ಬ್ರೇಕಿಂಗ್ ನ್ಯೂಸ್
09-07-22 10:26 pm Mangalore Correspondent ಕರಾವಳಿ
ಉಳ್ಳಾಲ, ಜು.9 : ಐಟಿಐ ಕಲಿಯಬೇಕಿದ್ದ ಮಗ, ಏಳನೇ ತರಗತಿಯಲ್ಲಿ ಓದಬೇಕಿದ್ದ ಮಗಳು. ಇಬ್ಬರು ಮಕ್ಕಳೂ ಕಿಡ್ನಿ ವೈಫಲ್ಯಗೊಂಡು ಆಸ್ಪತ್ರೆಯ ಐಸಿಯು ಘಟಕದಲ್ಲಿ ನರಳುತ್ತಿರುವುದನ್ನ ನೋಡುವ ಹೆತ್ತ ತಾಯಿಯ ನೋವು ದೇವರಿಗೇ ಪ್ರೀತಿ ಎಂಬಂತಿದೆ.
ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಐಸಿಯು ಘಟಕದಲ್ಲಿ ಕಿಡ್ನಿ ವೈಫಲ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಬ್ಬರ ಅಶಕ್ತ ತಾಯಿಯೊಬ್ಬಳ ಕರುಣಾಜನಕ ಕಥೆ ಇದು. ಅಮಿತ ಮತ್ತು ಶೇಖರ್ ದಂಪತಿಯ ಪ್ರಥಮ ಪುತ್ರ ಅಭಿಷೇಕ್(16) ಕಳೆದ ವರುಷ ಎಸ್ಎಸ್ಎಲ್ ಸಿ ಮುಗಿಸಿ ವಿಟ್ಲದ ಕಾಲೇಜೊಂದರಲ್ಲಿ ITI ಸೇರಿದ್ದು ತರಗತಿಗೆ ತೆರಳಿದ್ದ ಮರು ದಿವಸವೇ ಆತನಿಗೆ ಜ್ವರ ಕಾಣಿಸಿತ್ತು. ಮಂಗಳೂರಿನ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ರಕ್ತಹೀನತೆ ಇದ್ದು ಕಿಡ್ನಿ ವೈಫಲ್ಯ ಆದ ಬಗ್ಗೆ ವೈದ್ಯರು ತಿಳಿಸಿದ್ದರು. ಕೂಡಲೇ ಆತನಿಗೆ ಡಯಾಲಿಸಿಸ್ ಚಿಕಿತ್ಸೆ ಆರಂಭಿಸಲಾಗಿತ್ತು. ಕಳೆದ ಎಂಟು ತಿಂಗಳಿಂದ ಅಭಿಷೇಕ್ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದು ಹಾಸಿಗೆ ಹಿಡಿದಿದ್ದಾನೆ.
ನಾಲ್ಕು ತಿಂಗಳ ಹಿಂದಷ್ಟೆ ಆರನೇ ತರಗತಿ ಮುಗಿಸಿದ್ದ ಅಮಿತ ಅವರ ಎರಡನೇ ಮಗಳು ಐಶ್ವರ್ಯಳಿಗೂ ಜ್ವರ ಬಂದಿದ್ದು ತಪಾಸಣೆ ನಡೆಸಿದ ವೈದ್ಯರು ರಕ್ತಹೀನತೆಯಿಂದಾಗಿ ಆಕೆಯ ಕಿಡ್ನಿಯೂ ವೈಫಲ್ಯಗೊಂಡಿರುವ ಬಗ್ಗೆ ತಿಳಿಸಿದ್ದರು. ಅಮಿತ ಅವರು ಗೃಹಿಣಿಯಾಗಿದ್ದು ಪತಿ ಶೇಖರ್ ಅವರು ಪುತ್ತೂರಿನ ಬೀದಿ ಬದಿಯಲ್ಲಿ ಬಟ್ಟೆ ಮಾರುವ ಕಾಯಕ ನಡೆಸುತ್ತಿದ್ದಾರೆ. ಕಲ್ಲಡ್ಕ ಮೂಲದ ಪರಿಶಿಷ್ಟ ಜಾತಿಗೆ ಸೇರಿರುವ ಈ ಕುಟುಂಬ ಸದ್ಯ ಪುತ್ತೂರಿನ ಕಬಕದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದೆ.

ಅಭಿಷೇಕ್ ಮತ್ತು ಐಶ್ವರ್ಯ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಮಕ್ಕಳಿಗೂ ಡಯಾಲಿಸಿಸ್ ಚಿಕಿತ್ಸೆಗೆ ತಿಂಗಳಿಗೆ ತಲಾ 25,000 ರೂಪಾಯಿ ಖರ್ಚು ತಗಲುತ್ತಿದೆ. ಆದಷ್ಟು ಬೇಗನೆ ಕಿಡ್ನಿ ಕಸಿ ಮಾಡುವಂತೆಯೂ ವೈದ್ಯರು ಸಲಹೆ ನೀಡಿದ್ದಾರಂತೆ. ಡಯಾಲಿಸಿಸ್ ಚಿಕಿತ್ಸೆ ನೀಡುವುದಕ್ಕೇ ಚಡಪಡಿಸುತ್ತಿರುವ ಅಶಕ್ತ ಕುಟಂಬವು ಕಿಡ್ನಿ ಕಸಿ ಮಾಡುವುದಾದರೂ ಹೇಗೆ..?
ಅರಳುವ ಮೊಗ್ಗುಗಳಾದ ಅಭಿಷೇಕ್ ಮತ್ತು ಐಶ್ವರ್ಯರ ಚಿಕಿತ್ಸೆಗೆ ಸಹಾಯ ಮಾಡಲಿಚ್ಛಿಸುವ ಸಹೃದಯಿಗಳು ಕೆಳಕಂಡ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದು.
Name: Anitha Alias Amitha
Bank : Bank of Baroda
Account no : 71250100010036
IFSC : BARB0VJKDKA
Branch : Kalladka
Google pay no: 9740169971
Mangalore Both Children suffer kidney failure and are suffering at Ks Hedge Hospital in Derlakatte in Ullal, Mother seeks help from people for their medical expenses.
03-05-26 01:30 pm
HK News Staffer
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ; ರಾತ್ರಿಯ...
03-05-26 12:34 pm
2028ರ ಅಸೆಂಬ್ಲಿಯತ್ತ ಕಾಂಗ್ರೆಸ್ ಹೈಕಮಾಂಡ್ ದೃಷ್ಟಿ...
02-05-26 06:35 pm
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
04-05-26 11:11 am
HK News Staffer
ಪೆಸಿಫಿಕ್ ಸಾಗರದಲ್ಲಿ ಎಲ್ ನಿನೋ ಎಫೆಕ್ಟ್ ; ತೀವ್ರ ಬ...
03-05-26 05:18 pm
ಯುದ್ಧ ನಮ್ಮ ಆಯ್ಕೆಯಲ್ಲ, ಹೇರಲ್ಪಟ್ಟದ್ದು.. ; ಇರಾನ್...
03-05-26 02:35 pm
ದೇಶಾದ್ಯಂತ ಮೊಬೈಲ್ಗಳಿಗೆ ಎಚ್ಚರಿಕೆ ಧ್ವನಿ; ‘ಸೆಲ್...
02-05-26 08:26 pm
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
03-05-26 09:19 pm
HK News Staffer
ವಿಶೇಷ ಪೂಜೆಗೆ ಬೆತ್ತಲೆ ಫೋಟೊ ಕಳಿಸು, 30 ಲಕ್ಷ ಕೊಡ್...
03-05-26 02:31 pm
ಮಕ್ಕಳನ್ನು ರಕ್ಷಿಸಲು ಹೋಗಿ 2 ತಿಂಗಳ ಗರ್ಭಿಣಿ ಜಲಸಮಾ...
02-05-26 08:35 pm
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm