ಬ್ರೇಕಿಂಗ್ ನ್ಯೂಸ್
13-07-22 07:14 pm Mangalore Correspondent ಕರಾವಳಿ
ಮಂಗಳೂರು, ಜುಲೈ 13: ಕರ್ತವ್ಯದ ಅವಧಿಯಲ್ಲಿ ಭ್ರಷ್ಟಾಚಾರ ಎಸಗಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದ ನೀರಾವರಿ ಇಲಾಖೆಯ ನಿವೃತ್ತ ಇಂಜಿನಿಯರ್ ಒಬ್ಬರಿಗೆ ಮಂಗಳೂರಿನ ನ್ಯಾಯಾಲಯ ಆರು ವರ್ಷಗಳ ಸಾದಾ ಶಿಕ್ಷೆ ಮತ್ತು 2.5 ಕೋಟಿ ರೂಪಾಯಿ ದಂಡ ವಿಧಿಸಿದೆ.
ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ.ಜಕಾತಿ ಈ ಆದೇಶ ಮಾಡಿದ್ದಾರೆ. ಮಂಗಳೂರಿನ ಸಣ್ಣ ನೀರಾವರಿ ಇಲಾಖೆಯಲ್ಲಿ ಎಕ್ಸಿಕ್ಯುಟಿವ್ ಇಂಜಿನಿಯರ್ ಆಗಿದ್ದ ಎನ್.ಟಿ.ರಾಜಗೋಪಾಲ್ ಎಂಬವರು ಶಿಕ್ಷೆಗೊಳಗಾದವರು.
2010ರ ಮಾರ್ಚ್ 18ರಂದು ಆಗಿನ ಲೋಕಾಯುಕ್ತ ಡಿವೈಎಸ್ಪಿಯಾಗಿದ್ದ ಸದಾನಂದ ವೆರ್ಣೇಕರ್ ಉಡುಪಿ ಮತ್ತು ಮಂಗಳೂರಿನಲ್ಲಿ ಏಕಕಾಲದಲ್ಲಿ ಭ್ರಷ್ಟ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಆಗ ಮಂಗಳೂರಿನ ಸಣ್ಣ ನೀರಾವರಿ ಇಲಾಖೆಯಲ್ಲಿದ್ದ ಎನ್.ಟಿ.ರಾಜಗೋಪಾಲ್ ಅದಕ್ಕೂ ಹಿಂದೆ ಉಡುಪಿಯಲ್ಲಿ ಸುದೀರ್ಘ ಅವಧಿ ಕರ್ತವ್ಯದಲ್ಲಿದ್ದರು. ಉಡುಪಿಯಲ್ಲಿದ್ದಾಗ ಅಂಬಾಗಿಲು, ಕನ್ನರ್ಪಾಡಿ, ಕಿನ್ನಿಬಾಗಿಲುವಿನಲ್ಲಿ ಮನೆ ನಿರ್ಮಿಸಿಕೊಂಡಿದ್ದರು. ಅಲ್ಲದೆ, ಶಿವಮೊಗ್ಗದಲ್ಲಿಯೂ ಮನೆ ನಿರ್ಮಿಸಿದ್ದು, ನಾಲ್ಕು ಮನೆ ಮತ್ತು ಕಚೇರಿಗಳಿಗೆ ಲೋಕಾಯುಕ್ತ ದಾಳಿ ನಡೆದಿತ್ತು. ಅಪಾರ ಪ್ರಮಾಣದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಪತ್ತೆಯಾಗಿದ್ದವು. ಕಚೇರಿಯಲ್ಲಿ ಎರಡು ಕ್ರೆಡಿಟ್ ಕಾರ್ಡ್ ಮತ್ತು 20 ಸಾವಿರ ನಗದು ಪತ್ತೆಯಾಗಿತ್ತು.

ಅದೇ ದಿನ ರಾಜ್ಯದ ಹತ್ತಕ್ಕೂ ಹೆಚ್ಚು ಅಧಿಕಾರಿಗಳ ಮೇಲೆ ಆಗಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ನೇತೃತ್ವದಲ್ಲಿ ದಾಳಿಯಾಗಿತ್ತು. ಅದರಲ್ಲಿ ಅತಿ ಹೆಚ್ಚು ಅಕ್ರಮ ಆಸ್ತಿ ಸಿಕ್ಕಿದ್ದು ಮಂಗಳೂರಿನಲ್ಲಿ ನೀರಾವರಿ ಇಂಜಿನಿಯರ್ ಆಗಿದ್ದ ಎನ್.ಟಿ.ರಾಜಗೋಪಾಲ್ ಬಳಿ. ಅಂದು ಒಂದೇ ದಿನ 1.26 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಪತ್ತೆ ಲೋಕಾಯುಕ್ತ ಪತ್ತೆ ಮಾಡಿತ್ತು. ಪ್ರಕರಣದ ಬಗ್ಗೆ ಬಳಿಕ ಮಂಗಳೂರಿನ ಲೋಕಾಯುಕ್ತ ಡಿವೈಎಸ್ಪಿ ಸದಾನಂದ ವರ್ಣೇಕರ್, ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಅಂತೂ 2022ರ ಜುಲೈ 12ರಂದು ಶಿಕ್ಷೆ ಘೋಷಣೆ ಮಾಡಿದೆ. ಅಲ್ಲದೆ, 2.5 ಕೋಟಿ ರೂ. ದಂಡ ತೆರಲು ತಪ್ಪಿದಲ್ಲಿ ಒಂದೂವರೆ ವರ್ಷ ಹೆಚ್ಚುವರಿಯಾಗಿ ಶಿಕ್ಷೆ ಅನುಭವಿಸಬೇಕೆಂದು ತೀರ್ಪಿನಲ್ಲಿ ಹೇಳಿದೆ. ಅಕ್ರಮ ಆಸ್ತಿ ಗಳಿಸಿದ್ದ ಅಧಿಕಾರಿಯ ಆಸ್ತಿಯನ್ನೇ ದಂಡದ ರೂಪದಲ್ಲಿ ಕಟ್ಟುವಂತೆ ವಿಧಿಸಿದ ಕೋರ್ಟ್ ತೀರ್ಪು ಅತ್ಯಂತ ವಿರಳ.
ಲೋಕಾಯುಕ್ತದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರವೀಂದ್ರ ಮುನ್ನಿಪ್ಪಾಡಿ ವಾದಿಸಿದ್ದರು. 2016ರ ಅಕ್ಟೋಬರ್ 30ರಂದು ಎನ್.ಟಿ.ರಾಜಗೋಪಾಲ್ ಯಾದಗಿರಿ ಜಿಲ್ಲೆಯಲ್ಲಿ ನೀರಾವರಿ ಇಲಾಖೆಯ ಇಂಜಿನಿಯರ್ ಆಗಿ ನಿವೃತ್ತರಾಗಿದ್ದರು. ಇದೀಗ ಕೋರ್ಟ್ ಶಿಕ್ಷೆ ಘೋಷಣೆ ಮಾಡಿರುವುದರಿಂದ ರಾಜಗೋಪಾಲ್ ಅವರನ್ನು ಮಂಗಳೂರಿನ ಜಿಲ್ಲಾ ಕಾರಾಗೃಹಕ್ಕೆ ತಳ್ಳಲಾಗಿದೆ.
A retired executive engineer of the minor Irrigation department was sentenced to six years of simple imprisonment and a penalty of Rs 2.5 crore by a city court.
Judge B B Jakati of the Third Additional District and Sessions Court of Mangaluru sentenced N T Rajagopal in a disproportionate asset case.The Karnataka Lokayukta Police had filed a chargesheet against N T Rajagopal on March 17, 2010 stating that the accused had amassed wealth disproportionate to his known source of income.
11-02-26 11:02 pm
HK News Desk
Breast Cancer Awareness Drive Goes Nationwide...
11-02-26 01:34 pm
ಸ್ತನ ಕ್ಯಾನ್ಸರ್ ಬಗ್ಗೆ ದೇಶವ್ಯಾಪಿ ಜಾಗೃತಿ ; ಕಲಬರಗ...
11-02-26 01:09 pm
ಛೆ… ಇವಳೆಂಥ ಮಗಳು! ಅಮ್ಮನ ಖಾಸಗಿ ಅಂಗ, ದೊಡ್ಡಮ್ಮನ ಬ...
09-02-26 07:20 pm
ಶಿವಮೊಗ್ಗದ ಕಾರು ಚಾಲಕನಲ್ಲಿ 19 ಬಾಡಿಗೆ ಬ್ಯಾಂಕ್ ಖಾ...
09-02-26 01:30 pm
12-02-26 10:51 pm
HK News Desk
ನಕಲಿ ಷೇರು ಹೂಡಿಕೆ ಆ್ಯಪ್ ಹೆಸರಲ್ಲಿ ದುಪ್ಪಟ್ಟು ಲಾಭ...
12-02-26 09:31 pm
ಅಮೆರಿಕದಲ್ಲಿ ಪೊಲೀಸ್ ಅಧಿಕಾರಿ ಕಾರು ಗುದ್ದಿ ಭಾರತೀಯ...
12-02-26 09:19 pm
260 ಜನರನ್ನು ಬಲಿ ಪಡೆದ ಅಹಮದಾಬಾದ್ ವಿಮಾನ ಪತನ ; ಇಂ...
12-02-26 01:40 pm
ಡಿಕೆ - ಸಿದ್ದು ಪವರ್ ಫೈಟ್ ; ‘ರಾಜಕಾರಣ ಮಾಡೋಕೆ ಬಂದ...
12-02-26 01:09 pm
13-02-26 01:06 am
HK News Desk
ಮೋದಿ ಹೆಸರಲ್ಲಿ ಹತ್ತು ನಮೋ ಕುಟೀರ ನಿರ್ಮಾಣ ಯೋಜನೆ ;...
12-02-26 10:36 pm
ಲವ್ ಜಿಹಾದ್ ಆರೋಪ ; ಸುರತ್ಕಲ್ ಲೇಡಿಸ್ ಪಿಜಿಯಲ್ಲಿ ಹ...
12-02-26 05:55 pm
ಕೈಗಾರಿಕೆಗಳ ಮಾಲಿನ್ಯ ತಡೆಯಲು ಅಧಿಕಾರಿಗಳು ವಿಫಲ ; ವ...
12-02-26 04:05 pm
ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ದಿಢೀರ್ ಬೆಂಕಿ ; ರ...
12-02-26 03:38 pm
13-02-26 12:54 am
HK News Desk
ವಿಷದ ಲಡ್ಡು ತಿನ್ನಿಸಿ 6 ಜನರ ಹತ್ಯೆ ; ದೆಹಲಿಯಲ್ಲಿ...
12-02-26 02:34 pm
ಫ್ಲ್ಯಾಟ್, ಚಿನ್ನದ ನೆಪದಲ್ಲಿ ಮುಂಬೈನ ಮಹಿಳಾ ಉದ್ಯಮಿ...
11-02-26 10:54 pm
ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ಬೆಲೆಯ ಜಮೀನು ಗುಳು...
11-02-26 09:10 pm
ಸಚಿವ ಬೈರತಿ ಸುರೇಶ್ ಕಚೇರಿಯಲ್ಲೇ 300 ಗ್ರಾಂ ಚಿನ್ನಾ...
10-02-26 09:05 pm