ಬ್ರೇಕಿಂಗ್ ನ್ಯೂಸ್
10-07-22 02:07 pm Mangalore Correspondent ಕರಾವಳಿ
ಪುತ್ತೂರು, ಜುಲೈ 10: ಕಾಣಿಯೂರು ಹೊಳೆಗೆ ಬಿದ್ದ ಕಾರನ್ನು ಅಗ್ನಿಶಾಮಕ ಸಿಬಂದಿ ಪತ್ತೆ ಮಾಡಿದ್ದು ಹಗ್ಗ ಕಟ್ಟಿ ಹೊಳೆಯಿಂದ ಮೇಲಕ್ಕೆ ಎಳೆದಿದ್ದಾರೆ. ಅದರಲ್ಲಿ ಇಬ್ಬರು ಯುವಕರಿದ್ದು ವಿಟ್ಲದ ನಿವಾಸಿಗಳೆಂದು ಪತ್ತೆ ಮಾಡಲಾಗಿದೆ.
ಕಾರಿನಲ್ಲಿದ್ದವರು ವಿಟ್ಲ ಬಳಿಯ ಕುಂಡಡ್ಕ ನಿವಾಸಿ ಧನುಷ್ (26) ಮತ್ತು ಆತನ ಸೋದರ ಸಂಬಂಧಿ ಮಂಜೇಶ್ವರ ಮೂಲದ ಧನುಷ್ (21) ಎಂದು ಪತ್ತೆ ಮಾಡಲಾಗಿದೆ. ಅವರ ಪತ್ತೆಗಾಗಿ ಸ್ಥಳೀಯ ಮುಳುಗು ತಜ್ಞರು, ಅಗ್ನಿಶಾಮಕ ದಳ ಹುಡುಕಾಟ ಕಾರ್ಯಾಚರಣೆ ಮುಂದುವರಿಸಿದೆ.


ಕಾರ್ಯಾಚರಣೆ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಮಸೀದಿ ಕಟ್ಟಡ ಸೇರಿದಂತೆ ಅಕ್ಕಪಕ್ಕದ ಕಟ್ಟಡಗಳ ಮೇಲೆ ನಿಂತು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಜನರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.


ಬೈತಡ್ಕ ಸೇತುವೆಯಿಂದ ಕಾರು ಹೊಳೆಗೆ ಬಿದ್ದಿದ್ದು ಅಲ್ಲಿಂದ 500 ಮೀಟರ್ ದೂರದಲ್ಲಿ ಕಾರು ಪತ್ತೆಯಾಗಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾದ ಸ್ಥಿತಿಯಲ್ಲಿದ್ದು ಸ್ಥಳೀಯರು, ಪೊಲೀಸರು ಹಗ್ಗ ಕಟ್ಟಿ ಮೇಲಕ್ಕೆತ್ತಿದ್ದಾರೆ. ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿ ಕಾರು ಹೊಳೆಗೆ ಬಿದ್ದಿತ್ತು.


ಇಬ್ಬರು ಯುವಕರು ವಿಟ್ಲ ಕಡೆಯಿಂದ ಶನಿವಾರ ರಾತ್ರಿ ಪುತ್ತೂರಿಗೆ ತೆರಳಿದ್ದರು. ಬೆಳಗ್ಗೆಯೇ ಕಾರು ಬಿದ್ದಿರುವುದು ಗೊತ್ತಾಗಿದೆ. ಇಬ್ಬರದ್ದೂ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಘಟನಾ ಸ್ಥಳಕ್ಕೆ ಬಂದಿದ್ದ ಯುವಕರ ಸಂಬಂಧಿಕರು ತಿಳಿಸಿದ್ದಾರೆ.


ಶನಿವಾರ ಮಧ್ಯರಾತ್ರಿ 12 ಗಂಟೆ ವೇಳೆಗೆ ಕಾರು ಕಾಣಿಯೂರಿನ ಬೈತಡ್ಕದಲ್ಲಿ ಹೊಳೆಗೆ ಬಿದ್ದಿತ್ತು. ಈ ವಿಚಾರ ಯಾರದೇ ಗಮನಕ್ಕೆ ಬಂದಿರಲಿಲ್ಲ. ಬೆಳಗ್ಗೆ ಕಾರಿನ ಬಾನೆಟ್ ಭಾಗ ಹೊಳೆಯಲ್ಲಿ ಕಂಡುಬಂದಿದ್ದು ಸ್ಥಳೀಯರು ಪಕ್ಕದ ಮಸೀದಿ ಕಟ್ಟಡದ ಸಿಸಿಟಿವಿಯಲ್ಲಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ, ಮಸೀದಿ ಸಿಸಿ ಕ್ಯಾಮರಾದಲ್ಲಿ ಕಾರು ವೇಗವಾಗಿ ಬಂದು ಹೊಳೆಗೆ ಬೀಳುತ್ತಿರುವ ದೃಶ್ಯ ಸೆರೆಯಾಗಿತ್ತು. ಕಾಣಿಯೂರು ಹೊಳೆ ಮುಂದೆ ಕುಮಾರಧಾರಾ ನದಿಗೆ ಸೇರುತ್ತಿದ್ದು ಮಳೆಯಿಂದಾಗಿ ಉಕ್ಕಿ ಹರಿಯುತ್ತಿದೆ. ಇಬ್ಬರು ಯುವಕರು ಹೊಳೆಯಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಮಧ್ಯರಾತ್ರಿ ಹೊಳೆಗೆ ಬಿದ್ದ ಕಾರು ; ಕಾಣಿಯೂರು ಹೊಳೆಯಲ್ಲಿ ಅಗ್ನಿಶಾಮಕ ದಳ ಹುಡುಕಾಟ, ಕಾರಿನಲ್ಲಿ ಮೂವರಿದ್ದ ಶಂಕೆ !
Speeding car falls into river in Puttur, car found, two youths from Vitla missing, search is on. Last night as they were passing a bridge the car lost control and fell into the river. The fire brigade team after extreme search in the rains found the car. But the youths are said to be washed away due to heavy rains.
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 10:57 am
HK News Staffer
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm