪಿಸಿದರು.

ಕಂದಾಯ ಸಚಿವರಿಂದ ಏನೂ ಮಾಡಕ್ಕಾಗಲ್ಲ !
ಕಂದಾಯ ಸಚಿವ ಆರ್.ಅಶೋಕ್, 60 ವರ್ಷಗಳಲ್ಲಿ ಕಾಂಗ್ರೆಸ್ ಕಡಲ್ಕೊರೆತದ ಬಗ್ಗೆ ಏನು ಮಾಡಿದೆ ಎಂದು ಕೇಳಿದ್ದ ಪ್ರಶ್ನೆಗೆ ತಿರುಗೇಟು ನೀಡಿದ ಯುಟಿ ಖಾದರ್, ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುವ ಬದಲು ಬಿಜೆಪಿ ಸರಕಾರ ಈಗೇನು ಮಾಡುತ್ತಿದೆ ಅನ್ನುವುದನ್ನು ಹೇಳಲಿ. ರಾಜ್ಯದ ಬಂದರು ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಇಬ್ಬರೂ ಕರಾವಳಿಯವರು. ಮಳೆ ಹಾನಿ, ಕಡಲ್ಕೊರೆತದ ಸಮಸ್ಯೆ ತಿಳಿಯಲು ಇವರು ಕಂದಾಯ ಸಚಿವರ ಜೊತೆ ಬರಬೇಕೇ.. ಕಡಲ್ಕೊರೆತದ ವಿಚಾರದಲ್ಲಿ ಕಂದಾಯ ಸಚಿವರಿಗೆ ಏನೂ ಮಾಡಕ್ಕೆ ಬರುವುದಿಲ್ಲ. ಅದು ಬಂದರು ಸಚಿವರ ವ್ಯಾಪ್ತಿಗೆ ಬರುತ್ತದೆ. ಸ್ಥಳೀಯ ಜನರಿಗಾಗಿ, ಮೀನುಗಾರರಿಗಾಗಿ ಕಡಲ್ಕೊರೆತಕ್ಕೆ ಶಾಶ್ವತ ಕಾಮಗಾರಿಯ ಬಗ್ಗೆ ಚಿಂತನೆ ನಡೆಸಬೇಕು. ಸಮಸ್ಯೆ ಅರ್ಥ ಮಾಡಿಕೊಂಡು ಪರಿಹಾರ ಕ್ರಮ ಕೈಗೊಳ್ಳಬೇಕೆ ಹೊರತು ರಾಜಕೀಯ ಮಾತನಾಡಿದರೆ ಪ್ರಯೋಜನ ಇಲ್ಲ ಎಂದರು.

ಕಾಂಗ್ರೆಸ್ ಸರಕಾರ ಇದ್ದಾಗ ಎಡಿಬಿ ಯೋಜನೆಯಡಿ ಉಳ್ಳಾಲದ ಕೈಕೋ, ಕೋಡಿ, ಕೋಟೆಪುರ, ಮೊಗವೀರಪಟ್ಣ, ಸುಭಾಸ್ ನಗರದಲ್ಲಿ ಶಾಶ್ವತ ಕಾಮಗಾರಿ ಕೈಗೊಂಡಿತ್ತು. ಹೀಗಾಗಿ ಏಳೆಂಟು ವರ್ಷಗಳಲ್ಲಿ ಆ ಭಾಗದಲ್ಲಿ ಸಮಸ್ಯೆ ಆಗಿಲ್ಲ. ಕಾಮಗಾರಿಯನ್ನು ಸರಿಯಾಗಿ ನಿರ್ವಹಿಸದಿದ್ದಲ್ಲಿ ಮೂರ್ನಾಲ್ಕು ವರ್ಷದಲ್ಲಿ ಈ ಭಾಗದಲ್ಲೂ ಸಮಸ್ಯೆಯಾಗುತ್ತದೆ ಎಂದರು.
PSI recruitment entire BJP state government is involved in the scam slams UT Khader in Mangaluru. The Congress leaders had said that there is a scam in PSI recruitment. We have claimed that the government is protecting senior officials. After the high court slammed the government, a senior IPS officer was arrested. This is a complete failure of the BJP-led state government in probing the case. The case should be investigated in the right manner, " said MLA U T Khader.
11-02-26 11:02 pm
HK News Desk
Breast Cancer Awareness Drive Goes Nationwide...
11-02-26 01:34 pm
ಸ್ತನ ಕ್ಯಾನ್ಸರ್ ಬಗ್ಗೆ ದೇಶವ್ಯಾಪಿ ಜಾಗೃತಿ ; ಕಲಬರಗ...
11-02-26 01:09 pm
ಛೆ… ಇವಳೆಂಥ ಮಗಳು! ಅಮ್ಮನ ಖಾಸಗಿ ಅಂಗ, ದೊಡ್ಡಮ್ಮನ ಬ...
09-02-26 07:20 pm
ಶಿವಮೊಗ್ಗದ ಕಾರು ಚಾಲಕನಲ್ಲಿ 19 ಬಾಡಿಗೆ ಬ್ಯಾಂಕ್ ಖಾ...
09-02-26 01:30 pm
12-02-26 10:51 pm
HK News Desk
ನಕಲಿ ಷೇರು ಹೂಡಿಕೆ ಆ್ಯಪ್ ಹೆಸರಲ್ಲಿ ದುಪ್ಪಟ್ಟು ಲಾಭ...
12-02-26 09:31 pm
ಅಮೆರಿಕದಲ್ಲಿ ಪೊಲೀಸ್ ಅಧಿಕಾರಿ ಕಾರು ಗುದ್ದಿ ಭಾರತೀಯ...
12-02-26 09:19 pm
260 ಜನರನ್ನು ಬಲಿ ಪಡೆದ ಅಹಮದಾಬಾದ್ ವಿಮಾನ ಪತನ ; ಇಂ...
12-02-26 01:40 pm
ಡಿಕೆ - ಸಿದ್ದು ಪವರ್ ಫೈಟ್ ; ‘ರಾಜಕಾರಣ ಮಾಡೋಕೆ ಬಂದ...
12-02-26 01:09 pm
13-02-26 01:06 am
HK News Desk
ಮೋದಿ ಹೆಸರಲ್ಲಿ ಹತ್ತು ನಮೋ ಕುಟೀರ ನಿರ್ಮಾಣ ಯೋಜನೆ ;...
12-02-26 10:36 pm
ಲವ್ ಜಿಹಾದ್ ಆರೋಪ ; ಸುರತ್ಕಲ್ ಲೇಡಿಸ್ ಪಿಜಿಯಲ್ಲಿ ಹ...
12-02-26 05:55 pm
ಕೈಗಾರಿಕೆಗಳ ಮಾಲಿನ್ಯ ತಡೆಯಲು ಅಧಿಕಾರಿಗಳು ವಿಫಲ ; ವ...
12-02-26 04:05 pm
ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ದಿಢೀರ್ ಬೆಂಕಿ ; ರ...
12-02-26 03:38 pm
13-02-26 12:54 am
HK News Desk
ವಿಷದ ಲಡ್ಡು ತಿನ್ನಿಸಿ 6 ಜನರ ಹತ್ಯೆ ; ದೆಹಲಿಯಲ್ಲಿ...
12-02-26 02:34 pm
ಫ್ಲ್ಯಾಟ್, ಚಿನ್ನದ ನೆಪದಲ್ಲಿ ಮುಂಬೈನ ಮಹಿಳಾ ಉದ್ಯಮಿ...
11-02-26 10:54 pm
ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ಬೆಲೆಯ ಜಮೀನು ಗುಳು...
11-02-26 09:10 pm
ಸಚಿವ ಬೈರತಿ ಸುರೇಶ್ ಕಚೇರಿಯಲ್ಲೇ 300 ಗ್ರಾಂ ಚಿನ್ನಾ...
10-02-26 09:05 pm